ಪುತ್ತೂರು; ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಇದರ ವತಿಯಿಂದ ನ.6ರಂದು ಉಡುಪಿಯ ಕುರ್ಕಾಲು ಸುಭಾಸ್ ನಗರ ಥಂಡರ್ ಗ್ರ್ಯಾಂಡ್ ಬೇಯಲ್ಲಿ ನಡೆದ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್ ಶಿಪ್ ನ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಬೆಟ್ಟಂಪಾಡಿ ಸರಳಿಕಾನ ದೃಶನಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಸಿ ವಿದ್ಯಾರ್ಥಿ ಯಾಗಿರುವ ದೃಶನಾ ಬೆಟ್ಟಂಪಾಡಿ ಸರಳಿಕಾನ ಸುರೇಶ್ ಹಾಗೂ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯೆ ವಿದ್ಯಾ ಸುರೇಶ್ ದಂಪತಿ ಪುತ್ರಿಯಾಗಿರುವ ಈಕೆ ಪುತ್ತೂರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮಾರ್ಷಲ್ ಪುತ್ತೂರು ಶಾಖೆಯ ಶಿಕ್ಷಕ ಶಿವಪ್ರಸಾದ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.
ಇತ್ತೀಚೆಗೆ ಕುಶಾಲನಗರದಲ್ಲಿ ನಡೆದ ರಾಜ್ಯ ಮಟ್ಟದ ಕೊಡಗು ಕಪ್ ಸ್ಪರ್ಧೆಯ ಕಟಾ ಮತ್ತು ಕುಮಿಟೆ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು