ದೇವಳದ ಕೌಂಟರ್ನಲ್ಲಿ ಗ್ರಹಣ ಶಾಂತಿ ಹೋಮ ಸೇವಾ ರಶೀದಿ ಲಭ್ಯ
ಪುತ್ತೂರು: ವರ್ಷದ ಎರಡನೇ ಚಂದ್ರ ಗ್ರಹಣವನ್ನು 2022 ರ ಕೊನೆಯ ಚಂದ್ರ ಗ್ರಹಣವೆಂದು ಕರೆಯಲಾಗುತ್ತದೆ. ಈ ಚಂದ್ರ ಗ್ರಹಣವು ನ. 8 ರಂದು ಸಂಭವಿಸಲಿದೆ. ಚಂದ್ರಗ್ರಹಣದ ಸಮಯದಲ್ಲಿ ಸೂತಕ ಅವಧಿಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಸ್ತೋದಯ ಖಗ್ರಾಸಚಂದ್ರ ಗ್ರಹಣ ಶಾಂತಿ ಹೋಮ ನಡೆಯಲಿದೆ.
ಸಂಜೆ ಗಂಟೆ 4.30ಕ್ಕೆ ಗ್ರಹಣಶಾಂತಿ ಹೋಮ ನಡೆಯಲಿದ್ದು, ಗಂಟೆ 6.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಜೆ ಗಂಟೆ 5ಕ್ಕೆ ವೇ.ಮೂ ಶ್ರೀವತ್ಸ ಕೆದಿಲಾಯ ಶಿಬರ ಅವರು ಉಪನ್ಯಾಸ ನೀಡಲಿದ್ದಾರೆ. ಗ್ರಹಣ ಶಾಂತಿ ಹೋಮ ಮಾಡಲಿಚ್ಚಿಸುವವರು ಸೇವಾ ರಶೀದಿಯನ್ನು ದೇವಳದ ಕೌಂಟರ್ನಲ್ಲಿ ಮಾಡಿಸುವುದು. ಹೋಮದ ಪ್ರಸಾದವು ಅದೇ ದಿನ ಸಂಜೆ ಗಂಟೆ 6.30ಕ್ಕೆ ಪಡೆಯುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ವಿನಂತಿಸಿದ್ದಾರೆ.
ಭರಣಿ ನಕ್ಷತ್ರ, ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಹಣ. ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಉತ್ತರ, ಹಸ್ತ, ವಿಶಾಖ, ಅನುರಾಧ, ಜೇಷ್ಠ, ಚಿತ್ರ ನಕ್ಷತ್ರ ಹಾಗು ಕನ್ಯಾ, ವೃಶ್ಚಿಕ ರಾಶಿಯವರಿಗೆ ಗ್ರಹಣ ದೋಷ ಇರುವುದರಿಂದ ಗ್ರಹಣ ಶಾಂತಿ ಹೋಮ ಸೇವೆ ಮಾಡಿಸುವವರು ದೇವಳದ ಕೌಂಟರ್ನಲ್ಲಿ ರಶೀದಿ ಪಡೆಯುವುದು.
ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು