ಬೆಟ್ಟಂಪಾಡಿ ಗ್ರಾಮ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ
ಅಂಚೆ: ಬೆಟ್ಟಂಪಾಡಿ, ಪುತ್ತೂರು, ದ.ಕ.-574 259, ಫೋನ್: 08251-288002, 9448833482

ಪುತ್ತೂರು ಪಟ್ಟಣದಿಂದ ಸುಳ್ಯ ಮಾರ್ಗದಲ್ಲಿ ಸಂಟ್ಯಾರು ಎಂಬಲ್ಲಿ ಬಲಕ್ಕೆ ತಿರುಗಿ ಪ್ರಯಾಣಿಸಿದಾಗ ಪ್ರಕೃತಿ ಮಧ್ಯೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯ ಗೋಚರಿಸುತ್ತದೆ.
ಕೃತ ಯುಗದಲ್ಲಿ ಶಿವಭಕ್ತನಾದ ಖರಾಸುರನೆಂಬ ಸಂಚಾರಿ ರಾಕ್ಷಸನಿದ್ದಂತೆ. ಆತ ಕಾಶಿಯಿಂದ ಮೂರು ಲಿಂಗಗಳನ್ನು ಏಕ ಕಾಲದಲ್ಲಿ ಬಾಯಿ ಮತ್ತು ಎರಡು ಕೈಗಳಿಂದಲೂ ತಂದನಂತೆ. ಹಾಗೆ ತಂದ ಶಿವಲಿಂಗಗಳಿಗೆ ಪ್ರಾತಃ ಕಾಲದಲ್ಲಿಯೆ ಮೂರು ಹೊತ್ತಿನ ಪೂಜೆಯನ್ನು ಹೊತ್ತು ಹೊತ್ತಿಗೆ ಒಂದರಂತೆ ಪ್ರತ್ಯೇಕ ಪ್ರತ್ಯೇಕ ಲಿಂಗಗಳಂತೆ ಪೂಜೆ ಮಾಡಿ ವಿಸರ್ಜಿಸುತ್ತಿದ್ದನಂತೆ. ಆ ರೀತಿ ವಿಸರ್ಜಿಸಲ್ಪಟ್ಟ ಲಿಂಗಗಳ ಪೈಕಿ ಬಾಯಿಯಿಂದ ತಂದ ಲಿಂಗವು ಕೇರಳ ರಾಜ್ಯದ ಕಾಸರಗೋಡಿನ ನೆಟ್ಟಣಿಗೆ ಗ್ರಾಮದಲ್ಲೂ ಎಡಕೈಯಿಂದ ತಂದ ಲಿಂಗ ಕಾಸರಗೋಡು ತಾಲೂಕಿನ ಮುಂಡೂರು ಗ್ರಾಮದ ಆಲಂಗೂಡ್ಲು ಎಂಬಲ್ಲೂ, ಬಲಕೈಯಿಂದ ತಂದ ಲಿಂಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬೆಟ್ಟಂಪಾಡಿ ಗ್ರಾಮದ ಕೊರಂದ್ರಪಾಡಿ ಗುಡ್ಡದಲ್ಲೂ ಉದ್ಭವಿಸಿತಂತೆ. ಈ ರೀತಿ ಕೊರಂದ್ರೆಪಾದೆ ಗುಡ್ಡದಲ್ಲಿ ಉದ್ಭವಿಸಿದ ಲಿಂಗವನ್ನು ಋಷಿಯೊಬ್ಬರು ಪೂಜಿಸುತ್ತಿದ್ದ ಕಾಲಘಟ್ಟದಲ್ಲಿ ತನ್ನ ವೃದ್ಧಾಪ್ಯದ ಕಾರಣದಿಂದ ದೇವರಲ್ಲಿ ಪ್ರಾರ್ಥಿಸಿಕೊಂಡು ಬೆಟ್ಟಂಪಾಡಿ ಗ್ರಾಮದ ಮಧ್ಯ ಭಾಗವಾದ ಈಗ ಇರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿದರಂತೆ ಈ ಮೂರು ಕ್ಷೇತ್ರಗಳೂ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಗಳಾಗಿ ಪ್ರಸಿದ್ಧಿ ಪಡೆದಿದೆ.
