ಕೋಡಿಂಬಾಡಿ ಗ್ರಾಮ

ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ದ.ಕ. ಫೋನ್: 08251-207946, 9880859488

ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಪುತ್ತೂರಿನಿಂದ ೮ ಕಿ.ಮೀ. ದೂರದಲ್ಲಿ ಕೋಡಿಂಬಾಡಿ ವಿನಾಯಕ ನಗರ ಸಿಗುತ್ತದೆ. ಅಲ್ಲಿಂದ ಎಡಕ್ಕೆ ೨ ಕಿ.ಮೀ. ಕ್ರಮಿಸಿದಾಗ ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೇಗುಲ ಸಿಗುತ್ತದೆ. ಇಲ್ಲಿ ಮುಖ್ಯವಾಗಿ ಶ್ರೀ ಮಹಿಷಮರ್ಧಿನಿ ಅಮ್ಮ ಪ್ರಮುಖ ಆರಾಧ್ಯ ದೇವಿಯಾಗಿದ್ದಾರೆ. ಈ ದೇಗುಲಕ್ಕೆ ಸುಮಾರು ೭೦೦-೮೦೦ ವರ್ಷಗಳ ಇತಿಹಾಸವಿದೆ. ದೇವಸ್ಥಾನಕ್ಕೆ ಬಾವಿಯನ್ನು ಊರವರ ಶ್ರಮದಾನದ ಮೂಲಕವೇ ರಚಿಸಲಾಗಿದೆ. ಐದು ಮನೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರಿಂದ ಓರ್ವರನ್ನು ಕೋಡಿಯಾಡಿಯ ಜೈನ ಮನೆತನದವರೋರ್ವರನ್ನು ಹೀಗೆ ಏಳು ಜನರನ್ನು ಮೊಕ್ತೇಸರರಾಗಿ ಆರಿಸಿ ಬಳಿಕ ಅದನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಗೊಳಿಸಲಾಗಿದೆ. ಪ್ರಧಾನ ಅರ್ಚಕರಾಗಿ ಹಿಂದೆ ಆರಾಧಿಸಿಕೊಂಡು ಬರುತ್ತಿದ್ದ ವಂಶಸ್ಥರೇ ನಿತ್ಯ ಪೂಜೆ ವಿಧಿಗಳನ್ನು ನಡೆಸಿಕೊಂಡು
ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ಗುರುಸಂಕಲ್ಪ ನಿಮಿತ್ತ ದೇವಿ ಸನ್ನಿಧಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ರಂಗಪೂಜೆ, ಚೌತಿಯ ದಿನ ಗಣಹೋಮ, ಹೂವಿನ ಪೂಜೆ ಇತ್ಯಾದಿ ಸನ್ನಿಧಿಯಲ್ಲಿ ಜರಗುತ್ತದೆ.
ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರು – ನಿರಂಜನ ರೈ ಮಠಂತಬೆಟ್ಟು, ಸದಸ್ಯರು – ಅಶೋಕ್ ಕುಮಾರ್ ರೈ ಕೆ.ಎಸ್., ಗಂಗಾಧರ ಶೆಟ್ಟಿ ಮಠಂತಬೆಟ್ಟು, ಎ. ಸಂಕಪ್ಪ ಶೆಟ್ಟಿ, ಟಿ.ಕೆ.ಎಸ್. ಗೌಡ, ರಾಧಿಕಾ ಆರ್. ಸಾಮಂತ್, ವಿಜಯಲಕ್ಷೀ ನಾಯಕ್, ಶ್ರೀನಿವಾಸ ನಾಯ್ಕ, ರಾಮಕೃಷ್ಣ ಭಟ್.

ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಅಂಚೆ: ಕೋಡಿಂಬಾಡಿ, ಪುತ್ತೂರು ತಾಲೂಕು, ದ.ಕ.-574 325. ಫೋನ್: 08251-261010, 9901247080.

ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಪುತ್ತೂರಿನಿಂದ ೮ ಕಿ.ಮೀ. ದೂರದಲ್ಲಿ ಕೋಡಿಂಬಾಡಿ ವಿನಾಯಕ ನಗರವಿದೆ. ಅಲ್ಲಿಂದ ೧.೫ ಕಿ.ಮೀ. ದೂರದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವಿದೆ. ಶಿಲಾಮಯವಾದ ಕಲಾತ್ಮಕವಾದ, ಶಾಸ್ತ್ರೋಕ್ತವಾಗಿ ತಯಾರಿಸಿದ ಸ್ತ್ರೀ ದೇವತಾ ಬಿಂಬದಲ್ಲಿ ದೇವಿಯು ಆರಾಧಿಸಲ್ಪಡುತ್ತಾಳೆ.
ಶ್ರೀ ದೇವಳದ ಸ್ಥಾಪನೆ: ಮಠದಬೆಟ್ಟು ದಿ| ಯಂ. ಸುಬ್ರಾಯ ಶ್ಯಾನುಭೋಗರು ಸ್ಥಳೀಯ ಬೆಳ್ಳಿಪ್ಪಾಡಿ ಮನೆತನದ ತಮ್ಮ ಶ್ಯಾನುಭೋಗ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದರು. ಇವರು ನಿತ್ಯ ದೇವಿ ಆರಾಧಕರಾಗಿದ್ದು ತನ್ನ ಮಠದಬೆಟ್ಟು ಮನೆಯಲ್ಲಿ ಶ್ರೀ ದೇವಿಯ ಆರಾಧನೆಯನ್ನು ಮಾಡುತ್ತಿದ್ದರು. ಹಾಗೆಯೇ ಒಂದು ದಿನ ಶ್ಯಾನುಭೋಗರಿಗೆ ಶ್ರೀ ದೇವಿಯು ಸ್ವಪ್ನದಲ್ಲಿ ಕಾಣಿಸಿಕೊಂಡು ನನಗೆ ಒಂದು ಸುಂದರವಾದ ಗುಡಿಯನ್ನು ನಿರ್ಮಿಸಿ ಅದರಲ್ಲಿ ನನ್ನನ್ನು ನಿತ್ಯ ಆರಾಧಿಸಿಕೊಂಡು ಬಂದಲ್ಲಿ ನಿನ್ನನ್ನು ಹಾಗೂ ನಿನ್ನ ವಂಶವನ್ನು ಮತ್ತು ನನ್ನನ್ನು ನಂಬಿ ಆರಾಧಿಸುವ ಭಕ್ತಾದಿಗಳನ್ನು ಅನುಗ್ರಹಿಸುತ್ತೇನೆ ಎಂಬ ಮಾತು ಕೇಳಿ ಬಂದಿತು. ಅಂದಿನಿಂದಲೇ ಶ್ಯಾನುಭೋಗರು ಬೆಳ್ಳಿಪ್ಪಾಡಿ ಕುಟುಂಬಸ್ಥರ ಸಹಕಾರದಿಂದ ಶ್ರೀ ದೇವಿಗೆ ಗುಡಿ ನಿರ್ಮಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನೂತನ ಸುಂದರವಾದ ಗುಡಿಯನ್ನು ಮಠದಬೆಟ್ಟಿನಲ್ಲಿ ನಿರ್ಮಿಸಿ ಪುತ್ತೂರು ತಾಲೂಕು ಕುರಿಯ ಗ್ರಾಮದಲ್ಲಿರುವ ತಂತ್ರಿಗಳಾದ ಬ್ರಹ್ಮಶ್ರೀ ನಾರಾಯಣ ಆಚಾರ್ಯರಿಂದ
ಶ್ರೀ ರಾಜರಾಜೇಶ್ವರೀ ದೇವಿಯ ಶಿಲಾ ವಿಗ್ರಹವನ್ನು ಕ್ರಿ.ಶ. ೩೦-೦೩-೧೯೧೫ರಲ್ಲಿ ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಿದರು.
