ಶ್ರೀ ಮಹಾದೇವಿ ದೇವಸ್ಥಾನ ಕಬಕ, ಕಬಕ ಅಂಚೆ, ಪುತ್ತೂರು ದ.ಕ.
ಕಬಕ ಹಾಗೂ ಆಸುಪಾಸಿನ ಹಿಂದೂ ಬಾಂಧವರ ಶ್ರಮದ ಫಲವಾಗಿ ಶ್ರೀ ಮಹಾದೇವಿ ಭಜನಾ ಮಂಡಳಿಯು ಜ. ೧, ೧೯೬೯ರಂದು ಆರಂಭಗೊಂಡಿತು. ಪ್ರತೀ ಶುಕ್ರವಾರ ಶ್ರೀ ಸಿಂಹವಾಹಿನಿ ದೇವಿಯ ಭಾವಚಿತ್ರವಿರಿಸಿ ಭಜನೆಯನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಹತ್ತು ತಿಂಗಳಲ್ಲಿ ಶ್ರೀ ದೇವಿಗೆ ಗರ್ಭಗುಡಿ ಹಾಗೂ ಮಹಾಗಣಪತಿ ಮತ್ತು ಸುಬ್ರಹ್ಮಣ್ಯ ಗುಡಿಯನ್ನು ನಿರ್ಮಿಸಿ ತಾ. ೧೫-೧೦-೧೯೬೯ರಂದು ವಿಗ್ರಹಗಳನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿ ಭಜನಾ ಮಂದಿರವು ದೇವಸ್ಥಾನವಾಗಿ ಜನ್ಮ ತಾಳಿತು.
ಅಳಕೆಮಜಲು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಮಂದಿರಕ್ಕೆ ಆಗಮಿಸುವ ಸಂಪ್ರದಾಯವೂ ಇದೆ. ನವರಾತ್ರಿ ದಿನಗಳಲ್ಲಿ ಏಕಾದಶಿ ಪೂಜೆ, ವಿಜಯದಶಮಿಯಲ್ಲಿ ಆಯುಧಪೂಜೆ, ಅಷ್ಟಾವಧಾನ ಸೇವೆ, ತ್ರಿಮಧುರ ಸೇವೆ, ಭಜನೆ, ಕುಂಕುಮಾರ್ಚನೆ ಮುಂತಾದ ಸೇವೆಗಳು ನಡೆಯುತ್ತವೆ. ನಾಗತಂಬಿಲ, ಚೌತಿ, ನಾಗರ ಪಂಚಮಿ, ಷಷ್ಠಿ, ಕಿರುಷಷ್ಠಿ ಮೊದಲಾದ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ತಿಂಗಳ ಕೊನೆಯ ಶುಕ್ರವಾರ ಹೂವಿನ ಪೂಜೆ ನಡೆಯುತ್ತದೆ. ೧೯೯೯ರಲ್ಲಿ ಶ್ರೀ ಮಹಾದೇವಿ ಕಲಾಮಂದಿರವನ್ನು ನಿರ್ಮಿಸಿ ದೇವರಿಗೆ ಸಮರ್ಪಿಸಲಾಗಿದೆ.
ಕಬಕ ಪ್ರಾಚೀನ ಕಾಲದಲ್ಲಿ ವಿಟ್ಲ ಮತ್ತು ಪುತ್ತೂರು ಸೀಮೆಯ ಜೈನ ಮನೆತನದ ಬಳ್ಳಾಲ ಅರಸುಗಳ ಆಳ್ವಿಕೆಗೆ ಸೇರಿತ್ತು. ಕಬಕಕ್ಕೆ ಅಡ್ಯಾರಗೋಳಿ ಎಂಬ ಹೆಸರಿತ್ತಂತೆ. ನಂತರ ಬಲ್ಲಾಳ ಬೀಡು ನಶಿಸಿ ಅವರ ಅಡ್ಯಾಲಯ ದೈವದ ಚಾವಡಿ ಜೀರ್ಣಾವಸ್ಥೆಗೆ ತಲುಪಿತು. ಈಗ ಈ ದೈವವನ್ನು ಮಂದಿರದ ಮುಂಭಾಗದಲ್ಲಿ ದೀಪ ಇಟ್ಟು ಆರಾಧಿಸುತ್ತಾ ಬರಲಾಗುತ್ತಿದೆ.
