ಕುಟ್ರುಪ್ಪಾಡಿ ಗ್ರಾಮ

ಕೇಪು ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವಸ್ಥಾನ, ಫೋನ್ : 9448953614


ಕಡಬ ಪೇರಡ್ಕದಿಂದ ೧ ಕಿ.ಮೀ. ಮುಂದೆ ಮರ್ದಾಳ ರಸ್ತೆಯಲ್ಲಿ ಚಲಿಸಿದರೆ ಈ ಕೇಪು ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವಸ್ಥಾನ ಸಿಗುತ್ತದೆ. ಲಕ್ಷ್ಮೀ ಜನಾರ್ದನ, ಮಹಾಗಣಪತಿ, ಧೂಮಾವತಿ, ರಕ್ತೇಶ್ವರಿ, ಉಳ್ಳಾಕುಲು, ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ನಾಗ ಇಲ್ಲಿ ಆರಾಧಿಸಲ್ಪಡುವ ಶಕ್ತಿಗಳು. ಈ ದೇವಸ್ಥಾನಕ್ಕೆ ಸುಮಾರು ೮೦೦ ವರ್ಷಗಳ ಇತಿಹಾಸವಿದೆ.
ಸಂತಾನ ಭಾಗ್ಯವಿಲ್ಲದವರು ತೊಟ್ಟಿಲು ಮಗು ಹರಕೆಯೊತ್ತರೆ ಸಂತಾನ ಪ್ರಾಪ್ತಿ ಯಾಗುವುದೆಂಬ ನಂಬಿಕೆ ಇಲ್ಲಿದೆ. ಕಲ್ಯಾಣ ಪ್ರಾಪ್ತಿಗೂ ಇಲ್ಲಿ ಪ್ರಾರ್ಥಿಸಿದರೆ ನೆರವೇರುತ್ತದೆ ಎಂದು ಪ್ರತೀತಿ ಇದೆ.
ಆಡಳಿತ ಸಮಿತಿ ಅಧ್ಯಕ್ಷ-ಶಿವರಾಮ ಶೆಟ್ಟಿ ಕೇಪು, ಪ್ರಧಾನ ಕಾರ್ಯದರ್ಶಿ- ಚಿದಾನಂದ ಗೌಡ ಕೊಯಕ್ಕುರೆ.

