ಸಂಪ್ಯದ ಉದಯಗಿರಿ ಕ್ಷೇತ್ರವೇ ತಪೋ ಭೂಮಿ – ಪುತ್ತೂರು ದಸರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಹೇಶ್ ಕಜೆ

0

ಪುತ್ತೂರು: ಸಂಪ್ಯದ ಉದಯಗಿರಿ ಕ್ಷೇತ್ರದಲ್ಲಿ ಕಾಣಿಯೂರು ಶ್ರೀಗಳು ಚಾತುರ್ಮಾಸ್ಯದ ಮೂಲಕ ಅವರ ಎರಡು ತಿಂಗಳ ತಪಸ್ಸು ಕ್ಷೇತ್ರವನ್ನು ತಪೋಭೂಮಿಯನ್ನಾಗಿ ಮಾಡಿದೆ. ಹಾಗಾಗಿ ಈ ಕ್ಷೇತ್ರವೇ ಒಂದು ತಪೋ ಭೂಮಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಬೆಂಗಳೂರು ಇದರ ವಿಶೇಷ ಸರಕಾರಿ ಅಭಿಯೋಜಕರಾಗಿರುವ ಪುತ್ತೂರು ದಸಾರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಹೇಶ್ ಕಜೆ ಹೇಳಿದರು.
ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುತ್ತೂರು ದಸಾರ ಮಹೋತ್ಸವದ ಅ.6ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಕತಾಳಿಯವೋ ಎಂಬಂತೆ ತಂದೆ ಮಹಾಲಿಂಗೇಶ್ವರನ ಮಡಿಲಿನಿಂದ ತಾಯಿ ಅನ್ನಪೂರ್ಣೇಶ್ವರಿಯ ಮಡಿಲಿಗೆ ಈ ನವರಾತ್ರಿ ಉತ್ಸವ ಬಂದಿದೆ. ಇದಕ್ಕೆಲ್ಲಾ ಕಾರಣವೇ ಇಲ್ಲಿ ನಡೆಯುತ್ತಿರುವ ವಿಶೇಷ ಘಟನೆಗಳು ಎನ್ನಬಹುದು. ಇದೇ ಮಣ್ಣಿನಲ್ಲಿ ಕಾಣಿಯೂರು ಶ್ರೀಗಳು ಚಾತುರ್ಮಾಸ್ಯ ನೆರವೇರಿಸಿದಾಗ ತನ್ನ ತಪ್ಪಿಸಿನ ಫಲವೋ ಎಂಬಂತೆ ಒಂದು ರೀತಿಯ ವಿಶೇಷ ಶಕ್ತಿ ಈ ಮಣ್ಣಿನಲ್ಲಿದೆ. ಹಾಗಾಗಿ ಇದೊಂದು ತಪೋ ಭೂಮಿ ಎಂದರು.
ಸನ್ಮಾನ:
ಇಡಿ ವಿಶೇಷ ಅಭಿಯೋಜಕರಾಗಿ ನೇಮಕಗೊಂಡ ಮಹೇಶ್ ಕಜೆ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿ ವಿಶೇಷ ಸೇವೆಗೈದ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಶ್ವಾನ ಪೋಷಕರಾದ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಅವರನ್ನು ಪುತ್ತೂರು ದಸರಾ ಮಹೋತ್ಸವದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಪಿ.ಜಿ.ಜಗನ್ನಿವಾಸ ರಾವ್ ಮತ್ತು ರಾಜೇಶ್ ಬನ್ನೂರು ಶುಭ ಹಾರೈಸಿದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಕೆ.ಪ್ರೀತಂ ಪುತ್ತೂರಾಯ, ಪ್ರಧಾನ ಕಾರ್ಯದರ್ಶಿ ಸತೀಶ್ ನಾೈಕ್ ಪರ್ಲಡ್ಕ, ಉಪಾಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ, ಭೀಮಯ್ಯ ಭಟ್ ಉಪಸ್ಥಿತರಿದ್ದರು. ಪುಣ್ಯ ಪ್ರಾರ್ಥಿಸಿದರು. ಸಮಿತಿ ಕೋಶಾಧಿಕಾರಿ ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಎಸ್.ಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುನಿತ್ ಆರ್ಕೆಸ್ಟ್ರಾದ ಚಂದ್ರಶೇಖರ್ ಹೆಗ್ಡೆ ನಿರ್ದೇಶನದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಪಾಂಡವರನ್ನು ಆಯುಧಗಳನ್ನಾಗಿಟ್ಟುಕೊಂಡು ತಾನು ಧರ್ಮಸಂಸ್ಥಾಪನೆ ಮಾಡುವ ಸಂಕಲ್ಪ ಕೃಷ್ಣನ ಹಾಗೆ ಪುತ್ತೂರು ದಸಾರ ಮಹೋತ್ಸವ ಸಮಿತಿ ಸಂಚಾಲಕ ಪ್ರೀತಂ ಪುತ್ತೂರಾಯರವರು ನಮ್ಮನ್ನೆಲ್ಲ ಹೆಸರಿಗೆ ಮಾತ್ರ ಮುಂದಿಟ್ಟು, ಈ ಸಂಪ್ಯದ ಉದಯಗಿರಿ ಮಣ್ಣಿನಲ್ಲಿ ಧರ್ಮಸಂಸ್ಥಾಪನೆ ಮಾಡುತ್ತಿದ್ದಾರೆ.
ಮಹೇಶ್ ಕಜೆ, ಇಡಿ ವಿಶೇಷ ಅಭಿಯೋಜಕರು

LEAVE A REPLY

Please enter your comment!
Please enter your name here