ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅಗ್ನಿಪಥ್ ಸೇನಾ ನೇಮಕಾತಿಗೆ ತರಬೇತಿ ನೀಡಿ, ಪ್ರಥಮ ಸಾಲಿನಲ್ಲಿ ಅಕಾಡೆಮಿಯ ವಿದ್ಯಾರ್ಥಿಯೊಬ್ಬರು ಸೇನೆಗೆ ಆಯ್ಕೆಗೊಂಡಿದ್ದಾರೆ. ಮೊದಲ ಹಂತದ ದೈಹಿಕ ಸದೃಢತೆ ಪರೀಕ್ಷೆ ಉತ್ತೀರ್ಣರಾದವರಿಗೆ ಅಂತಿಮ ಹಂತದ ಲಿಖಿತ ಪರೀಕ್ಷೆಯ ತಯಾರಿಗೆ ಉಚಿತ ತರಬೇತಿಯನ್ನು ಸಂಸ್ಥೆ ನೀಡಿತ್ತು. ಮೊದಲ ದೈಹಿಕ ಸದೃಢತೆ ಪರೀಕ್ಷೆಯೂ ಹಾಸನದಲ್ಲಿ ನಡೆದಿದ್ದು, ಉತ್ತೀರ್ಣರಾಗಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಇದರ 3ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವೈಭವ್ ನಾಣಯ್ಯ ಇವರು ಆಯ್ಕೆಗೊಂಡಿದ್ದಾರೆ.
ವೈಭವ್ ನಾಣಯ್ಯ ಕೊಡಗಿನವರಾಗಿದ್ದು ನಿವೃತ್ತ ಯೋಧ ಬಿ.ಎ. ಪ್ರಕಾಶ್ ರವರ ಪುತ್ರ. ಇವರು ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸದ ನಡುವೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಮಾರ್ಗದರ್ಶನ ಪಡೆದುಕೊಂಡು ಕಳೆದ ಒಂದು ತಿಂಗಳಿನಿಂದ ಲಿಖಿತ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಸಾದ್ಯ ಹಾವೇರಿಯಲ್ಲಿ ನಡೆದ ದೈಹಿಕ ಸದೃಢತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 10 ವಿದ್ಯಾರ್ಥಿಗಳು ನ.13 ರಂದು ನಡೆಯಲಿರುವ ಪರೀಕ್ಷೆಗೆ ಪೂರ್ವ ತಯಾರಿ ನಡೆಸಿದ್ದಾರೆ. ಆಯ್ಕೆ ಬಗ್ಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸಂತಸ ವ್ಯಕ್ತ ಪಡಿಸಿದ್ದು” ನಮ್ಮ 2 ವರ್ಷಗಳ ಸತತ ಪ್ರಯತ್ನಕ್ಕೆ ಈಗ ಫಲಿತಾಂಶ ಬರಲು ಪ್ರಾರಂಭವಾಗಿದ್ದು , ಪ್ರಸ್ತುತ ಅಗ್ನಿಪಥ್ ಯೋಜನೆಯ ಪ್ರಥಮ ವರ್ಷದಲ್ಲೇ ನಮ್ಮಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿ ವೈಭವ್ ಆಯ್ಕೆಯಾಗಿದ್ದು ನಮಗೆ ಅತೀವ ಸಂತಸ ತಂದಿದೆ. ಇನ್ನಷ್ಟೂ ವಿದ್ಯಾರ್ಥಿಗಳು ನಮ್ಮ ಭಾಗದಿಂದ ಆಯ್ಕೆಯಾಗಲು ಇದು ಮಾದರಿಯಾಗಲಿ” ಎಂದು ಹೇಳಿ ಶುಭ ಹಾರೈಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ಮತ್ತು ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ, ಪುತ್ತೂರು ಮೊಬೈಲ್ ಸಂಖ್ಯೆ 9620468869, 9148935808 ಸಂಪರ್ಕಿಸುವಂತೆ ವಿನಂತಿಸಿದ್ದಾರೆ.
————————-