ಕೋಣಾಜೆ ಗ್ರಾಮ

ಶ್ರೀ ಉಳ್ಳಾಕುಲು ಸಪರಿವಾರ ದೈವಸ್ಥಾನ ಕೊಣಾಜೆ

ಕೊಣಾಜೆಯ ಜನತೆ ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದಂತಹ ಶ್ರೀ ಉಳ್ಳಾಕ್ಲು ಸಪರಿವಾರ ದೈವಗಳು ಊರಿನ ಜನತೆಗೆ ಕ್ಷೇಮವನ್ನು, ಸಕಲ ಐಶ್ಚರ್‍ಯವನ್ನು ನೀಡಿವೆ.
ಸುಮಾರು ೭೦೦ ರಿಂದ ೭೫೦ ವರ್ಷ ಗಳ ಹಿಂದೆ ಕೊಣಾಜೆಯಲ್ಲಿ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳು ನೆಲೆಯೂರಿದ್ದವು ಎಂದು ತಿಳಿದು ಬರುತ್ತದೆ. ಗಂಗೆಯಿಂದ ಬಂದ ಉಳ್ಳಾಕ್ಲುಗಳು ಸುಳ್ಯ ತಾಲೂಕಿನ ಪಂಜ, ಏನೆಕಲ್ಲು, ಸುಬ್ರಹ್ಮಣ್ಯಕ್ಕೆ ಬಂದು ಸುಬ್ರಹ್ಮಣ್ಯ ದೇವರ ಅನುಮತಿ ಪಡೆದುಕೊಂಡು ಬಿಳಿನೆಲೆ ಪ್ರದೇಶವನ್ನು ಸಂದರ್ಶಿಸಿಕೊಂಡು ಸುಬ್ರಹ್ಮಣ್ಯ ದೇವರ ಅಪ್ಪಣೆಯಂತೆ ಕೊಣಾಜೆಯಲ್ಲಿ ಬಂದು ನೆಲೆಯೂರಿದರು ಎಂಬುದಾಗಿ ತಿಳಿದು ಬರುತ್ತದೆ. ಬಲ್ಲಾಳರ ಮತ್ತು ‘ಗುತ್ತು ಮನೆತನದವರ ಆರಾಧ್ಯ ದೈವವಾಗಿದ್ದ ಉಳ್ಳಾಕ್ಲು ಇಂದು ನಾಡಿನ ಜನತೆಯ ಇಷ್ಟಾರ್ಥ ನೆರವೇರಿಸುವ ದೈವವಾಗಿ ಆರಾಧಿಸ್ಪಡುತ್ತದೆ’. ಈಗಲೂ ಅದೇ ರೀತಿ ಮುಂದುವರಿಯುತ್ತಿದೆ.
೧೯೮೦-೮೧ರಲ್ಲಿ ಕೈಕುರೆ ರಾಮಣ್ಣ ಗೌಡರ ನೇತೃತ್ವದಲ್ಲಿ ಜೀರ್ಣೋದ್ಧಾರಗೊಂಡ ಈ ದೈವಸ್ಥಾನ ಕೊಣಾಜೆ, ಮೂಜೂರು ಪ್ರದೇಶಗಳಿಗೆ ಸಂಬಂಧಪಟ್ಟಿದೆ. ಇಲ್ಲಿ ಉಳ್ಳಾಕ್ಲು, ಮುದ್ದೇರ್‍ಲಾಯ, ಹಲ್ಲತ್ತಾಯಿ, ಹುಲಿ ಭೂತ ಹಾಗೂ ಶಿರಾಡಿ ರಾಜನ್ ದೈವ ಸೇರಿದಂತೆ ಪರಿವಾರ ದೈವಗಳಿವೆ. ದೈವಗಳಿಗೆ ಗುಡಿಗಳನ್ನು ನಿರ್ಮಿಸಲಾಗಿದೆ. ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ಭಂಡಾರವನ್ನು ಭಂಡಾರದ ಮನೆಯಿಂದ ಪಲ್ಲಕಿಯಲ್ಲಿ ಅಮ್ಮಾಜೆಯಲ್ಲಿರುವ ದೈವಸ್ಥಾನಕ್ಕೆ ತಂದು ಅಲ್ಲಿ ನೇಮೋತ್ಸವ ನಡೆಯುತ್ತದೆ. ಹಿಂದಿನ ಕಾಲದಲ್ಲಿ ರಾಜರು ಮತ್ತು ಗುತ್ತು ಮನೆತನದವರ ಹಿರಿತನದಲ್ಲಿ ನೇಮೋತ್ಸವ ನಡೆಯುತ್ತಿತ್ತು ಇದಕ್ಕೆ ಪೂರಕ ಎಂಬಂತೆ ನೇಮೋತ್ಸವ ನಡೆಯುವ ಸಂದರ್ಭದಲ್ಲಿ ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಲ್ಲಾಲ್ ಹಾಗೂ ಮೀನಾಡಿ ಗುತ್ತು ಮನೆತನದ ಮಂಜುನಾಥ ಭಂಡಾರಿಯವರು ಉಪಸ್ಥಿತರಿರುತ್ತಾರೆ. ನಾಲ್ಕು ದಿವಸ ನೇಮೋತ್ಸವಗಳು ವಿಜೃಂಭಣೆಯಿಂದ ಜರಗುತ್ತದೆ.
ಕಾರ್ನಿಕದ ದೈವ ಶ್ರೀ ಉಳ್ಳಾಕ್ಲು: ಕೊಣಾಜೆ ಶ್ರೀ ಉಳ್ಳಾಕ್ಲು ಕಾರಣಿಕ ದೈವಗಳಾಗಿದೆ. ದೈವವನ್ನು ಪ್ರಾರ್ಥಿಸಿ ಬೇಡಿಕೊಂಡರೆ ತಮ್ಮ ಇಷ್ಟಾರ್ಥ ಸಿದ್ಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಇಲ್ಲಿ ಬರುವ ಹರಕೆಗಳೇ ಸಾಕ್ಷಿ. ಉಳ್ಳಾಕ್ಲು ಶ್ರೀ ಸುಬ್ರಹ್ಮಣ್ಯ ದೇವರ ಅಪ್ಪಣೆಯಂತೆ ಕೊಣಾಜೆಯಲ್ಲಿ ನೆಲೆಯೂರಿದರಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಇಲ್ಲಿಗೂ ಸಂಬಂಧವಿದೆ. ಇಲ್ಲಿಯ ಜಾತ್ರೋತ್ಸವ, ನೇಮೋತ್ಸವದ ಹೇಳಿಕೆಯನ್ನು ಮೊದಲು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಿಳಿಸುವುದು ವಾಡಿಕೆ.
ಈ ದೈವಸ್ಥಾನದಲ್ಲಿ ಪ್ರತಿ ಮಂಗಳವಾರ ಹಾಲಕ್ಕಿ ಸೇವೆ ನಡೆಯುತ್ತದೆ. ನೇಮೋತ್ಸವದಲ್ಲಿ ಬಲ್ಲಾಲರು, ಗುತ್ತು ಮನೆತನದವರು, ಕಡಂಪಳ, ದೊಡ್ಡಮನೆ, ಕಲ್ಲೂರು, ಆಯರ್ತಮನೆ ಎಂಬ ನಾಲ್ವೇಕಿಯರು, ೩೬ ಮಂದಿ ಪರಿಚಾರಕ ವರ್ಗದವರು, ಬೊಂಟ್ರವರ್ಗ ಮತ್ತು ಗ್ರಾಮಸ್ಥರ ಕೂಡುವಿಕೆಯಿಂದ ವರ್ಷಂಪ್ರತಿ ನೇಮೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ಚಂದ್ರಶೇಖರ – 9480230279, 9740561700

ಶ್ರೀ ವನದುರ್ಗಾ ದೇವಸ್ಥಾನ ಕಡ್ಯ ಕೊಣಾಜೆ
ಕೊಣಾಜೆ ಗ್ರಾಮ, ಕಡ್ಯ ಅಂಚೆ. 08251-267060, ಮೊ: 8762532040

ಕಡಬ-ಸುಬ್ರಹ್ಮಣ್ಯ ಮಾರ್ಗದ ಮರ್ಧಾಳದಿಂದ ಎಡಕ್ಕೆ ತಿರುಗಿ ೮ ಕಿ.ಮೀ. ಚಲಿಸಿದರೆ ಈ ದೇವಸ್ಥಾನ ಸಿಗುತ್ತದೆ. ಈ ದೇವಸ್ಥಾನದಲ್ಲಿ ವನದುರ್ಗೆ ಮತ್ತು ಗಣಪತಿ (ಬಲಮುರಿ) ಸಾನಿಧ್ಯವಿದೆ. ಮಠ ಸಂಪ್ರದಾಯ ದೇವಸ್ಥಾನವಾದುದರಿಂದ ಇಲ್ಲಿ ವನದುರ್ಗೆ ಹಾಗೂ ಗಣಪತಿಗೆ ವಿಶೇಷ ಪೂಜೆ ಕೊಟ್ಟು ಅನ್ನಸಂತರ್ಪಣೆಯಿಂದ ಭಕ್ತಾದಿಗಳ ಇಷ್ಟಾರ್ಥ ಸಿದ್ಧಿಯಾಗುವುದು. ಅನ್ನದಾನ ಮತ್ತು ವೇದಾಧ್ಯಯನಕ್ಕೆ ಇಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ದುರ್ಗಾಪೂಜೆ, ರಂಗ ಪೂಜೆ, ಹೂವಿನ ಪೂಜೆಗಳು ಇಲ್ಲಿ ನಡೆಯುವ ವಿಶೇಷ ಸೇವೆಗಳಾಗಿದ್ದು ನವರಾತ್ರಿಯ ೯ ದಿನವೂ ರಾತ್ರಿ ರಂಗಪೂಜೆ ನಡೆಯುತ್ತದೆ.
ಆಡಳಿತ ಸಮಿತಿ: ಮೊಕ್ತೇಸರರು-ಆನಂದ ಭಟ್ ಕಡ್ಯ, ಟ್ರಸ್ಟ್ ಅಧ್ಯಕ್ಷರು-ಮಧುಸೂಧನ ಭಟ್ ಕಡ್ಯ, ಉಪಾಧ್ಯಕ್ಷರು-ಪ್ರಕಾಶ್ ಭಟ್ ಕಡ್ಯ, ಕಾರ್ಯದರ್ಶಿ-ನಾಗರಾಜ್ ಭಟ್ ಕಡ್ಯ, ಖಜಾಂಜಿ-ಆನಂದ ಭಟ್ ಕಡ್ಯ. ಸದಸ್ಯರುಗಳು: ಮಹೇಶ್ ಭಟ್ ಕಡ್ಯ, ಹರೀಶ್ ಭಟ್ ಕಡ್ಯ, ಶ್ರೀನಿವಾಸ್ ಭಟ್ ಕಡ್ಯ, ಶ್ರೀಧರ್ ಭಟ್ ಕಡ್ಯ, ಸುರೇಶ್ ಭಟ್ ಕಡ್ಯ, ಸತೀಶ್ ಭಟ್ ಕಡ್ಯ, ರಮೇಶ್ ಭಟ್ ಕಡ್ಯ, ಲಕ್ಷ್ಮಿನಾರಾಯಣ ಭಟ್ ಕಡ್ಯ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಉಳ್ಳಾಕುಲು ನಾಲ್ವರು ಪರಿವಾರ ದೈವಸ್ಥಾನ ಕೊಣಾಜೆ
* ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಕಡ್ಯ ಕೊಣಾಜೆ