ಎಂ.ಸಿ.ಸಿ ಬ್ಯಾಂಕಿನ ಪುತ್ತೂರು ಶಾಖೆಯ ಗ್ರಾಹಕರ ಸಮಾವೇಶ

0

  • ಅವಿಭಜಿತ ದ.ಕ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು-ವಂ|ಸ್ಟ್ಯಾನಿ ಪಿಂಟೋ

ಪುತ್ತೂರು: ರಾಷ್ಟ್ರೀಕೃತ ಬ್ಯಾಂಕ್‌ಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಹುಟ್ಟಿಕೊಂಡಿದ್ದು ಅವನ್ನು ಪೋಷಿಸುವ ನಾವೆಲ್ಲಾ ಭಾಗ್ಯವಂತರು. ಒಂದರ್ಥದಲ್ಲಿ ಅವಿಭಜಿತ ದ.ಕ ಜಿಲ್ಲೆಯು ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಎನಿಸಿಕೊಂಡಿದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋರವರು ಹೇಳಿದರು.

ಮಂಗಳೂರು ಹಂಪನಕಟ್ಟೆಯಲ್ಲಿ ಆಡಳಿತ ಕಛೇರಿ ಹೊಂದಿರುವ ಎಂ.ಸಿ.ಸಿ ಬ್ಯಾಂಕ್ ಲಿಮಿಟೆಡ್ ಇದರ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಎಪಿಎಂಸಿ ರಸ್ತೆಯ ಡಾಯಸ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಎಂಸಿಸಿ ಬ್ಯಾಂಕಿನ ಪುತ್ತೂರು ಶಾಖೆಯ ಗ್ರಾಹಕರ ಸಮಾವೇಶವು ಸೆ.೧೮ ರಂದು ಸಂಜೆ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿದ್ದು, ಈ ಸಮಾವೇಶವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿಂಗ್ ಕ್ಷೇತ್ರ ಎಂಬುದು ಉದ್ಯಮ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಸಾಕಷ್ಟು ಏಳು-ಬೀಳುಗಳನ್ನು ದಾಟಿ ಮುನ್ನೆಡೆಯಬೇಕಾಗುತ್ತದೆ. ಬ್ಯಾಂಕ್‌ಗಳ ಆಧಾರಸ್ತಂಭ ಗ್ರಾಹಕರು. ಬ್ಯಾಂಕಿನಲ್ಲಿ ವ್ಯವಹಾರ ಮಾಡುವ ಗ್ರಾಹಕರು ಶ್ರೀಮಂತರಲ್ಲ. ಬ್ಯಾಂಕಿಗೆ ಆಗಮಿಸುವ ಗ್ರಾಹಕರಿಗೆ ನಗುಮುಖದ ಹಾಗೂ ವಿಶ್ವಾಸಾರ್ಹತೆಯುಳ್ಳ ಸೇವೆ ನೀಡಿದಾಗ ಎಷ್ಟೇ ಕಠಿಣ ಸವಾಲುಗಳಿದ್ದರೂ ಅವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. ಒಳ್ಳೆಯ ಕಾರ್ಯಗಳನ್ನು ನಾಳೆಗೆ ಇಡದೆ ಇಂದೇ ಮಾಡಿ ಮುಗಿಸುವಂತಾಗಲಿ ಎಂದರು.

ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ-ಅನಿಲ್ ಲೋಬೊ:
ಅಧ್ಯಕ್ಷತೆ ವಹಿಸಿದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊರವರು ಮಾತನಾಡಿ, ಗ್ರಾಹಕರೇ ದೇವರು ಎಂಬ ಧ್ಯೇಯದೊಂದಿಗೆ ನಮ್ಮ ಆಡಳಿತ ಸಮಿತಿ ಆಸ್ತಿತ್ವಕ್ಕೆ ಬಂದಿರುವುದು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವುದೇ ನಮ್ಮ ಗುರಿಯಾಗಿದೆ. ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಜೊತೆ ಜೊತೆಯಾಗಿ ಹೆಜ್ಜೆಯಿಟ್ಟಾಗ ಮಾತ್ರ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯ. ಬ್ಯಾಂಕಿನ ಬಗ್ಗೆ ಗ್ರಾಹಕರಲ್ಲಿನ ಭಾವನೆಗಳು ಹಾಗೂ ಬ್ಯಾಂಕ್ ಅಭಿವೃದ್ಧಿಯಲ್ಲಿ ಗ್ರಾಹಕರ ಸಲಹೆಗಣಲನ್ನು ತಿಳಿಯಲು ನಾವು ಅಲ್ಲಲ್ಲಿ ಗ್ರಾಹಕರ ಸಮಾವೇಶ ಏರ್ಪಡಿಸಿರುವುದಾಗಿದೆ. ನಮ್ಮ ಬ್ಯಾಂಕ್ ಪ್ರಸ್ತುತ ರೂ.೮೬೫ ಕೋಟಿಯ ವ್ಯವಹಾರ, ರೂ.8.08 ಕೋಟಿ ಲಾಭಾಂಶವನ್ನು ಹೊಂದಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದ ಅವರು ಬ್ಯಾಂಕ್ ಆರ್.ಬಿ.ಐ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ವರ್ಷಕ್ಕೊಮ್ಮೆ ಆಡಿಟ್ ಮಾಡಲಾಗುತ್ತದೆ. ಅವಿಭಜಿತ ದ.ಕ ಜಿಲ್ಲೆಯು ಬ್ಯಾಂಕ್‌ಗಳ ತೊಟ್ಟಿಲು ಎನಿಸಿಕೊಂಡಿತ್ತು. ಆದರೆ ಇಂದು ಬ್ಯಾಂಕ್‌ಗಳು ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡು ಬ್ಯಾಂಕ್‌ನಲ್ಲಿನ ಸಿಬ್ಬಂದಿಗಳು ಕೂಡ ನಮ್ಮವರಿಲ್ಲದಿರುವುದು ಬೇಸರ ತರಿಸುತ್ತಿದೆ. ಇದೀಗ ನಮ್ಮ ಬ್ಯಾಂಕ್ ೧೧೦ ವರ್ಷಗಳನ್ನು ಪೂರೈಸುತ್ತಿರುವ ನಿಟ್ಟಿನಲ್ಲಿ ಇದೇ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಗ್ರಾಹಕರು ಆ ಕಾರ್ಯಕ್ರಮಕ್ಜೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಹೇಳಿದರು.

ಬ್ಯಾಂಕ್ ಬಗ್ಗೆ ತಿಳಿದುಕೊಳ್ಳುವವರಾಗಿ-ಜೋನ್ ಕುಟಿನ್ಹಾ:
ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಮಾತನಾಡಿ, ಎಂಸಿಸಿ ಬ್ಯಾಂಕಿನ ಗ್ರಾಹಕರಾದವರು ಬ್ಯಾಂಕ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವವರಾಗಬೇಕು. ಯಾವುದೇ ಬ್ಯಾಂಕ್ ಇರಲಿ, ಅಲ್ಲಿನ ಸಿಬ್ಬಂದಿಗಳು ಗ್ರಾಹಕರಲ್ಲಿ ನಗುಮುಖದೊಂದಿಗೆ ಸೇವೆಯನ್ನು ನೀಡಿದಾಗ ಆ ಬ್ಯಾಂಕ್ ಉನ್ಬತಿ ಗಳಿಸಬಲ್ಲುದು. ಬ್ಯಾಂಕಿನ ಪ್ರಗತಿಯಲ್ಲಿ ಗ್ರಾಹಕರು, ಠೇವಣಿದಾರರು, ಹಿಶೆದಾರರು ಮತ್ತು ಸಿಬ್ಬಂದಿ ವರ್ಗ ಪ್ರಧಾನ ಪಾತ್ರ ವಹಿಸುತ್ತಾರೆ. ಗ್ರಾಹಕರು ಬ್ಯಾಂಕಿನ ಸೇವೆಯ ಬಗ್ಗೆ ಸದಾ ಒಳ್ಳೆಯ ಮಾತುಗಳನ್ನಾಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದರು.

