ಕುಂತೂರು ಗ್ರಾಮ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕುಂತೂರು, ಅಂಚೆ ಪೆರಾಬೆ, ಪುತ್ತೂರು ದ.ಕ. 574285, ಮೊ: 9731297302

ಉಪ್ಪಿನಂಗಡಿಯಿಂದ 18 ಕಿ.ಮೀ. ದೂರದ ಕುಂತೂರಿನಿಂದ ೩ ಕಿ.ಮೀ. ದೂರದ ಅರ್ಬಿ ಎಂಬಲ್ಲಿ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಿನ ಇತಿಹಾಸವುಳ್ಳ ಈ ದೇವಸ್ಥಾನವು ಈಗಿರುವ ಸ್ಥಳದಲ್ಲಿ ಪ್ರತಿಷ್ಠೆಗೊಂಡು ಅಂದಾಜು 600 ವರ್ಷಗಳಷ್ಟು ಆಗಬಹುದು. ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು 1910ರಲ್ಲಿ ನವೀಕರಿಸಿ ಬ್ರಹ್ಮಕಲಶದೊಂದಿಗೆ ಪುನಃಶ್ಚೇತನಗೊಳಿಸಲಾಯಿತು.
ಗಣಪತಿ, ನಾಗದೇವರು, ಹಲ್ಲತ್ತಾಯ ಪಂಜುರ್ಲಿ ಮೊದಲಾದ ಶಕ್ತಿಗಳನ್ನು ಆರಾಧಿಸಲಾಗುತ್ತಿದೆ. ಮಾಘ ಮಾಸದ ಬಿದಿಗೆಯಲ್ಲಿ ವಾರ್ಷಿಕ ಜಾತ್ರೆ, ಮಹಾಶಿವರಾತ್ರಿ, ವಿಷು ಆಚರಣೆ, ನಾಗರಪಂಚಮಿ, ದುರ್ಗಾಪೂಜೆ, ಗಣೇಶ ಚತುರ್ಥಿ, ವರ್ಷಕ್ಕೊಮ್ಮೆ ಸತ್ಯನಾರಾಯಣ ಪೂಜೆ, ತಂಬಿಲ ಸೇವೆ ಮೊದಲಾದ ಉತ್ಸವಗಳು ದೇವಳದಲ್ಲಿ ಜರಗುತ್ತದೆ.
ಆಡಳಿತ ಸಮಿತಿ: ಎಂ. ನಾರಾಯಣ ಆಚಾರ್ ಮರುವಂತಿಲ, ಬಿ. ಮಹಾಬಲ ಶೆಟ್ಟಿ ಬಾಲಾಜೆ, ಪ್ರವೀಣ್ ಆಳ್ವ ನೂಜಿಲ, ಎಸ್.ಎಲ್. ಆನಂದ ಶೆಟ್ಟಿ ಶೇಡಿ, ಲೋಕಯ್ಯ ಗೌಡ ಅರ್ಬಿ, ಗುರುಪ್ರಸಾದ್ ನಿಡ್ವಣ್ಣಾಯ ಅರ್ಬಿ, ಜಿ.ಪಿ. ಜನಾರ್ಧನ ರೈ ಗುತ್ತುಪಾಲು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಶಾರದ ಭಜನಾ ಮಂದಿರ ಕುಂತೂರು
* ಶ್ರೀರಾಜನ್ ದೈವಸ್ಥಾನ ನೆರೊಳ್‌ಪಲ್ಕೆ