ಬೆಳ್ಳಿಪ್ಪಾಡಿ ಗ್ರಾಮ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬೆಳ್ಳಿಪ್ಪಾಡಿ
ಅಂಚೆ: ಕೋಡಿಂಬಾಡಿ, ಪುತ್ತೂರು, ದ.ಕ. ಮೊ: 9535616147

ಪುತ್ತೂರಿನಿಂದ ಉಪ್ಪಿನಂಗಡಿ ಮಾರ್ಗದಲ್ಲಿ ಸಾಗಿ ಬೆಳ್ಳಿಪ್ಪಾಡಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ಮುಂದುವರಿದರೆ ಸಿಗುವುದೇ ಬೆಳ್ಳಿಪ್ಪಾಡಿ. ಇಲ್ಲಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಸುಮಾರು ೩೦೦ ವರ್ಷಗಳ ಇತಿಹಾಸವಿರುವ ಸ್ಕಂದ ಕ್ಷೇತ್ರ. ಋಷಿ ಮುನಿಗಳ ಕಾಲ ದಿಂದಲೇ ತಪೋ ಭೂಮಿಯ ಅತ್ಯಂತ ಪುಣ್ಯಪ್ರದ ಕ್ಷೇತ್ರವಾಗಿ ಪ್ರಸಿದ್ಧ.
ಇಲ್ಲಿಯ ಮಣ್ಣಿನ ಕಣಕಣದಲ್ಲೂ ದೇವತಾ ಸಾನ್ನಿಧ್ಯವಿರುವುದಕ್ಕೆ ಈ ದೇವಳದ ಸುತ್ತ ಮುತ್ತಣದ ಮಣ್ಣಿನ ಬಣ್ಣ ಹಳದಿಯಾಗಿರುವುದೇ ಸಾಕ್ಷಿ. ಬೆಳ್ಳಿಪ್ಪಾಡಿ ಕ್ರಾಸ್‌ನಿಂದ ಸುಮಾರು ೨ ಕಿಲೋ ಮೀಟರ್ ಸಾಗಿದಾಗ ಈ ದೇವಸ್ಥಾನ ಕಾಣಸಿಗುತ್ತದೆ. ೨೦೦೮ರಲ್ಲಿ ಬೆಳ್ಳಿಪ್ಪಾಡಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡು ಸುಮಾರು ೬೦ ಲಕ್ಷ ರೂ. ವೆಚ್ಚದಲ್ಲಿ ಭವ್ಯವಾದ ದೇಗುಲವು ನಿರ್ಮಾಣಗೊಂಡಿದೆ. ಸುಬ್ರಹ್ಮಣ್ಯ, ಗಣಪತಿ ದೇವರುಗಳ ಮೂರ್ತಿ ಇದ್ದು ಪ್ರತೀ ದಿನ ಪೂಜೆ, ಪ್ರತೀ ವರ್ಷ ಧನುಪೂಜೆ, ವಾರ್ಷಿಕ ಪ್ರತಿಷ್ಠಾ ಉತ್ಸವ, ಕಿರುಷಷ್ಠಿ ಉತ್ಸವಾದಿಗಳೂ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷರಾದ ಸಂಕಪ್ಪ ರೈಯವರ ಮುಂದಾಳತ್ವದಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಕಲೇಶ್ವರ
* ಶ್ರೀ ಕಲ್ಕುಡ ದೈವಸ್ಥಾನ ಬೆಳ್ಳಿಪ್ಪಾಡಿ
* ಶ್ರೀ ಆದಿ ಮುಗೇರ್ಕಳ ದೈವಸ್ಥಾನ ಬೆಳ್ಳಿಪ್ಪಾಡಿ
* ಬೆಳ್ಳಿಪ್ಪಾಡಿ ಕೋಡಿ ಕುಟುಂಬದ ಧರ್ಮ ದೈವಸ್ಥಾನ
* ಶ್ರೀ ಶಾಸ್ತಾವು ದೇವಸ್ಥಾನ ಬೆಳ್ಳಿಪ್ಪಾಡಿ