







807ಕೋಟಿ ವ್ಯವಹಾರ – 2.13ಕೋಟಿ ಲಾಭ – ಸದಸ್ಯರಿಗೆ 16.25% ಡಿವಿಡೆಂಡ್


ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ 2025-26ನೇ ಸಾಲಿನ ಮಹಾಸಭೆಯು ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.




ರಮೇಶ್ನಾಯಕ್ ಕೆ.ರವರು ಮಾತನಾಡಿ ಸಂಘವು ವರದಿ ಸಾಲಿನಲ್ಲಿ 807ಕೋಟಿ ವ್ಯವಹಾರ ನಡೆಸಿ 2.13ಕೋಟಿ ಲಾಭ ಗಳಿಸಿದೆ. 5.60ಕೋಟಿರೂಪಾಯಿ ಪಾಲು ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ 5119 ‘ಎ’ ತರಗತಿ ಸದಸ್ಯರನ್ನು ಹೊಂದಿದ್ದು, ರೂ. 236 ಕೋಟಿ ರೂಪಾಯಿ ಠೇವಣಿ ಹೊಂದಿದೆ. ರೂ.207.60 ಕೋಟಿ ಹೊರಬಾಕಿ ಸಾಲ ಇದ್ದು, ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘದ ಸದಸ್ಯರಿಗೆ 16.25% ಡಿವಿಡೆಂಡ್ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೆ, ಸಂಘದ ಸದಸ್ಯರ ಪ್ರತಿಭಾನ್ವಿತ 85 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.ಸಂಘದಲ್ಲಿ ಸದಸ್ಯರಾಗಿದ್ದು ಮರಣ ಹೊಂದಿದ ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಿಯಾಝ್ ಅವರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ನವೀನ್ ಪಿ.ಎಸ್. ನಿರ್ದೇಶಕರಾದ ರಾಜೇಂದ್ರ ರೈ, ಡಾ. ನವೀನ್ ಕೋಣಾಜೆ,ಪುಷ್ಪರಾಜ್ ಬಿ., ಅನಿತಾ ಮಿನೇಜಸ್, ಭಾರತಿ, ಉಮಾನಾಥ ರೈ ಎಂ., ಶಿವಕುಮಾರ್ ಎಂ.ಜಿ., ನಾಗೇಶ್ ಪಾಟಾಳಿ ಕೆ., ಸಂದೇಶ್ ಎಂ.ಎಸ್., ರಘು, ರವಿ ನಾಯ್ಕ ಐ., ಲಕ್ಷ್ಮೀಕಾಂತ್ ಬೇಕಲ್ ಎಸ್., ಶ್ರೀಧರ ಎನ್., ಶೀನಪ್ಪ ಎನ್. ಅಖಿಲ್ ಶೆಟ್ಟಿ ಉಪಸ್ಥಿತರಿದ್ದರು
ಸಂಘದ ಜನರಲ್ ಮ್ಯಾನೇಜರ್ ಸುಚಿನ್ ರಾಜ್ ಶೆಟ್ಟಿರವರು ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.ಉಪಾಧ್ಯಕ್ಷರಾದ ನವೀನ್ ಪಿ.ಎಸ್. ಹಾಗೂ ನಿರ್ದೇಶಕರಾದ ಉಮಾನಾಥ ರೈ ಅವರು ವಂದಿಸಿದರು. ನಿರ್ದೇಶಕರಾದ ರಾಜೇಂದ್ರ ರೈ ಕಾರ್ಯಕ್ರಮವನ್ನು ನಿರೂಪಿಸಿದರು.ಅಧ್ಯಕ್ಷರಾದ ರಮೇಶ್ ನಾಯಕ್ ಅವರು ಸ್ವಾಗತಿಸಿದರು.












