ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಶಾಖೆ ಪಾದಾರ್ಪಣೆ ಕಾರ್ಯಕ್ರಮ

0

ಎಲ್ಲರ ಸಹಕಾರದಿಂದ ಸಹಕಾರ ಸಂಘ ಮುನ್ನಡೆಯುತ್ತಿದೆ – ಚಿದಾನಂದ ಬೈಲಾಡಿ

ಪುತ್ತೂರು: ಗ್ರಾಹಕ ಬಂಧುಗಳು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸಲಹಾ ಸಮಿತಿ ಸಹಕಾರದಿಂದ ಸಹಕಾರ ಸಂಘಗಳು ಮುನ್ನಡೆಯುತ್ತಿದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆಯು ಪೂರ್ಣಪ್ರಮಾಣದ ಶಾಖೆಯಾಗಿ 2ನೇ ವರ್ಷಕ್ಕೆ ಪಾದಾರ್ಪಣೆಯ ಸಂದರ್ಭದಲ್ಲಿ ಅ.24ರಂದು ಕಚೇರಿಯಲ್ಲಿ ನಡೆದ ಗಣಪತಿ ಹೋಮ ಮತ್ತು ಲಕ್ಷ್ಮೀಪೂಜೆ ಬಳಿಕ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರಿನಲ್ಲಿ ಆರಂಭವಾಗಿರುವ ಈ ಕಟ್ಟಡ ಬಳಿಕ ಅನೇಕ ಶಾಖೆಗಳನ್ನು ಮಾಡಲು ಕಾರಣವಾಯಿತು. ಮುಂದೆ ಈ ಕಟ್ಟಡದಲ್ಲಿರುವ ಶಾಖೆಯನ್ನು ಎಪಿಎಂಸಿಯಲ್ಲಿರುವ ಮನಯಾರ್ಚಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನಾಗಿ ಮಾಡಲಾಯಿತು. ಆ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಶಾಖೆಯ ಕಟ್ಟಡವನ್ನು ಉಳಿಸುವ ನಿಟ್ಟಿನಲ್ಲಿ ಇಲ್ಲೊಂದು ಹೊಸ ಪರಿಪೂರ್ಣ ಶಾಖೆಯನ್ನು ಆರಂಭಿಸಲಾಯಿತು. ಇವತ್ತು ಒಟ್ಟು 7 ಶಾಖೆಗಳಿಂದ ಕಳೆದ ವರ್ಷದಲ್ಲಿ ರೂ. 291 ಕೋಟಿ ವ್ಯವಹಾರ ಮಾಡಲಾಗಿದೆ. ರೂ. 84ಲಕ್ಷ ದಷ್ಟು ಲಾಭವನ್ನು ಪಡೆಯಲಾಗಿದೆ ಎಂದರು.

ಗೌರವ: ಕುಂಬ್ರ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ವರ್ಗಾವಣೆಗೊಂಡ ಹರೀಶ್ ವೈ ಮತ್ತು ಪುತ್ತೂರು ಪ್ರಧಾನ ಕಚೇರಿಗೆ ವರ್ಗಾವಣೆಗೊಂಡ ಯಕ್ಷಿತ್ ಅವರನ್ನು ಗೌರವಿಸಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಟ್ಟಡದ ಶಾಖಾ ಮ್ಯಾನೇಜರ್ ಶಿವಪ್ರಸಾದ್ ಮತ್ತು ಅವರ ಪತ್ನಿ ಗಾಯಂತ್ರಿ, ಕಚೇರಿ ಸಿಬ್ಬಂದಿಗಳಾದ ಸಂಧ್ಯಾ, ಪ್ರಕಾಶ್, ಪಿಗ್ಮಿ ಸಂಗ್ರಾಹಕ ಯಶವಂತ್, ತಾಂತ್ರಿಕ ಸಲಹೆಗಾರ ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ್, ಅನಿಲ್ ಮಲವೇಳು, ಜಯರಾಮ ಗೌಡ ಅವರನ್ನು ಹೂ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಸಹಿತ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here