ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಇದರ ಮಹಾಸಭೆಯು ಪಡಿ ಸಂಸ್ಥೆ ಮಂಗಳೂರು ಇದರ ಸಭಾಂಗಣದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ನಂದಾ ಪಾಯಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಪುತ್ತೂರು ತಾಲೂಕಿನ ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷರಾಗಿರುವ ನಯನ ರೈ ಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಾಲ್ಟರ್ ಪಿಂಟೋ, ಪ್ರಧಾನ ಕಾರ್ಯದರ್ಶಿಯಾಗಿ ಕಮಲ ಗೌಡ, ಜೊತೆ ಕಾರ್ಯದರ್ಶಿಯಾಗಿ ಉಷಾ ನೈಕ್, ಕೋಶಾಧಿಕಾರಿ ರಾಜೇಶ್ವರಿ, ಸಂಘಟನಾ ಕಾರ್ಯದರ್ಶಿಯಾಗಿ ನಂದಾ ಪಾಯಸ್ ಆಯ್ಕೆಯಾದರು. ಸದಸ್ಯರಾಗಿ ದುರ್ಗಾ ಪ್ರಸಾದ್, ಆಶಲತಾ, ನ್ಯಾಯವಾದಿ ಹರಿನಾಕ್ಷಿ ಜೆ ಶೆಟ್ಟಿ, ನಾರಾಯಣ ಕಿಲಂಗೋಡಿ, ಪ್ರೇಮಿ ಫರ್ನಾಂಡಿಸ್, ಶಾರದಾ, ಶ್ರೀ ರಿಯಾಜ್ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆಯನ್ನು ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿಸೋಜರವರು ನಡೆಸಿಕೊಟ್ಟರು.