ನೆಟ್ಟಣಿಗೆ ಮುಡ್ನೂರು ಗ್ರಾಮ ಪಂ- ಸ್ವಾತಂತ್ರ್ಯ ದಿನಾಚರಣೆ

0

ಈಶ್ವರಮಂಗಲ: ನೆಟ್ಠಣಿಗೆ ಗ್ರಾ.ಪಂ ನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಗ್ರಾ.ಪಂ ಅಧ್ಯಕ್ಷ ಎ ರಮೇಶ್ ರೈ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಮಹತ್ಮಾ ಗಂಧಿ ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ,ಸಾಮಾನ್ಯ ಜನರು ಹೋರಾಡಿದ್ದಾರೆ, ಈಗಿನವರಿಗೆ ಅದರ ಬೆಲೆ ಗೊತ್ತಿಲ್ಲ ಬೇಕಾ ಬಿಟ್ಟಿಯಾಗಿ ಉಡಾಫೆಯಿಂದ ಮಾತನಾಡುತ್ತಾರೆ, ನಿಜವಾಗಿಯೂ ದೇಶ ಪ್ರೇಮ ಇದೆ ಸಂವಿದಾನದಲ್ಲಿ ನಮ್ಮ ಧ್ವಜಕ್ಕೆ ಗೌರವ ಇದೆ, ವಿದೇಶಗಳಲ್ಲಿಯೂ ಅನಿವಾಸಿ ಭಾರತೀಯರು ಸ್ವಾತಂತ್ರ್ಯ ದಿವಸ ಆಚರಣೆಯನ್ನು ಮಾಡುತ್ತಾರೆ.ನಮ್ಮದೇಶ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದೆ. ನಾವೇಲ್ಲ ಅನ್ಯೋನ್ಯತೆಯಿಂದ ಬಾಳೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಫೌಝೀಯ ಇಬ್ರಾಹಿಂ ಮಾತನಾಡಿ ಶುಭಹಾರೈಸಿದರು. ,ಸದಸ್ಯರಾದ ರಾಮ ಮೇನಾಲ ಮಾತನಾಡಿ ದೇಶ ವಿದೇಶಗಳಲ್ಲಿಯೂ 77 ನೇ ಸ್ವಾತಂತ್ರ್ಯವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದ್ದೇವೆ.ನಾವು 1947 ನೇ ಅಗೋಸ್ಟ್ 15 ರಿಂದ ತ್ರಿವರ್ಣ ಧ್ವಜದಲ್ಲಿ ಅಡಿಯಲ್ಲಿ ಶಾಂತಿಯಲ್ಲಿ ಬದುಕುತ್ತಿದ್ದೇವೆ. ನಾವು 77 ವರ್ಷಗಳ ಬಳಿಕ ಸ್ವಾತಂತ್ಯವನ್ನು ಆಚರಿಸುತ್ತಿದ್ದೇವೆ. ಆದರೆ 200 ವರ್ಷಗಳಿಂದ ನಮ್ಮ ದೇಶವನ್ನು ಪರಕೀಯರು ಆಳುತ್ತಿದ್ದರು, ಸ್ವಾತಂತ್ರ್ಯಕ್ಕಾಗಿ ಹಲವಾರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನೆನಪಿಸಿಕೋಳ್ಳಬೇಕು. ನಮ್ಮದೇಶದಲ್ಲಿ ಹಲವಾರು ಜಾತಿ ಧರ್ಮಗಳಿಂದ ಕೂಡಿದ ದೇಶವಾಗಿದೆ ಎಂದು ಹೇಳಿದರು.


ಸದಸ್ಯರಾದ ಚಂದ್ರಹಾಸ, ಇಬ್ರಾಹಿಂ ಪಳ್ಳತ್ತೂರು,ಲಲಿತಾ ಸುಧಾಕರ್, ಲಲಿತಾಶೆಟ್ಟಿ, ಇಂದಿರಾ, ಮಹಮ್ಮದ್ ರಿಯಾಝ್, ವೆಂಕಪ್ಪ ನಾಯ್ಕ, ಕಾರ್ಯದರ್ಶಿ ಶಾರದ ಕೆ ಸ್ವಗಾಗತಿಸಿ, ಸಿಬ್ಬಂದಿ ಶೀನಪ್ಪ ವಂದಿಸಿದರು. ಸಿಬ್ಬಂದಿಗಳಾದ ಚಂದ್ರ ಶೇಖರ್, ವಿನುತಾ, ದ್ವಿತೀ, ಅಬ್ದುಲ್ ರಹಿಮಾನ್, ಹಾಸ್ಟೇಲ್ ಸಿಬ್ಬಂದಿ ಮಹಮ್ಮದ್, ಹಾಗೂ ಸೂರಪ್ಪ, ಶಬಾ ಟ್ರೇಡ್ಸ್ ನ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here