ಬ್ಯಾಂಕ್ ೧೬ ಶಾಖೆಗಳನ್ನು ಹೊಂದಿದೆ-ಸುನಿಲ್ ಐವನ್ ಮಿನೇಜಸ್:
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಮಹಾ ಪ್ರಬಂಧಕರಾದ ಸುನಿಲ್ ಐವನ್ ಮಿನೇಜಸ್‌ರವರು, ಎಂಸಿಸಿ ಬ್ಯಾಂಕ್ ಹದಿನಾರು ಶಾಖೆಗಳನ್ನು ಹೊಂದಿದ್ದು, ಈಗಾಗಲೇ ಹತ್ತು ಶಾಖೆಗಳಲ್ಲಿ ಗ್ರಾಹಕರ ಸಮಾವೇಶ ಮುಗಿಸಿ ಇಲ್ಲಿಗೆ ಆಗಮಿಸಿದ್ದೇವೆ. ಶಾಖೆಯಲ್ಲಿನ ವ್ಯವಹಾರದಲ್ಲಿನ ಕುಂದು-ಕೊರತೆಗಳು, ಬ್ಯಾಂಕಿನಲ್ಲಿ ಧನಾತ್ಮಕ ಸೇವೆಯನ್ನು ಹೇಗೆ ಹೆಚ್ಚಿಸಬಹುದು, ಗ್ರಾಹಕರಿಗೆ ಮತ್ತಷ್ಟು ತೃಪ್ತಿದಾಯಕ ಸೇವೆ ನೀಡಲು ಹೇಗೆ ಪ್ರಯತ್ನಿಸಬಹುದು ಎಂಬಿತ್ಯಾದಿ ಸಲಹೆ, ಸೂಚನೆಗಳನ್ನು ತಿಳಿಯಲು ಗ್ರಾಹಕರ ಸಮಾವೇಶ ಏರ್ಪಡಿಸಿರುವುದಾಗಿದೆ ಎಂದರು.

