






ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಗಣೇಶೋತ್ಸವದಲ್ಲಿ ಭಜನೆ ಕಾರ್ಯಕ್ರಮ ಉದ್ಘಾಟನೆ ನಡೆಯಿತು.
ಸಾರ್ವಜನಿಕ ಗಣೆಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ ಕೊಟೇಚಾ ಅವರು ಭಜನೆ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ ಶ್ರೀನಿವಾಸ್, ಖಜಾಂಜಿ ನೀಲಂತ್, ದಯಾನಂದ, ಭಜನಾ ಕಾರ್ಯಕ್ರಮ ನೀಡುವ ಗಾನಸಿರಿ ಕಲಾ ಕೇಂದ್ರದ ಡಾ| ಕಿರಣ್ ಕುಮಾರ್ ಮತ್ತು ಬಳಗ ಉಪಸ್ಥಿತರಿದ್ದರು.











