ಐತೂರು ಗ್ರಾಮ

ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸುಂಕದಕಟ್ಟೆ

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆಯ ಸುಂಕದಕಟ್ಟೆ ಎಂಬಲ್ಲಿ ರಸ್ತೆಯ ಎಡ ಬದಿಯಲ್ಲಿ ೧೦೦ ಮೀಟರ್ ಅಂತರದಲ್ಲಿ ಈ ಭಜನಾ ಮಂಡಳಿಯಿದೆ. ೧೯೭೮ರಲ್ಲಿ ಜೋತಿಷಿ ಆಧಾರದಲ್ಲೂ ರಾಶಿ ಇಟ್ಟಾಗ ದೇವಿಯ ಶಕ್ತಿ ಇರುವುದಾಗಿ ಕಂಡು ಬಂತು. ಇದರಂತೆ ಹುತ್ತಕ್ಕೆ ಚಪ್ಪರ ಹಾಕಿ ಪ್ರತೀ ಶುಕ್ರವಾರ ಭಜನೆಯ ಮುಖೇನ ಆರಾಧನೆಯನ್ನು ಪ್ರಾರಂಭಿಸಲಾಯಿತು. ೧೯೮೦ರಲ್ಲಿ ಗುಡಿಯೊಂದನ್ನು ನಿರ್ಮಿಸಿ, ದೇವಿಯ ಮೂರ್ತಿಯನ್ನು ಇಟ್ಟು ಆರಾಧಿಸುತ್ತಾ ಬರಲಾಯಿತು. ಇಲ್ಲಿ ಪ್ರತೀ ಮಂಗಳವಾರ ಹಗಲು ಪೂಜೆ ಮತ್ತು ಶುಕ್ರವಾರ ರಾತ್ರಿ ಭಜನೆ ಮತ್ತು ಪೂಜೆ ನಡೆಯುತ್ತದೆ. ಸೇವಾ ಭಜನೆ, ಹಣ್ಣುಕಾಯಿ, ಕುಂಕುಮಾರ್ಚನೆ, ಮಂಗಳಾರತಿ, ಪಂಚಕಜ್ಜಾಯ, ಹೂವಿನ ಪೂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ನವರಾತ್ರಿ ಪೂಜೆ ಇತ್ಯಾದಿ ಸೇವೆಗಳನ್ನು ನಡೆಸಲಾಗುತ್ತದೆ. ವಾರ್ಷಿಕೋತ್ಸವ ದಿನದಂದು ನಿಶಿಪೂರ್ಣ ಭಜನೆ ನಡೆಯುತ್ತದೆ. ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಪೂಜೆ, ನವರಾತ್ರಿ ಪೂಜೆಯನ್ನು ನಡೆಸಲಾಗುತ್ತದೆ.
ಹೊನ್ನಪ್ಪ ಗೌಡ – ಅಧ್ಯಕ್ಷರು (೯೦೦೮೯೦೬೭೧೭), ದುಗ್ಗಪ್ಪ ಗೌಡ – ಕಾರ್ಯದರ್ಶಿ,
ಸುಬ್ಬಣ್ಣ ಭಟ್ – ಕೋಶಾಧಿಕಾರಿ

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ಶ್ರೀ ಉಳ್ಳಾಕುಲು ದೈವಗಳ ಚಾವಡಿ ಮುಜೂರು ಸುಂಕದಕಟ್ಟೆ (ಕರುಣಾಕರ್) 9008614601
* ರಾಜನ್ ದೈವ ದೈವಸ್ಥಾನ ಸುಳ್ಯ ಐತ್ತೂರು
* ಶಿರಾಡಿ ದೈವಸ್ಥಾನ ಅಂತಿಬೆಟ್ಟು (ಪೂವಪ್ಪ ಗೌಡ) 9483776342, 9481845269
* ಆದಿ ಶಿರಾಡಿ ದೈವಸ್ಥಾನ ಕೇರ್ಪಡ (ಸುಂದರ ಗೌಡ) 9483286047
* ಶಿರಾಡಿ ದೈವಸ್ಥಾನ ಮುಜೂರು (ನಾಗಣ್ಣ ಗೌಡ ನೆಟ್ಟಣಬೈಲು)