ಕೆಮ್ಮಿಂಜೆ ಗ್ರಾಮ

ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನ, ಕೆಮ್ಮಿಂಜೆ, ಪುತ್ತೂರು, ದ.ಕ. ಫೋನ್:  234999

ಪ್ರಾಚೀನ ಕಾಲದಿಂದಲೇ ಕೆಮ್ಮಿಂಜೆ ಗ್ರಾಮದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರು ನೆಲೆ ನಿಂತು ಭಕ್ತರ ಇಷ್ಟ ಪ್ರಾಪ್ತಿ, ದೋಷ ಪರಿಹಾರಗಳನ್ನು ನೆರವೇರಿಸುತ್ತಾ ಬಂದಿರುವುದು ಪ್ರಖ್ಯಾತವಾಗಿದೆ. ಕ್ಷೇತ್ರದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಇಲ್ಲಿ ಪುರಾತನದಲ್ಲಿ ಶ್ರೀ ಮಹಾವಿಷ್ಣುವಿನ ಸಾನಿಧ್ಯವೂ ಇತ್ತೆಂದು ತಿಳಿದುಬಂದಿರುವ ಪ್ರಕಾರ ಶ್ರೀ ಸುಬ್ರಹ್ಮಣ್ಯ ದೇವರ ಗುಡಿಯ ಜೊತೆಗೆ ಶ್ರೀ ಮಹಾವಿಷ್ಣು ದೇವರಿಗೂ ನೂತನ ಗರ್ಭಗುಡಿ, ನಮಸ್ಕಾರ ಮಂಟಪವನ್ನು ಮಾಡಲಾಗಿದೆ. ಪ್ರತೀ ವರ್ಷ ಷಷ್ಠಿ ದಿನ ವಾರ್ಷಿಕ ಜಾತ್ರೋತ್ಸವ
ನಡೆಯುತ್ತದೆ. ಈ ದೇವಸ್ಥಾನವು ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧೀನಕ್ಕೆ ಒಳಪಟ್ಟಿದೆ.
ವ್ಯವಸ್ಥಾಪನಾ ಸಮಿತಿ: ಡಾ| ಬಾಲಕೃಷ್ಣ ಮುಡಂಬಡಿತ್ತಾಯ (ಅಧ್ಯಕ್ಷರು), ಜಯರಾಮ ಕೆದಿಲಾಯ ಶಿಬರ, ಸುಬ್ರಹ್ಮಣ್ಯ ತಂತ್ರಿ, ಯು.ಕೆ. ನಾಯ್ಕ, ಯೋಗೀಶ್ ಕುಂಜತ್ತಾಯ, ಶ್ರೀಮತಿ ವಿಮಲ ಪ್ರಭು, ಮೋಹನ ರೈ ಮಿಶನ್‌ಮೂಲೆ, ಮೋನಪ್ಪ ಗೌಡ, ಶ್ರೀಮತಿ ವಿಜಯಲಕ್ಷ್ಮೀ (ಸದಸ್ಯರು)

ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೊಟ್ಟೆತ್ತಡ್ಕ. ಮೊ: 9945666106

ಮಾಣಿ-ಸಂಪಾಜೆ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನಿಂದ ಸುಮಾರು 4 ಕಿ.ಮೀ. ದೂರದ ಮುಕ್ರಂಪಾಡಿಯಿಂದ ೨೦೦ ಮೀ. ದೂರದ ಮೊಟ್ಟೆತ್ತಡ್ಕ ಮಿಶನ್ ಮೂಲೆ ಎಂಬಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನವಿದೆ. ಇಲ್ಲಿ ತಿಂಗಳ ಸಂಕ್ರಮಣ ದಂದು ವಿಶೇಷ ಪೂಜೆ ಹಾಗೂ ತಂಬಿಲ ಸೇವೆಗಳು ನಡೆಯುತ್ತವೆ. ಅಲ್ಲದೆ ನವರಾತ್ರಿ ಉತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮೀ ಪೂಜೆ ಹಾಗೂ ವಾರ್ಷಿಕೋತ್ಸವಗಳು ನಡೆಯುತ್ತವೆ. ಪ್ರತೀ ಶುಕ್ರವಾರ ಭಜನೆ ಹಾಗೂ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಪಾಲಿಂಜೆ ಶ್ರೀಮಹಾವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ದೇವರು ಇಲ್ಲಿಗೆ ಕಟ್ಟೆ ಪೂಜೆಗೆ ಬರುವುದು ವಾಡಿಕೆಯಿದೆ. ಪ್ರಸ್ತುತ ಆಡಳಿತ ಮೊಕ್ತೇಸರರಾಗಿ ಮೋಹನ್ ರೈ ಮಿಶನ್‌ಮೂಲೆ, ಅಧ್ಯಕ್ಷರಾಗಿ ವೇಣು ಗೋಪಾಲ್ ಕೆ, ಉಪಾಧ್ಯಕ್ಷರಾಗಿ ರಾಮ ಶೆಟ್ಟಿ, ಕಾರ್ಯದರ್ಶಿಯಾಗಿ ಶೇಖರ, ಜತೆ ಕಾರ್ಯದರ್ಶಿಯಾಗಿ ಲಕ್ಷ್ಮಣ ಶೆಟ್ಟಿ ಹಾಗೂ ಲೆಕ್ಕ ಪರಿಶೋಧಕರಾಗಿ ವಿಶ್ವನಾಥ ರೈ ಮಿಶನ್‌ಮೂಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಮಹಿಷಮರ್ಧಿನಿ ದೇವಸ್ಥಾನ ಸಂಜಯ ನಗರ ಕೆಮ್ಮಿಂಜೆ ಶ್ರೀ ಕೊರಗಜ್ಜ ದೈವಸ್ಥಾನ ಮಜಲು ಕೆಮ್ಮಿಂಜೆ ಮೊಟ್ಟೆತ್ತಡ್ಕ ಪುತ್ತೂರು. 8197807347