ಶ್ರೀ ದೇವಾಲಯವು ನಡೆದು ಬಂದ ದಾರಿ: ಅಂದಿನಿಂದ ಈವರೆಗೆ ಮೂರು ಬಾರಿ ಬ್ರಹ್ಮಕಲಶೋತ್ಸವವು (ಪ್ರಥಮ ೧-೪-೧೯೧೫) (ದ್ವಿತೀಯ ೮-೩-೧೯೮೬) (ತೃತೀಯ
೧-೯-೧೯೯೮) ನಡೆದಿರುತ್ತದೆ. ಶ್ರೀ ದೇವರ ಪೂಜಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲು ೧೯೬೭ರಲ್ಲಿ ಆಡಳಿತ ಸಮಿತಿಯನ್ನು ಶ್ರೀಯುತರು ರಚಿಸಿರುತ್ತಾರೆ. ಅದೇ ಪ್ರಕಾರ ಶ್ರೀ ದೇವಳದಲ್ಲಿ ನಿತ್ಯಪೂಜಾ, ಉತ್ಸವಾದಿ ಸೇವೆಗಳು ಇತರ ಎಲ್ಲಾ ಕಾರ್ಯಕ್ರಮಗಳನ್ನು ಆಡಳಿತ ಮಂಡಳಿ, ಊರ ಹಾಗೂ ಪರ ಊರಿನ ಭಕ್ತಾದಿಗಳ ಸಹಕಾರದಿಂದ ಈವರೆಗೆ ನಡೆಸಿಕೊಂಡು ಬರಲಾಗುತ್ತಿದೆ.
ಶ್ರೀದೇವಿಯ ಸಾನಿಧ್ಯ ವೃದ್ಧಿಯಾಗಿ ನಿತ್ಯಪೂಜಾ ನಿಧಿ, ಉತ್ಸವ ನಿಧಿ, ನವರಾತ್ರಿ ನಿಧಿ ಸ್ಥಾಪಿಸಿ ದೇವಿಯ ನಿತ್ಯ ಪೂಜಾ ಉತ್ಸವಗಳು ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ. ಪ್ರತಿ ದಿನ ಈ ದೇವಾಲಯದಲ್ಲಿ ನೈವೇದ್ಯ ಪೂಜೆ ಸಲ್ಲುತ್ತದೆ. ಶ್ರೀ ಗಣೇಶೋತ್ಸವ, ನವರಾತ್ರಿ ಉತ್ಸವಗಳು ಸಾರ್ವಜನಿಕವಾಗಿ ಜರಗುತ್ತದೆ. ದೀಪಾವಳಿ, ಧನುಪೂಜೆ, ಪ್ರತಿಷ್ಠಾ ಮಹೋತ್ಸವಗಳು ನಡೆಯುತ್ತವೆ. ತಿಂಗಳ ಮೊದಲ ಭಾನುವಾರ ಸಂಜೆ ಭಜನಾ ಕಾರ್ಯಕ್ರಮವಿದೆ. ಇದೀಗ ದೇವಳ ಜೀರ್ಣೋದ್ಧಾರಗೊಳ್ಳುತ್ತಿದೆ.
ಶ್ರೀ ದೇವಳದಲ್ಲಿ ನಡೆಯುವ ಸೇವೆಗಳು: ಶ್ರೀ ದೇವಿಯ ನಿತ್ಯ ಪೂಜೆಯು ಸಾಂಗವಾಗಿ ನಡೆಸಿಕೊಂಡು ಬರಬೇಕೆಂಬ ಉದ್ದೇಶದಿಂದ ಶಾಶ್ವತ ನಿತ್ಯ ಪೂಜೆ, ದುರ್ಗಾ ಪೂಜೆ, ಹೂವಿನ ಪೂಜೆ, ರಂಗ ಪೂಜೆ ಇತರ ವಿಶೇಷ ದಿನಗಳಲ್ಲಿ ಋಗುಪಾಕರ್ಮ, ಗಣೇಶ ಚತುರ್ಥಿ, ನವರಾತ್ರಿ ಪೂಜೆ, ಧನು ಪೂಜೆ, ದೀಪಾವಳಿ ಹಬ್ಬ, ದೀಪೋತ್ಸವ, ಪ್ರತಿಷ್ಠಾ ಮಹೋತ್ಸವ, ಪತ್ತನಾಜೆ ಕಾರ್ಯಕ್ರಮಗಳು ಊರ ಹಾಗೂ ಪರ ಊರ ಭಕ್ತಾದಿಗಳ ಸಹಕಾರದಿಂದ ವಿಜೃಂಭಣೆಯಿಂದ ನಡೆಯುತ್ತಿದೆ.
