34 ನೆಕ್ಕಿಲಾಡಿ ಗ್ರಾಮ

ಶ್ರೀಮಹಾವಿಷ್ಣು ದೇವಸ್ಥಾನ ಶಾಂತಿನಗರ

ಶ್ರೀ ಕ್ಷೇತ್ರಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಹಿಂದೆ ರಾಜಮನೆತನ ದವರು ಸಂತಾನಾ ಪೇಕ್ಷಿಗಳಾಗಿ ಬ್ರಾಹ್ಮಣ ಮಖೇನ ಶ್ರೀ ಮಹಾಗಣಪತಿ, ಶ್ರೀ ನಾಗದೇವರು ಹಾಗೂ ಪ್ರಧಾನ ಶಕ್ತಿಯಾಗಿ ಶ್ರೀ ಮಹಾವಿಷ್ಣು ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದುದಾಗಿ ಅಷ್ಠಮಂಗಳ ಪ್ರಶ್ನೆ ಮುಖೇನ ತಿಳಿದುಬಂದಿದೆ.
ಧರ್ಮದೈವಗಳಾದ ಶ್ರೀ ರಕ್ತೇಶ್ವರಿ ಮಹಿಷಂದಾಯ ಪಂಜುರ್ಲಿ ಹಾಗೂ ಗುಳಿಗ ದೈವಗಳನ್ನು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಆರಾಧನೆ ಮಾಡಲಾಗುತ್ತಿದೆ. 2009ನೇ ಇಸವಿಯ ಮೇ ತಿಂಗಳ ೬ರಂದು ನಡೆದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಪುನಃ ಪ್ರತಿಷ್ಠಾಪನೆಗೊಂಡ, ಶ್ರೀ ದೇವಳದಲ್ಲಿ ನಿತ್ಯ ಮಹಾಪೂಜೆ ಬೆಳಿಗ್ಗೆ ೮.೩೫ಕ್ಕೆ
ನಡೆಯುತ್ತಿದೆ. ಪ್ರತಿ ಸಂಕ್ರಮಣದಂದು ಬೈಲುವಾರು ಹಂಚಿಕೆಯಲ್ಲಿ ದುರ್ಗಾಪೂಜೆ, ಭಜನಾಸೇವೆ ಹಾಗೂ ಆ ದಿನ ಶ್ರೀ ದೇವರಿಗೆ ರಾತ್ರಿ ಮಹಾಪೂಜೆ ಜರಗುತ್ತದೆ.
ನಾಗರ ಪಂಚಮಿಯಂದು ಶ್ರೀ ನಾಗದೇವರಿಗೆ ತಂಬಿಲ ಸೇವೆ. ಭಾದ್ರಪದ ಚೌತಿಯಿಂದ ೬ ತೆಂಗಿನಕಾಯಿ ಗಣಪತಿ ಹವನ ತೆನೆಹಬ್ಬದ ತೆನೆ ವಿತರಣೆ (ಮನೆ ತುಂಬಿಸುವುದು) ಜರಗುತ್ತಿದೆ. ವಿಷು ಸಂಕ್ರಮಣದಂದು ಶ್ರೀ ದೇವರಿಗೆ ಖಣಿ ಇಡುವುದು. ದೀಪಾವಳಿ, ಪತ್ತನಾಜೆ ಪರ್ವ ದಿನಗಳಲ್ಲಿ ಧರ್ಮ ದೈವಗಳಿಗೆ ತಂಬಿಲ ಸೇವೆ ಜರಗುತ್ತಿದೆ. ಶ್ರೀ ಮಹಾವಿಷ್ಣು ದೇವರಿಗೆ ಪ್ರಿಯವಾದ ಹಾಲು ಪಾಯಸ ಸೇವೆ, ರಂಗಪೂಜೆ ಸೇರಿದಂತೆ ಹಲವಾರು ಸೇವೆಗಳು, ಗ್ರಹಚಾರ ದೋಷ ನಿವಾರಣ ಶಾಂತಿ ಹವನಗಳನ್ನು ನಡೆಸಲು ದೇವಳದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಆಡಳಿತ ಮೊಕ್ತೇಸರರು – ಯು.ಜಿ. ರಾಧಾ (೯೮೪೫೬೯೧೫೯೦), ಮೊಕ್ತೇಸರರು – ಡಾ. ರಘು ಬೆಳ್ಳಿಪ್ಪಾಡಿ (೯೪೪೮೩೨೮೧೮೪), ಗಣಪತಿ ಭಟ್ ಪರನೀರು (೯೯೪೫೨೯೦೬೪೮), ವಸಂತ ಕಾಮತ್ ಪರನೀರು (೯೪೪೮೧೨೯೩೯೫), ಪುರುಷೋತ್ತಮ ಭಟ್ ಅನಗೂರು (೯೪೪೮೭೭೦೬೨೮), ದಿವಾಕರ ಶೆಟ್ಟಿ ಕಾನೋಜಿ (೯೪೮೧೮೪೩೩೭೧), ರಮೇಶ್ ಗೌಡ ಬೇರಿಕೆ (೯೬೬೩೧೩೯೧೩೧), ರಾಜೇಶ್ ರಾವ್ ಶಾಂತಿನಗರ (೯೦೦೮೧೩೬೩೩೦), ರಾಜೀವ ರೈ (೮೨೭೭೬೫೩೬೫೦), ನಾಗರಾಜ ಭಟ್ (ಅರ್ಚಕರು)-೯೭೩೧೮೫೪೪೯೧, ಸಲಹಾ ಸಮಿತಿ – ಧನ್ಯಕುಮಾರ್ ರೈ ಬಿಳಿಯೂರುಗುತ್ತು (೯೪೪೮೪೬೫೨೯೯), ಅಶೋಕ್ ಕುಮಾರ್ ರೈ ಕೆ.ಎಸ್. (೯೪೪೮೩೮೦೯೬೯), ಪುರುಷೋತ್ತಮ ಮುಂಗ್ಲಿಮನೆ (೯೪೪೮೨೫೩೩೯೬)

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಗುರುರಾಘವೇಂದ್ರ ಮಠ 34ನೇ ನೆಕ್ಕಿಲಾಡಿ
* ಅಂಬೆಲ ಪಂಜುರ್ಲಿ ಕಲ್ಕುಡ ದೈವಸ್ಥಾನ
* ಶ್ರೀ ಸತ್ಯನಾರಾಯಣ ಭಜನಾ ಮಂದಿರ ಸುಭಾಸ್‌ನಗರ
* ಶ್ರೀ ರಾಮ ಭಜನಾ ಮಂದಿರ ಆದರ್ಶ ನಗರ