ಬಿಳಿನೆಲೆ ಗ್ರಾಮ

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ
ಬಿಳಿನೆಲೆ ಗ್ರಾಮ, ನೆಟ್ಟಣ ಅಂಚೆ, ಪುತ್ತೂರು ದ.ಕ.-573 230. ಫೋ: 08251-262299

ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಉಪ್ಪಿನಂಗಡಿಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನವಿದೆ. ಪುತ್ತೂರು ತಾಲೂಕಿನಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳಿರುವುದು ತೀರಾ ವಿರಳ.

ಹಿಂದೆ ಬಿಳಿನೆಲೆಯು ಪ್ರಸಿದ್ಧ ಕ್ಷೇತ್ರವಾಗಿತ್ತು ಎಂಬುದಕ್ಕೆ ಇಂದು ಸುತ್ತುಮುತ್ತಲೂ ಕಾಣಸಿಗುವ ಕುರುಹುಗಳೇ ಸಾಕ್ಷಿಯಾಗಿದೆ. ಬಿಳಿನೆಲೆಯ ಸಮೀಪ ಹರಿಯುತ್ತಿರುವ ಹೊಳೆಗೆ ಹಿಂದೆ ಶುಕ್ಲತೀರ್ಥ ಎಂಬ ಹೆಸರಿತ್ತು. ಆದುದರಿಂದಲೇ ಈ ಪ್ರದೇಶಕ್ಕೆ ಬಿಳಿನೆಲೆ ಎಂಬ ಹೆಸರು ಬರಲು ಕಾಣವಾಗಿರಬೇಕು (ಶುಕ್ಲ=ಬಿಳಿ). ಬಿಳಿನೆಲೆಯನ್ನು ಓರ್ವ ಪಾಳೆಯಗಾರ ಅರಸ ಆಳುತ್ತಿದ್ದ ಕಾಲದಲ್ಲಿ (ವಾಲ್ತಾಜೆಯಲ್ಲಿ) ಈ ಕ್ಷೇತ್ರ ಪೂರ್ಣ ಅಭಿವೃದ್ಧಿಯನ್ನು ಹೊಂದಿತ್ತು ಎನ್ನುತ್ತಾರೆ. ಕ್ರಮೇಣ ಪಾಳುಬಿದ್ದ ದೇವಾಲಯ ಸುಮಾರು ನೂರು ನೂರೈವತ್ತು ವರ್ಷಗಳ ನಂತರ ಪ್ರಗತಿ ಹೊಂದುತ್ತಾ ಬಂದಿತು. ನಿಂತುಹೋಗಿದ್ದ ಪೂಜೆಯನ್ನು ಪುನಃ ೧೯೨೨ರಲ್ಲಿ ಪ್ರಾರಂಭಿಸಿದರು. ೧೯೭೭ರಲ್ಲಿ ಹಾಗೂ ನಂತರ ೧೯೯೮ರಲ್ಲಿ, ೨೦೧೪ ಜನವರಿಯಲ್ಲಿ ಬ್ರಹ್ಮಕಲಶ ನೆರವೇರಿಸಲ್ಪಟ್ಟಿತು. ಈಗ ದೇವಳದಲ್ಲಿ ವಾರ್ಷಿಕ ಜಾತ್ರೆ ಸೇರಿದಂತೆ ಹಲವು ಆಚರಣೆಗಳು ನಡೆಯುತ್ತಿದೆ. ಮಕ್ಕಳ ಸಂಕಷ್ಟ ನಿವಾರಣೆ ಹಾಗೂ ಗೋದುರಿತ ಪ್ರಾಯಶ್ಚಿತಕ್ಕಾಗಿ ಅನೇಕ ಭಕ್ತರು ದೇವಳಕ್ಕೆ ಹರಕೆ ಸಲ್ಲಿಸಲು ಆಗಮಿಸುತ್ತಾರೆ.

ಕೋಟೆ ಬಾಗಿಲು: ಬಿಳಿನೆಲೆ ಗ್ರಾಮದ ಕೈಕಂಬದಿಂದ ಒಂದು ಕಿ.ಮೀ. ದೂರದಲ್ಲಿ ಬಲ್ಲಾಳರ ಕಾಲದ ಕೋಟೆಬಾಗಿಲು ಎಂಬ ಸ್ಥಳವಿದೆ. ಕೋಟೆಯ ಕುರುಹುಗಳನ್ನು ಕಾಣಬಹುದು. ಪ್ರಕೃತ ಇದು ಔಷಧೀಯ ವನಸ್ಪತಿಗಳ ಪ್ರದೇಶವಾಗಿರುತ್ತದೆ.
ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರು-ವಾಡ್ಯಪ್ಪ ಗೌಡ ಎರ್ಮಾಯಿಲ್, ಸದಸ್ಯರು-ಎಂ. ಉಮಾಮಹೇಶ್ವರ ಗೌಡ ಎರ್ಕ, ಎಂ. ಮಹಾಬಲಕೃಷ್ಣ ಭಟ್ ಗೋಪಾಲಪುರ, ಕೆ. ಕುಶಾಲಪ್ಪ ಗೌಡ ಕಳಿಗೆ, ಶ್ರೀಮತಿ ಭವ್ಯ ಬಾಲಕೃಷ್ಣ ವಾಲ್ತಾಜೆ, ಅನಿತಾ ಎಸ್. ಸಣ್ಣಾರ, ಪುರಂದರ ಕೆಂಬಾರೆ, ನಾರಾಯಣ ಗೌಡ ಸೂಡ್ಲು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಅಯ್ಯಪ್ಪ ದೇವಸ್ಥಾನ ನೆಟ್ಟಣ
* ಶ್ರೀ ಶಾರದಾಂಬ ಭಜನಾ ಮಂದಿರ ಕೈಕಂಬ
* ಶ್ರೀ ಬಾಲಗೋಪಾಲ ಭಜನಾ ಮಂದಿರ ಪುತ್ತಿಲ ಬೈಲಡ್ಕ
* ಗಣಪತಿ ದೇವಸ್ಥಾನ, ನೆಟ್ಟಣ