ಕಡಬ ನಾಲೂರು ಶಂಕರನಾರಾಯಣ ದೇವಸ್ಥಾನ, ಮೊ: 9741469698, 9964962033

ಕಡಬದ ಕುಟ್ರುಪ್ಪಾಡಿ ಗ್ರಾಮದಲ್ಲಿರುವ `ನಾಲೂರು’ ಎಂಬಲ್ಲಿರುವ ಶಂಕರನಾರಾಯಣ ದೇವಸ್ಥಾನವು ಹನ್ನೊಂದು ಅಥವಾ ಹನ್ನೆರಡನೇ ಶತಮಾನದ್ದಾಗಿರಬಹುದೆಂದು ಹೇಳಲಾಗಿದೆ. ಇಲ್ಲಿನ ಶಿಲ್ಪ ಮತ್ತು ವಾಸ್ತು ಶಾಸ್ತ್ರವನ್ನಾಧರಿಸಿ ನೋಡಿದಾಗ ಇದು ತುಂಬಾ ಹಿರಿದಾದ ದೇವಾಲಯವಿದ್ದಂತೆ ಕಂಡು ಬರುತ್ತದೆ.
ನಾಲೂರಿನ ಶಂಕರನಾರಾಯಣ ದೇವಾಲಯವು ಉಡುಪಿಯ ಕುಂಜಾರಿನ ಶ್ರೀ ದುರ್ಗಾ ದೇವಸ್ಥಾನದಂತೆ ಒಂದು ಬೆಟ್ಟದ ಮೇಲೆ ಇದೆ. ಅತಿ ಭವ್ಯವಾದ ಮತ್ತು ಸೌಂದರ್ಯವುಳ್ಳ ರಮಣೀಯ ನೆಲೆಯಲ್ಲಿದೆ.
ಸುಮಾರು ೮೦೦-೯೦೦ ವರುಷಗಳ ಹಿಂದೆ ಕದಂಬ ಅರಸರಲ್ಲಿ ಕೊನೆ ಸಂತತಿಗಾರನಾದ ರಂಗರಾಜನು ಕಡಬ ಸಂಸ್ಥಾನದ ಆಳ್ವಿಕೆಯನ್ನು ವಹಿಸಿಕೊಂಡು, ಕೋಟೆಯಲ್ಲಿ ಮನೆ ದೇವರಿಗಾಗಿ ಪೂಜೆ ಮಾಡುತ್ತಿದ್ದ ಗಣಪತಿಯನ್ನು ಕಡಬದ ಬಳಿ ಇದ್ದ `ರಸಬಾವಿ’ಯ ಮೇಲೆ ಪ್ರತಿಷ್ಠಾಪಿಸಿ, ಶಂಕರನಾರಾಯಣನನ್ನು ನಾಲೂರಿನಲ್ಲಿ ಪ್ರತಿಷ್ಠಾಪಿಸಿ, ತನ್ನ ಸಂತತಿ ಸಹಿತವಾಗಿ ಕೇರಳಕ್ಕೆ ಹೋದ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೈಪಿಯತ್ತಿನ ಕಡಬ ಸಂಸ್ಥಾನದ ಬಗ್ಗೆ ಬರೆದಿರುವ ದಾಖಲೆಯಲ್ಲಿ ಉಲ್ಲೇಖವಾಗಿರುತ್ತದೆ. ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ಕೆತ್ತಲ್ಪಟ್ಟಿರುವ ಶಂಕರ ನಾರಾಯಣ ವಿಗ್ರಹವು, ಬಲಭಾಗದಲ್ಲಿ `ಈಶ್ವರನ ಅಂಶವನ್ನು ಎಡಭಾಗದಲ್ಲಿ ನಾರಾಯಣ ಅಂಶವನ್ನೂ ಹೊಂದಿರುತ್ತದೆ.
ದೇವರಿಗೆ ನಿತ್ಯ ಪೂಜೆ ನೆರವೇರುತ್ತದೆ. ಅಲ್ಲದೆ, ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರತೀ ಗುರುವಾರ ಊರಿನ ಎಲ್ಲಾ ಭಕ್ತಾದಿಗಳಿಂದ ಭಜನಾ ಸೇವೆ ಹಾಗೂ ವಿಶೇಷ ಪೂಜೆ ನಡೆಯುತ್ತದೆ. ಭಕ್ತಾದಿಗಳು ಪ್ರಾರ್ಥಿಸಿದ ಸಂಕಲ್ಪವನ್ನು ಶಂಕರನಾರಾಯಣ ದೇವರು ಈಡೇರಿಸಿದ, ಬಂದಿರುವ ಸಮಸ್ಯೆಗಳನ್ನು ಪರಿಹರಿಸಿದ ಉದಾಹರಣೆಗಳು ಸಾಕಷ್ಟಿದ್ದು ಈಗಲೂ ಮುಂದುವರಿಯುತ್ತದೆ.
ಗೌರವಾಧ್ಯಕ್ಷರು-ಎನ್.ಕೆ. ಜಗನ್ನಿವಾಸ ರಾವ್ ಪುತ್ತೂರು, ಅಧ್ಯಕ್ಷರು-ಎ. ಜನಾರ್ದನ ರಾವ್, ಪ್ರಧಾನ ಕಾರ್ಯದರ್ಶಿ-ಯಂ. ವೆಂಕಟ್ರಮಣ ರಾವ್, ಅರ್ಚಕರು-ಶಶಿಧರ ರಾವ್, ಆಡಳಿತದಾರರು, ಕೋಶಾಧಿಕಾರಿ-ಕೃಷ್ಣರಾಜ್ ತಲೇಕಿ, ಉಪ ಕಾರ್ಯದರ್ಶಿಗಳು-ರವಿಚಂದ್ರ ನಾಲೂರು, ರಮೇಶ ಕುಂಟೋಡಿ, ಭಜನಾ ಮಂಡಳಿ ಅಧ್ಯಕ್ಷರು-ಹುಕ್ರಪ್ಪ ಗೌಡ ಕೊಡೆಂಕಿರಿ.


ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ತಲೇಕಿ ಶ್ರೀನಿವಾಸ ದೇವಸ್ಥಾನ ಕಡಬ ಅಂಚೆ ಪುತ್ತೂರು ದ.ಕ-574221, ಫೋ:08251-260425, 9901364676
* ಶ್ರೀ ನಾಗಬ್ರಹ್ಮ ಸನ್ನಿಧಿ, ಶ್ರೀ ರಾಜನ್ ಸಪರಿವಾರ ದೈವಸ್ಥಾನ ಬಡಬೆಟ್ಟು ಕುಟ್ರುಪ್ಪಾಡಿ
* ಶ್ರೀ ಶಿರಾಡಿ ರಾಜನ್ ದೈವ ದೈವಸ್ಥಾನ ಬೈದರ್‌ಜಾಲು ಕುಟ್ರುಪ್ಪಾಡಿ
* ಶ್ರೀ ಆದಿ ಮುಗೇರ್ಕಳ ದೈವಸ್ಥಾನ ಕೇಪು ಕುಟ್ರುಪ್ಪಾಡಿ ಟಶ್ರೀ ಅಯ್ಯಪ್ಪ ಭಜನಾ ಮಂದಿರ ಹೊಸಮಠ