೬೫ ಹಿರಿಯ ನಾಗರಿಕರಿಗೆ ಅಭಿನಂದನೆ:
ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರೂ, ನಿರ್ದೇಶಕರಾಗಿರುವ ಜೆ.ಪಿ ರೊಡ್ರಿಗಸ್, ನಿಕಟಪೂರ್ವ ನಿರ್ದೇಶಕ ರೇಮಂಡ್ ಮೊಂತೇರೊ ಸಹಿತ ಬ್ಯಾಂಕಿನ ಹಿರಿಯ ನಾಗರಿಕ ಗ್ರಾಹಕರಾದ ಒಲಿವರ್ ರೆಬೆಲ್ಲೋ, ವಲೇರಿಯನ್ ಡಾಯಸ್, ಅಲೆಕ್ಸ್ ಮಾಡ್ತಾ, ಕ್ಲೆಮೆರೆನ್ಸಿಯಾ ಕ್ರಾಸ್ತಾ, ರೋಸಮ್ಮ, ಲೆತಿಶಿಯಾ ಮಸ್ಕರೇನ್ಹಸ್, ಹ್ಯಾರಿ ಡಾಯಸ್, ಅನ್ನಾ ಮರಿಯಾ ಡಿ’ಸೋಜ, ಮೈಕಲ್ ಕ್ರಾಸ್ತಾ, ಹೆರಿ ಡಾಯಸ್, ಲೂವಿಸ್ ಫೆರ್ನಾಂಡೀಸ್, ರೀಟಾ ಡಾಯಸ್, ಫಿಲೋಮಿನಾ ಡಿ’ಸೋಜ, ಪಾವ್ಲ್ ಮಸ್ಕರೇನ್ಹಸ್, ಲೆತ್ತಿಶಿಯಾ ಗೊನ್ಸಾಲ್ವಿಸ್, ಎಡ್ವರ್ಡ್ ಮೊಂತೇರೊ, ಪೀಟರ್ ಡಿ’ಸೋಜ, ಹಿಲ್ಡಾ ಡಿ’ಸೋಜ, ಜ್ಯೋ ಡಿ’ಸೋಜ, ಎಲಿಜಾ ಡಿ’ಸಿಲ್ವ, ಡೆನ್ನಿಸ್ ಗೊನ್ಸಾಲ್ವಿಸ್, ಲೀಯೊ ಗಲ್ಬಾವೋ, ಎಲ್ಯಾಸ್ ಕ್ರಾಸ್ತಾ, ಮಾರ್ಸೆಲ್ ಡಿ’ಸೋಜ, ಪ್ಯಾಟ್ರಿಕ್ ಲೋಬೊ, ಫಿಲೋಮಿನಾ ಡಿ’ಸೋಜ, ಚಾಲ್ಸ್೯ ರೆಬೆಲ್ಲೋ, ಜೆರೋಮ್ ಫುಡ್ತಾದೋ, ಝೇವಿಯರ್ ಡಿ’ಸೋಜ, ವಿನ್ಸೆಂಟ್ ತಾವ್ರೋ, ಅಲೀಮ, ತೆರೆಸಾ ಮಸ್ಕರೇನ್ಹಸ್, ವಲೇರಿಯನ್ ಲೋಬೊ, ಅಲೆಗ್ಸಾಂಡರ್ ಮಸ್ಕರೇನ್ಹಸ್, ವಿಲ್ಸನ್ ತಾವ್ರೋ, ರೀಟಾ ಮಸ್ಕರೇನ್ಹಸ್, ಲೂಸಿ ಮೊರಾಸ್, ಪ್ರೆಸ್ಸಿ ಪಾಸ್, ಜೆರೋಮ್ ಸೆರಾವೋ, ವಲೇರಿಯನ್ ಡಿ’ಸೋಜ, ಜೆರೋಮಿಯಸ್ ಪಾಸ್, ಲಾರೆನ್ಸ್ ಫುಡ್ತಾದೋ, ಸಿರಿಲ್ ವಾಸ್, ಹಿಲ್ಡಾ ಮಸ್ಕರೇನ್ಹಸ್, ಮಾರ್ಗರೇಟ್ ಲಸ್ರಾದೋ, ಅಂತೋನಿ ತೋರಸ್, ಮಾರ್ಸೆಲಿನ್ ಲಸ್ರಾದೋ, ಐಡಾ ಡಾಯಸ್, ಫಿಲೋಮಿನಾ, ಹೆಲೆನ್ ಲೋಬೊ, ಕೆ.ಹಮೀದ್, ರೊನಾಲ್ಡ್ ಕ್ರಾಸ್ತಾ, ಮೌರಿಸ್ ಮಸ್ಕರೇನ್ಹಸ್, ಜೋಕಿಂ ಮಿನೇಜಸ್, ಶೆರಿ ಮಸ್ಕರೇನ್ಹಸ್, ಪಾವ್ಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಜೋನ್ ಮಿನೇಜಸ್, ಕಾರ್ಮಿನ್ ಮೊಂತೇರೊ, ಜೋನ್ ಕುಟಿನ್ಹಾ, ಬೆಂಜಮಿನ್ ಡಿ’ಸೋಜರವರುಗಳನ್ನು ಗುರುತಿಸಿ ಶಾಲು ಹೊದಿಸಿ ಅಭಿನಂದಿಸಲಾಯಿತು.