ಶ್ರೀ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಚಂಡಿಕಾ ಹೋಮ, ದುರ್ಗಾಹೋಮ, ಸಂಧಿಶಾಂತಿ ಹೋಮ ಹಾಗೂ ಇತರ ಶಾಂತಿ ಹೋಮಗಳು ಭಕ್ತರ ಅನುಕೂಲತೆಗೆ ತಕ್ಕಂತೆ ನಡೆಸಿಕೊಡಲಾಗುವುದು. ಮದುವೆ, ಉಪನಯನ ಹಾಗೂ ಇನ್ನಿತರ ಸಮಾರಂಭಗಳನ್ನೂ ಕೂಡ ಇಲ್ಲಿ ಜರಗಿಸಲು ಉತ್ತಮ ವ್ಯವಸ್ಥೆ ಇದೆ.
ಇನ್ನು ಉದ್ಯೋಗ, ಸಂತತಿ ಪ್ರಾಪ್ತಿ, ಆರೋಗ್ಯದ ಬಗ್ಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಬಂದು ಪ್ರಾರ್ಥಿಸಿದಲ್ಲಿ ಶ್ರೀ ದೇವಿಯು ಅನುಗ್ರಹಿಸುತ್ತಿದ್ದಾಳೆ.
ಆಡಳಿತ ಸಮಿತಿ: ಅಧ್ಯಕ್ಷರು-ಟಿ. ಅಣ್ಣಪ್ಪಯ್ಯ ತೆಂಕಿಲ, ಕಾರ್ಯದರ್ಶಿ-ಎಂ. ನಾಗೇಶ್ ಶರ್ಮ, ಸದಸ್ಯರು-ಕೆ. ಸತ್ಯನಾರಾಯಣ ರಾವ್ ಕುಂಜಾರು, ಕೆ. ಯೋಗೀಶ್ ರಾವ್, ಎಸ್. ಸದಾನಂದ ರಾವ್, ಎ. ಸುದರ್ಶನ ರಾವ್, ಎನ್.ಎಸ್. ನಟರಾಜ್, ಎನ್.ಎಸ್. ಸುಕುಮಾರ್ ಶ್ಯಾರ, ಎಂ. ನರೇಂದ್ರ ಪುತ್ರಬೈಲು, ಟಿ. ಉಮೇಶ್ ರಾವ್, ಪಿ. ರಮಾನಂದ ರಾವ್.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ಬಾರಿಕೆಗುತ್ತು ಮಲ್ಯೋತ್ತಾಯ ದೈವಸ್ಥಾನ ಕೋಡಿಂಬಾಡಿ 270200
* ರಕ್ತೇಶ್ವರಿ ದೈವಸ್ಥಾನ ವಿನಾಯಕ ನಗರ
* ಶ್ರೀ ರಕ್ತೇಶ್ವರಿ ದೈವಸ್ಥಾನ ಮತ್ತು ಪರಿವಾರ ಮಠಂತಬೆಟ್ಟು
* ಪಿಲಿಗುಂಡ ಕುಟುಂಬ ಧರ್ಮ ದೈವಸ್ಥಾನ ಪಿಲಿಗುಂಡ ಮನೆ ಕೋಡಿಂಬಾಡಿ ಗ್ರಾಮ & ಅಂಚೆ ಪುತ್ತೂರು ದ.ಕ. 7204009082, 9741813952, 9686010482, 9481975400
* ಶ್ರೀ ಧರ್ಮಶ್ರೀ ಭಜನಾ ಮಂದಿರ ಅಶ್ವತಕಟ್ಟೆ ಕೋಡಿಂಬಾಡಿ ಪುತ್ತೂರು ದ.ಕ 574325