ಅಧ್ಯಕ್ಷರು – ಸುರೇಶ್ ರಾವ್, ಕಾರ್ಯದರ್ಶಿ – ವಿ.ಸಿ. ನೈಕ್
ಕಾರ್ಜಾಲು ಶ್ರೀ ಧೂಮಾವತಿ ದೈವಸ್ಥಾನ, ಕಬಕ ಗ್ರಾಮ, ಕಾರ್ಜಾಲು, ನೆಹರು ನಗರ, ಪುತ್ತೂರು
ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಮೂಲ ಸ್ಥಾನ ಕಬಕ ಗ್ರಾಮದ ಕಾರ್ಜಾಲ್ ಗುತ್ತು. ಜೈನ ಮನೆತನಗಳಲ್ಲಿ ಕಾರ್ಜಾಲ್ ಗುತ್ತು ಕೂಡಾ ತುಂಬಾ ಹೆಸರುವಾಸಿಯಾದಂತಹ ಮನೆತನವಾಗಿದೆ. ಅನಾದಿ ಕಾಲದಿಂದಲೂ ದಾನ ಧರ್ಮಗಳಿಗೆ ಪ್ರಾಶಸ್ತ್ಯವನ್ನು ಕೊಡುತ್ತಾ ಬಂದಿರುತ್ತದೆ. ಕಾರ್ಜಾಲು ಗುತ್ತಿನ ಗುತ್ತು ದೈವ, ಗ್ರಾಮದ ರಕ್ಷಣೆಯ ಅಧಿಕಾರವನ್ನು ಹೊಂದಿರುವ ಗ್ರಾಮ ದೈವ ಜುಮಾದಿ ಎಂದು ಗ್ರಾಮದ ಭಕ್ತ ಜನರ ಆರಾಧ್ಯ ದೈವವಾಗಿದೆ. ದೈವ ಒರ್ಮಲ್ತಾಯ ಎಂಬುದು ಈ ದೈವದ ಇನ್ನೊಂದು ಹೆಸರು. ಈ ದೈವದ ಮೂಲ ಸಾನಿಧ್ಯ (ಸಂಧಿ ಪಾಡ್ದನಗಳಿಂದ ತಿಳಿದು ಬರುವಂತೆ) ಕಲ್ಲೇಗ ಎಂಬ ಊರಿನಲ್ಲಿ. ಆ ಗ್ರಾಮದಲ್ಲಿ ಈ ಕೆಳಗಿನ ಕಲ್ಲೇಗ, ಮೇಲಿನ ಕಲ್ಲೇಗ ಎಂಬ ೨ ಮನೆತನಗಳಿದ್ದವು. ಅದು ಈಗ ಕಲ್ಲೇಗ ಮನೆತನದ ಮೂಲ ತರವಾಡಾದ ಕಾರ್ಜಾಲು ಗುತ್ತು ಎಂದು ಕರೆಯುವ ಮನೆತನವಾಗಿದೆ. ರಾಜಾಶ್ರಯದಲ್ಲಿ ಬಲಿ ಭೋಗಗಳನ್ನು ಸ್ವೀಕರಿಸಿ ತನ್ನ ರಾಜ್ಯಾಂಗಣದ ಒಳಗೆ ಧರ್ಮವನ್ನು ಎತ್ತಿ ಅಧರ್ಮವನ್ನು ತುಳಿದು ಧರ್ಮರಕ್ಷಕನಾಗಿ, ಬೀಡಿನ ಕಾರ್‍ಯವ್ಯಾಪ್ತಿಗೆ ಬರುವಂತಹ ಸಮಸ್ತ ಭಕ್ತಾದಿಗಳ ಪ್ರೀತಿ, ನಂಬಿಕೆಗಳನ್ನು ಉಳಿಸುತ್ತಾ, ಭಕ್ತಾದಿಗಳ ಅಭೀಷ್ಟಗಳನ್ನು ನೆರವೇರಿಸುತ್ತಾ ತನ್ನ ಕಲೆ ಕಾರಣಿಕಗಳಿಂದ ಸಮಸ್ತ ಭಕ್ತರ ಆರಾಧ್ಯ ದೈವ ಜುಮಾದಿ ಎಂದು ಪ್ರಖ್ಯಾತಿಯನ್ನು ಹೊಂದಿದ ಮಹಾಶಕ್ತಿಯಾಗಿತ್ತು.
ಪರಮ ಪವಿತ್ರವಾದಂತಹ ಈ ತುಳುನಾಡಿನಲ್ಲಿ ಧರ್ಮದ ರಕ್ಷಣೆಗಾಗಿ ಹಲವು ಕ್ಷೇತ್ರಗಳಲ್ಲಿ ನೆಲೆ ನಿಂತ ಉದಾಹರಣೆಗಳಿವೆ. ಮೂಡಾಯಿ ಕುಡುಮದಲ್ಲಿ (ಧರ್ಮಸ್ಥಳ) ಪೆರ್ಗಡೆಯವರೂ, ಕಡಮ (ಕಡಬ)ದಲ್ಲಿ ಕರ್ನಂತಾಯರೂ ಈ ದೈವಕ್ಕೆ ಬಲಿ ಭೋಗಗಳನ್ನು ಕೊಟ್ಟಿರುತ್ತಾರೆಂದೂ ತಿಳಿದುಬರುತ್ತದೆ. ಅದೇ ರೀತಿ (ಪಡ್ಡಾಯಿ ಬೊಟ್ಟು, ಪುದ್ಯೊಟ್ಟುದ ಗುತ್ತುಡು ದೇವು ಪೂಂಜೆ, ದೇವಣ್ಣಾತಿಕಾರಿ ಮಲ್ತಿನ ಕಟ್ಟ್) ದೇವು ಪೂಂಜನ ಚರಿತ್ರೆಯಲ್ಲಿ ದೈವ ಜುಮಾದಿಯನ್ನು ಆರಾಧಿಸಿದ ವಿಷಯ ತಿಳಿದುಬರುತ್ತದೆ.
ನೀಲೇಶ್ವರ ಕ್ಷೇತ್ರದಲ್ಲಿ. ಅಂತಹ ಮಹಾ ಪುರುಷರ ನಂಬಿಕೆಯ ದೈವವಾಗಿ, ತಲೆ ತಲಾಂತರಗಳಿಂದ ಆರಾಧನೆಯನ್ನು ದೈವ ಜುಮಾದಿ ಸ್ವೀಕರಿಸುತ್ತಾ ಬಂದಿರುತ್ತದೆ.
ಇರ್ವತ್ತೂರು ಮನೆತನದಲ್ಲಿ ಪೂರ್ವಕಾಲದಲ್ಲಿ ಕಾಂತಣ್ಣಾಧಿಕಾರಿ ಎಂಬ ಗುರಿಕಾರರ ಕಾಲದಲ್ಲಿ ದೈವ ಜುಮಾದಿ ಬಾರಿಕೆಯ ನಂಬಿಕೆಗೆ ಪಾತ್ರವಾಗಿದೆ.
ತದನಂತರ ಪಣಂಬೂರಿನ (ಸಾರಾಳ ಪಟ್ಟ) ಸಾವಿರ ಆಳಿನ ಪಟ್ಟದಲ್ಲಿ ಜೈನ ಮನೆತನಗಳಲ್ಲಿ ಒಂದಾದಂತಹ ರತನ ಬಳ್ಳಾಲರ ಪಟ್ಟದ ದೈವವಾಗಿ ನೆಲೆಯಾಗಿತ್ತು ಎಂಬುದು ತಿಳಿದುಬರುತ್ತದೆ.
ಅಜಿತ್ ಕುಮಾರ್ ಜೈನ್ – ಆಡಳಿತ ಮೊಕ್ತೇಸರ (ಮೊ: ೯೪೮೨೨೫೧೫೧೯)
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠ ಪೋಳ್ಯ ಶ್ರೀನಿವಾಸಪುರಂ ಅಂಚೆ ಕಬಕ ಪುತ್ತೂರು 08251-281444, 9632237067
* ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಕೂವೆತ್ತಿಲ ಇಡ್ಕಿದು ಅಂಚೆ ಕಬಕ ಗ್ರಾಮ-574220. 9480065057, 08251-281081
* ಶ್ರೀ ಸಪರಿವಾರ ಸೋಮಲಿಂಗೇಶ್ವರ ದೇವಸ್ಥಾನ ಶಿವನಗರ ಕಬಕ
* ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಶಿವನಗರ ಮಂಜುಲ್ಪಡ್ಪು 230708
* ಶ್ರೀ ಪುಣ್ಯ ಕುಮಾರ ಮಾಡ ಮುರ
* ಶ್ರೀ ರುದ್ರನಾಥೇಶ್ವರ ದೇವಸ್ಥಾನ ಶಿವನಗರ
* ಶ್ರೀ ಮಹಾದೇವಿ ಭಜನಾ ಮಂದಿರ ಅರ್ಕ ಕುಡಿಪ್ಪಾಡಿ ಪುತ್ತೂರು ಕಾರ್ಜಾಲು ಶ್ರೀ ಧೂಮಾವತಿ ದೈವಸ್ಥಾನ ಕಬಕ ಗ್ರಾಮ ಕಾರ್ಜಾಲು ನೆಹರುನಗರ ಪುತ್ತೂರು-574203