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿದ ಬ್ಯಾಂಕಿನ ಗ್ರಾಹಕರಿಗೆ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊರವರು ಹೂ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಬ್ಯಾಂಕಿನ ಡಿಜಿಎಂ ರಾಜ್ ಎಫ್ ಮಿನೇಜಸ್, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವ, ನಿರ್ದೇಶಕರಾದ ಆಂಡ್ರ್ಯೂ ಡಿ’ಸೋಜ, ಜೋಸೆಫ್ ಎಂ.ಅನಿಲ್ ಪತ್ರಾವೋ, ಹೆರಾಲ್ಡ್ ಜೋನ್ ಮೊಂತೇರೊ, ಶ್ರೀಮತಿ ಐರಿನ್ ರೆಬೆಲ್ಲೋ, ಆಲ್ವಿನ್ ಪ್ರಶಾಂತ್ ಮೊಂತೇರೊ, ಫೆಲಿಕ್ಸ್ ಡಿ’ಕ್ರೂಜ್, ನಿಕಟಪೂರ್ವ ನಿರ್ದೇಶಕ ರೇಮಂಡ್ ಮೊಂತೇರೊರವರು ಉಪಸ್ಥಿತರಿದ್ದರು. ಗ್ರಾಹಕರಾದ ಪೀಟರ್ ಡಿ’ಸೋಜ, ವಲೇರಿಯನ್ ಲೋಬೊ, ಜ್ಯೋ ಡಿ’ಸೋಜ, ವಿಲ್ಮಾ ಗೊನ್ಸಾಲ್ವಿಸ್, ಹೆರಾಲ್ಡ್ ಮಾಡ್ತಾ, ವಿನ್ಸೆಂಟ್ ತಾವ್ರೋ(ರುತು), ರವಿ, ವಲೇರಿಯನ್ ಡಾಯಸ್, ಜೋನ್ ಮಿನೇಜಸ್, ಚಾಲ್ಸ್೯ ಮಸ್ಕರೇನ್ಹಸ್, ರೊನಾಲ್ಡ್ ಮೊಂತೇರೊ, ಆರ್ಥರ್ ಮೆಂಡೋನ್ಸಾರವರು ಬ್ಯಾಂಕಿನ ಮತ್ತಷ್ಟು ಪ್ರಗತಿಯ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಿದರು.
ಕು|ವಂದನಾ ಗೋವಿಯಸ್ ಹಾಗೂ ಕು|ನಂದನಾ ಗೋವಿಯಸ್ ಪ್ರಾರ್ಥಿಸಿದರು. ಎಂಸಿಸಿ ಬ್ಯಾಂಕಿನ ಪುತ್ತೂರು ಶಾಖಾ ನಿರ್ದೇಶಕ ಜೆ.ಪಿ ರೊಡ್ರಿಗಸ್ ಸ್ವಾಗತಿಸಿ, ಶಾಖಾ ಪ್ರಬಂಧಕ ಶರೂನ್ ಪಿಂಟೋ ವಂದಿಸಿದರು. ಶಾಖೆಯ ಸಿಬ್ಬಂದಿಗಳಾದ ಗ್ಲ್ಯಾಡೀಸ್ ಡಿ’ಸೋಜ, ಫ್ಲೇವಿಯನ್ ಡಿ’ಸಿಲ್ವ, ಫ್ಲಾವಿಯಾ ಪಿಂಟೋ, ವಿನಿಲ್ ವೇಗಸ್, ಪಿಗ್ಮಿ ಸಂಗ್ರಾಹಕರಾದ ಪಾವ್ಲ್ ಮೊಂತೇರೊ, ಐವನ್ ವೇಗಸ್‌ರವರು ಸಹಕರಿಸಿದರು. ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