ಕೆಲವು ವರ್ಷಗಳ ಹಿಂದೆ ಕೊರಂದ್ರ ಪಾದೆ ಗುಡ್ಡವು ಬಿಲ್ವ ಪತ್ರೆಯ ಗಿಡ ಮರ ಪೊದರುಗಳಿಂದ ಕೂಡಿತ್ತು. ನವೋದಯ ಪ್ರೌಢಶಾಲೆಯ ಆಟದ ಮೈದಾನದ ನಿರ್ಮಾಣದ ಸಂದರ್ಭದಲ್ಲಿ ಸಂಪೂರ್ಣ ನಾಶ ಮಾಡಲ್ಪಟ್ಟಿತು. ಈ ಸಂದರ್ಭದಲ್ಲಿ ನಾಗರ ಹಾವೊಂದು ಬಂದು ಅನೇಕ ದಿನಗಳ ತನಕ ಶಾಲೆಯಲ್ಲಿ ವಾಸವಾಗಿತ್ತು. ಪ್ರಖ್ಯಾತ ಜ್ಯೋತಿಷ್ಯರಲ್ಲಿ ಪ್ರಶ್ನಿಸಿದಾಗ ಶ್ರೀ ಮಹಾಲಿಂಗೇಶ್ವರದ ಕಟ್ಟೆಯನ್ನು ಕಟ್ಟಿಸಿ ಜಾತ್ರೋತ್ಸವ ಕಾಲದಲ್ಲಿ ದೇವರನ್ನಿಟ್ಟು ಕಟ್ಟೆಪೂಜೆಯನ್ನು ಮಾಡಬೇಕೆಂದು ಪರಿಹಾರ ತಿಳಿಸಿದರು. ಅದರಂತೆ ಕಟ್ಟೆಯನ್ನು ಕಟ್ಟಿ ಶುದ್ಧಕಳಸ ಮಾಡಿದ ಬಳಿಕ ಹಾವು ಮಾಯವಾಯಿತು. ಈ ಸಮಯದಲ್ಲೇ ಕೊರಂದಪಾದೆ ಗುಡ್ಡಕ್ಕೆ ಬಿಲ್ವಗಿರಿ ಎಂದು ಪುನರ್ ನಾಮಕರಣ ಮಾಡಲಾಯಿತು. ಈಗ ಬಿಲ್ವಗಿರಿಯೆಂದೇ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಜಾತ್ರೋತ್ಸವ ನಡೆಯುವ ಕಾಲದಲ್ಲಿ ಇಲ್ಲಿಯ ಕಟ್ಟೆಗೂ ದೇವರ ಸವಾರಿ ಬರುತ್ತದೆ. ಆಗ ಕಟ್ಟೆಯಲ್ಲಿ ದೇವರನ್ನಿಟ್ಟು ಕಟ್ಟೆಪೂಜೆ ನಡೆಯುತ್ತದೆ.
ಶ್ರೀ ಮಹಾಲಿಂಗೇಶ್ವರ ದೇವರು ಪ್ರಮುಖ ಆರಾಧ್ಯ ದೇವರಾಗಿಯೂ, ದೀಪಾರಾಧನೆ ಮತ್ತು ಗಣಹೋಮದ ಮೂಲಕ ಶ್ರೀದುರ್ಗೆ ಶ್ರೀ ಗಣಪತಿ ಉಪದೇವತೆಗಳಾಗಿಯೂ ಆರಾಧಿಸಲ್ಪಡುತ್ತದೆ. ದೇವರಿಗೆ ರುದ್ರಾಭಿಷೇಕ, ಹಣ್ಣುಕಾಯಿ, ನೈವೇದ್ಯ ಸಮರ್ಪಣೆ, ಪೂಜೆ ನಡೆಯುತ್ತದೆ. ವಿಶೇಷವಾಗಿ ಸೋಮವಾರ ಪೂಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ನಡೆಯುತ್ತದೆ. ೨೦೧೩ನೇ ಫೆಬ್ರವರಿ ತಿಂಗಳಲ್ಲಿ ದೇವಳದ ಪುನರ್ ನವೀಕರಣ ಅಷ್ಟಬಂಧ ಬ್ರಹ್ಮಕಲಶ ನಡೆದಿದೆ.
ಅನುವಂಶಿಕ ಆಡಳಿತ ಮೊಕ್ತೇಸರರು – ವಿನೋದ್ ಬಲ್ಲಾಳ್, ಮೊಕ್ತೇಸರರು – ಮಂಜುನಾಥ ರೈ ಗುತ್ತು, ಗಂಗಾಧರ ರೈ ಮದಕ, ಗಣಪತಿ ಭಟ್ ಕಕ್ಕೂರು, ಯೋಗೀಶ್ ಮಣಿಯಾಣಿ ತಲಪಾಡಿ, ಕೃಷ್ಣ ಭಟ್ ಅಡ್ಯೆತ್ತಿಮಾರ್, ವಸಂತ ರೈ ಪೊರ್ದಾಳ್, ರವೀಂದ್ರನಾಥ ರೈ ಡೆಮ್ಮಂಗಾರ, ಸೋಮಪ್ಪ ಗೌಡ ಮಿತ್ತಡ್ಕ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ಶ್ರೀ ರುದ್ರಾಂಡಿ ಪರಿವಾರ ದೈವಸ್ಥಾನ ಮಿತ್ತಡ್ಕ, (ಸೋಮಪ್ಪ ಗೌಡ) ೨೮೭೦೧೫

* ಶ್ರೀ ಕಲ್ಲುರ್ಟಿ ದೈವಸ್ಥಾನ ಬೆಟ್ಟಂಪಾಡಿ, ೯೪೪೮೮೯೬೩೩೪ (ವೆಂಕಟ್ರಾವ್), ೨೮೮೩೩೪

* ಶ್ರೀ ರುದ್ರಾಂಡಿ ಪರಿವಾರ ದೈವಸ್ಥಾನ ಪಾರ (ಸುಬ್ಬಣ್ಣ ಗೌಡ ಪಾರ) ೯೪೪೯೨೧೫೮೧೫

* ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ರೆಂಜ, ೨೮೮೨೯೬

* ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ, ವಿನಾಯಕನಗರ, ೯೮೪೫೬೯೨೩೩೫ (ಚಂದ್ರನ್)

*ಶ್ರೀ ಕೃಷ್ಣ ಭಜನಾ ಮಂದಿರ ಗುಮ್ಮಟಗದ್ದೆ (ವಾಸುದೇವ ಪೂಜಾರಿ) ೯೪೪೯೧೦೩೮೯೫

* ಶ್ರೀ ಕೃಷ್ಣ ಭಜನಾ ಮಂಡಳಿ ಗುಂಡ್ಯಡ್ಕ

* ಶ್ರೀ ಚೆಲ್ಯಡ್ಕ ಗುಳಿಗ ದೈವಸ್ಥಾನ (ನವೀನ್ ರೈ) ೯೪೪೯೮೨೮೭೬೦

* ಶ್ರೀ ಅರಂತನಡ್ಕ ಅಯ್ಯಪ್ಪ ಭಜನಾ ಮಂದಿರ

* ಶ್ರೀ ರಕ್ತೇಶ್ವರಿ ದೈವಸ್ಥಾನ ಅರಂತನಡ್ಕ

* ಶ್ರೀ ಕೊರಗ ತನಿಯ ದೈವಸ್ಥಾನ ಗುಮ್ಮಟಗದ್ದೆ (ಮುತ್ತಪ್ಪ ಪೂಜಾರಿ) ೯೪೮೧೩೪೫೧೯೯.