ಶ್ರೀ ಮಹಾಮಾಯ ದೇವಸ್ಥಾನ, ಎಂ.ಟಿ. ರಸ್ತೆ, ಪುತ್ತೂರು. ಫೋನ್: 08251-232775

ಪುತ್ತೂರು ಬಸ್‌ಸ್ಟ್ಯಾಂಡ್ ಎದುರು ಎಂ.ಟಿ. ರಸ್ತೆಯಲ್ಲಿ ಸಾಗಿದರೆ ೫೦ ಮೀಟರ್ ದೂರದಲ್ಲಿ ಈ ದೇವಳ ಸಿಗುತ್ತದೆ. ೧೯೧೫ರಲ್ಲಿ ಮಾಘಶುದ್ಧ ಚತುದರ್ಶಿಯಂದು ಶ್ರೀ ಮಹಮ್ಮಾಯಿ ದೇವರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ನವರಾತ್ರಿ ಮಹೋತ್ಸವ, ಪ್ರತಿಷ್ಠಾ ವರ್ಧಂತಿ, ಹೋಳಿಹಬ್ಬ, ಯುಗಾದಿ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತಿದ್ದು, ದೇವಿಗೆ ಕುಂಕುಮಾರ್ಚನೆ, ಅಲಂಕಾರ ಪೂಜೆ, ಕರ್ಪೂರಾರತಿ, ದೇವಿ ಪಾರಾಯಣ ಇತ್ಯಾದಿ ಸೇವೆಗಳನ್ನು ಸಮರ್ಪಿಸಲಾಗುತ್ತದೆ. ಬೆಳಿಗ್ಗೆ ೬.೩೦ ಗಂಟೆಗೆ, ಮಧ್ಯಾಹ್ನ ೧೨.೧೫ ಹಾಗೂ ರಾತ್ರಿ ೮ ಗಂಟೆಗೆ ನಿತ್ಯಪೂಜೆ ನಡೆಯುತ್ತದೆ. ಪ್ರತೀ ತಿಂಗಳ ಕೊನೆಯ ಶುಕ್ರವಾರ ಮತ್ತು ಪ್ರತಿ ತಿಂಗಳ ಕೊನೆಯ ಮಂಗಳವಾರ ಆಶ್ಲೇಷ ಪೂಜೆ ನಡೆಯುತ್ತದೆ.

ಆಡಳಿತ ಮೊಕ್ತೇಸರರಾಗಿ ಎನ್.ಕೆ. ಮಲ್ಯ ಹಾಗೂ ಸದಸ್ಯರಾಗಿ ಸತೀಶ್ ನಾಯಕ್ ಕಾರ್ಯನಿರ್ವಹಿಸುತ್ತಿದ್ದಾರೆ.