ಬಂಟ್ರ ಗ್ರಾಮ

ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಫೋ: 266324, 9448983975

ಪುತ್ತೂರಿನಿಂದ ಕಡಬವಾಗಿ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ಕಡಬದಿಂದ ಸುಮಾರು ನಾಲ್ಕು ಕಿ.ಮೀ. ಕ್ರಮಿಸಿದಾಗ ಮರ್ದಾಳ ಪೇಟೆ ಸಿಗುತ್ತದೆ. ಇಲ್ಲಿಂದ ಕಲ್ಲುಗುಡ್ಡೆ-ಪೆರಿಯಶಾಂತಿ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ. ದೂರ ಚಲಿಸಿದಾಗ ಕಾಣಸಿಗುವ ಕ್ಷೇತ್ರವೇ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
ದೇವಾಲಯದಲ್ಲಿ ಲಭ್ಯವಿರುವ ಶಿಲಾ ಶಾಸನದ ಪ್ರಕಾರ ಈಗಿನ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಅನಾದಿ ಕಾಲದಲ್ಲಿ ಮರುಡತಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವೆಂದು ಕರೆಯಲ್ಪಡುತ್ತಿದ್ದಿತೆಂದು ತಿಳಿದು ಬರುತ್ತದೆ.
ತುಳುನಾಡಿನಲ್ಲಿ ಖರಾಸುರನು ಪ್ರತಿಷ್ಠಾಪಿಸಿದ ಏಳು ಮಹಾಲಿಂಗೇಶ್ವರ ದೇವಾಲಯಗಳಲ್ಲಿ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಒಂದಾಗಿದೆಯೆಂಬ ಹಿನ್ನೆಲೆ ಕೆಲವು ಕುರುಹುಗಳಿಂದ ತಿಳಿದು ಬರುತ್ತದೆ. ಅನಾದಿ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದ ಈ ದೇವಸ್ಥಾನ ಒಂದೊಮ್ಮೆ ಬಹಳ ವಿಜೃಂಭಣೆಯಿಂದ ಬೆಳಗುತ್ತಿತ್ತೆಂದು ಕೆಲವೊಂದು ಪುರಾವೆಗಳಿಂದ ತಿಳಿದುಬರುತ್ತದೆ.
೧೯೦೨ನೇ ಇಸವಿಯಲ್ಲಿ ದೇವಾಲಯಕ್ಕೆ ಪುನಶ್ಚೇತನ ನೀಡಲಾಯಿತು. ಈ ದೇವಾಲಯಕ್ಕೆ ಬಸವಪಾಲು, ಪದಾರ್ಥ ಪಾಲು, ದೇವರ್ತಿ ಮಾರು (ಗದ್ದೆ) ಸುಬ್ರಾಯ ಪಾಲುಗಳಿದ್ದವು ಎಂಬುದು ಇತಿಹಾಸದಲ್ಲಿ ಕಂಡು ಬರುತ್ತದೆ. ದೇವಾಲಯದ ಎದುರು ಭಾಗದಲ್ಲಿ ನಾಗಬನವಿದ್ದು, ಇಲ್ಲಿ ನಾಗರಪಂಚಮಿ ದಿವಸ ವಿಶೇಷ ಪೂಜೆ ನಡೆಯುತ್ತದೆ. ಪ್ರಸ್ತುತ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ರವಿರಾಜ್ ಆರಿಗ ಆಡಳಿತ ನಿರ್ವಹಿಸುತ್ತಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :

* ಶೆಟ್ಟಿಬೈಲು ವಿಷ್ಣುಮೂರ್ತಿ ದೈವಸ್ಥಾನ ಟಶ್ರೀ ಅಯ್ಯಪ್ಪ ಭಜನಾ ಮಂದಿರ ಮರ್ದಾಳ
* ಶ್ರೀ ಕೃಷ್ಣ ಭಜನಾ ಮಂದಿರ ಕೃಷ್ಣನಗರ