ವಿಧಾನಸೌಧದಲ್ಲಿ ಭ್ರಷ್ಟರೇ ತುಂಬಿದ್ದಾರೆ…
ಅಲೋಶಿಯಸ್ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ತಾನು ಕ್ರೈಸ್ತ ಬಾಂಧವರಿಂದ ಶಿಸ್ತನ್ನು ಮೈಗೂಡಿಸಿಕೊಂಡೆ. ಭಾರತ ದೇಶವು ಶಿಸ್ತುಬದ್ಧ ದೇಶವಾಗಬೇಕಾದರೆ ದೇಶದೊಂದಿಗೆ ನಮ್ಮ ಧರ್ಮ ಕೂಡ ಒಟ್ಟಾಗಿ ಸಾಗಬೇಕು. ಇಲ್ಲಿನ ಎಪಿಎಂಸಿ ರಸ್ತೆ ಹಾಗೂ ಬಸ್ಸು ನಿಲ್ದಾಣಕ್ಕೆ ಕ್ರಮಿಸುವ ರಸ್ತೆ ಆಗಬೇಕಾದರೆ ಅಲ್ಲಿ ಬಾಬಣ್ಣ(ವಲೇರಿಯನ್ ಡಾಯಸ್)ರವರ ಶ್ರಮ ಬಹಳಷ್ಟಿದೆ. ೪೦% ಕಮಿಷನ್ ಸರ್ಕಾರ ಎಂದು ಎಲ್ಲರೂ ಹೇಳುವಾಗ ನನಗೆ ಬಹಳ ಮುಜುಗರವಾಗುತ್ತದೆ. ವಿಧಾನಸೌಧದಲ್ಲಿ ಇರುವವರು ಎಲ್ಲರೂ ಕಳ್ಳರೇ. ವಿಧಾನಸೌಧ ಭ್ರಷ್ಟಾಚಾರದ ಕೂಪವೇ ಆಗಿಬಿಟ್ಟಿದ್ದು ಅಲ್ಲಿ ಹೆಗ್ಗಣಗಳೇ ತುಂಬಿ ಎಲ್ಲವನ್ನೂ ತಿಂದು ಹಾಕುತ್ತಿದೆ. ಹೀಗಾದರೆ ಬಡವರನ್ನು ಮೇಲೆತ್ತಬೇಕು ಎಂದರೆ ಹೇಗೆ ಮೇಲೆತ್ತುವುದು. ಝೇವಿಯರ್ ಡಿ’ಸೋಜರವರಂತಹ ಜ್ಞಾನವಂತರು ಅಲ್ಲಿರಬೇಕಾಗಿದೆ. ನನ್ನನ್ನು ಹತ್ತು ರೂಪಾಯಿಯ ಡಾಕ್ಟ್ರು ಎಂದೇ ಕರೆಯುತ್ತಾರೆ. ಇದರಿಂದ ನನಗೆ ಚಹಾ ಕುಡೀಲಿಕ್ಕೆ ಕೂಡ ಸಾಧ್ಯವಾಗದು. ಊರಿನಲ್ಲಿ ಸ್ವಲ್ಪ ಅಡಿಕೆಯಾಗುವ ಕಾರಣ ತಾನು ಬದುಕಿಕೊಂಡಿದ್ದೇನೆ. ನಮ್ಮಲ್ಲಿ ಪ್ರಾಮಾಣಿಕತೆ ಹಾಗೂ ಶಿಸ್ತು ಇದ್ದಾಗ ಮಾತ್ರ ಎಲ್ಲವೂ ಪರಿಪೂರ್ಣತೆ ಹೊಂದಲು ಸಾಧ್ಯ ಡಾ.ಎಂ.ಕೆ ಪ್ರಸಾದ್ ಭಂಡಾರಿ, ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿಗಳು

ಸನ್ಮಾನ..
ಕಾರ್ಯಕ್ರಮದ ಉದ್ಘಾಟಕರೂ, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಎಜ್ಯುಕೇಶನ್ ನಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ವತಿಯಿಂದ ಕೆ.ಎಸ್.ಬಿ-ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತರಾದ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಕೆ ಪ್ರಸಾದ್ ರವರನ್ನು ಗುರುತಿಸಿ ಬ್ಯಾಂಕಿನ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here