ಶ್ರೀ ಸದಾಶಿವ ದೇವಸ್ಥಾನ ಕೊಯಿಲ
ತುಳುನಾಡು ದೈವ ದೇವರುಗಳ ನೆಲೆಬೀಡು ಎಂದೇ ಕರೆಯಲ್ಪಡುವ ಕುಮಾರಧಾರ ನದಿ ತಪ್ಪಲಿನ ಕೊಯಿಲ ಗ್ರಾಮದ ಆತೂರು ಎಂಬ ಪ್ರಶಾಂತವಾದ ಸ್ಥಳದಲ್ಲಿ ನೆಲೆ ನಿಂತ ಶ್ರೀ ಸದಾಶಿವ ಮಹಾಗಣಪತಿ ದುಗಲಾಯಿ ದೈವಗಳ ಕ್ಷೇತ್ರ ತಮ್ಮದೇ ಆದ ಭಕ್ತ ಸಮೂಹವನ್ನು ಹೊಂದಿರುವ ಪುಣ್ಯ ತಾಣ. ಸುಮಾರು ಆರುನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಈ ಹಿಂದೆ ನಾನಾ ಕಾರಣಗಳಿಂದ ಅಜೀರ್ಣಾವಸ್ಥೆಗೆ ತಲುಪಿದ ದೇವಸ್ಥಾನವನ್ನು ಊರಿನ-ಪರವೂರಿನ ಭಕ್ತ ಮಹಾಶಯರು ಜೀರ್ಣೋದ್ಧಾರಗೊಳಿಸಿ ಸುಂದರವಾದ ದೇವಾಲಯವನ್ನು ನಿರ್ಮಿಸಿ ಬ್ರಹ್ಮಕಲಶ ನಡೆಸಿದ್ದಾರೆ. ಬ್ರಹ್ಮರಥ ಸಮರ್ಪಣೆಯಾಗಿದೆ.
ಕ್ಷೇತ್ರದಲ್ಲಿ ಗಣಪತಿ ಗುಡಿ ಇದೆ. ಇಲ್ಲಿ ನಾಗಾರಾಧನೆಯು ನಡೆಯುತ್ತಿದೆ. ದುಗಲಾಯೆ ಮತ್ತು ಪರಿವಾರ ದೈವಗಳು ಕ್ಷೇತ್ರದ ಕಾರುಣಿಕವನ್ನು ಹೆಚ್ಚಿಸಿವೆ. ಆನೆಗುಂಡಿ ಬೂಡಿನಲ್ಲಿ ಆಡಳಿತ ನಡೆಸುತ್ತಿದ್ದ ವ್ಯಾಸರಾಯ ಮತ್ತು ಶಂಕರ ಬಳ್ಳಾರ ವಂಶಸ್ಥರಾದ ಅಕ್ಕಮ್ಮ ಬಲ್ಲಾಳ್ತಿ ಮತ್ತು ರಾಮಯ್ಯ ಬಲ್ಲಾಳರ ಮೇಲೆ ಯುದ್ಧಕ್ಕೆ ಬಂದ ಉಪ್ಪಿನಂಗಡಿ ಸಮೀಪದ ಕಜೆಕಾರು ಬೂಡಿನ ಕನ್ನಯ ಎಂಬ ರಾಜನ ವಿರುದ್ಧ ಗೆದ್ದರೆ ಹಿರೇಬಂಡಾಡಿಯಲ್ಲಿ ಆರಾಧಿಸಲ್ಪಡುತ್ತಿದ್ದ ದುಗಾಲಾಯಿ ದೈವವನ್ನು ಆನೆಗುಂಡಿ ಬೂಡಿನಲ್ಲಿ ಆರಾಧಿಸುವ ಹರಕೆ ಹೊತ್ತುಕೊಂಡಿದ್ದರು. ಯುದ್ಧದಲ್ಲಿ ಗೆದ್ದ ಬಲ್ಲಾಳ ವಂಶ ಹರಕೆಯಂತೆ ದುಗಲಾಯಿಯನ್ನು ಆರಾಧಿಸಲು ಆರಂಭಿಸಿದರು. ಆನೆಗುಂಡಿ ಬೂಡಿಗೆ ಒಳಪಟ್ಟ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಸಂದರ್ಭ ಈ ದೈವಕ್ಕೆ ನೇಮೋತ್ಸವ ನಡೆಸಲಾಯಿತು. ಅಂತೆಯೇ ಇಂದಿಗೂ ದೇವರ ಜಾತ್ರೆ ಬಳಿಕ ನೇಮೋತ್ಸವ ನಡೆಯುವುದು ಪ್ರಸ್ತುತವಾಗಿದೆ .
ಅಧ್ಯಕ್ಷ – ಲಿಂಗಪ್ಪ ಗೌಡ ಕಡೆಂಬ್ಯಾಲು, ಸದಸ್ಯರುಗಳು: ಅರ್ಚಕ ಎನ್.ವಿಷ್ಣುಮೂರ್ತಿ ಬಡಕಿಲ್ಲಾಯ, ರಾಮ ನಾಯ್ಕ ಏಣಿತಡ್ಕ, ವಿಜಯ ಎಸ್.ಅಂಬಾ, ಹೇಮಾ ಎಂ.ಶೆಟ್ಟಿ ಬಡಿಲ, ಕೆ.ಧರ್ನಪ್ಪ ಗೌಡ ಕೋರಿಕ್ಕಾರು, ವಿನೋಧರ ಮಾಳ, ನ್ಯಾಯವಾದಿ ರವಿಕಿರಣ ಕೊಯಿಲ, ಪತ್ರಕರ್ತ ಕೆ.ಎಸ್. ಬಾಲಕೃಷ್ಣ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ದೇವಿ ಭಜನಾ ಮಂದಿರ ಕೊಯಿಲ ವಳಕಡಮ 9901198706
* ಶ್ರೀ ರಾಮ ಭಜನಾ ಮಂದಿರ, ಅಯೋಧ್ಯೆ ನಗರ, ಸಬಳೂರು