ಪುತ್ತೂರು: ಏಷ್ಯಾದ ಪ್ರಥಮ ಸ್ವಯಂ ಪ್ರಾಯೋಜಿತ ರೋಟರಾಕ್ಟ್ ಇ ಕ್ಲಬ್‌ನ ಉದ್ಘಾಟನಾ ಸಮಾರಂಭ ಮಂಗಳೂರಿನಲ್ಲಿ ನ. 5ರಂದು ನಡೆಯಿತು.
ರೋಟರಿ ಜಿಲ್ಲೆ 3081ರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ರೋಟರ‍್ಯಾಕ್ಟ್ ಇ ಕ್ಲಬ್‌ನ ಸ್ಥಾಪಕಾಧ್ಯಕ್ಷ ಯತಿನ್ ರೈ ಅವರಿಗೆ ಕಾಲರಿಂಗ್ ಮಾಡುವ ಮೂಲಕ ಹೊಸ ಕ್ಲಬ್‌ಗೆ ಚಾಲನೆ ನೀಡಿದರು. ಬಳಿಕ ಕ್ಲಬ್‌ನ ಚಾರ್ಟರ್ ಅನ್ನು ತಂಡಕ್ಕೆ ಹಸ್ತಾಂತರಿಸಲಾಯಿತು.
ರೋಟರ‍್ಯಾಕ್ಟ್ ಜಿಲ್ಲಾ ಗವರ್ನರ್ ರತ್ನಾಕರ್ ರೈ, ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ನಿಖಿಲ್ ಆರ್.ಕೆ., ವಲಯ ಪ್ರತಿನಿಧಿ ನಿಶಾನ್ ಎನ್. ಉಪಸ್ಥಿತರಿದ್ದರು.
ಕ್ಲಬ್ ಸಲಹೆಗಾರ ಡೆರೀಲ್ ಸ್ಟೀವನ್ ಡಿಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಮನೀಶ್ ಹೆಗ್ಡೆ ವಂದಿಸಿದರು. ಶೇಲ್ಡನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಹರ್ಷ ಕುಮಾರ್ ರೈ ರಾಯಭಾರಿ, ಯತಿನ್ ರೈ ಅಧ್ಯಕ್ಷ:
ರೋಟರಾಕ್ಟ್ ಇ ಕ್ಲಬ್‌ನ ಅಧ್ಯಕ್ಷರಾಗಿ ಪುತ್ತೂರಿನ ತಿಂಗಳಾಡಿ ನಿವಾಸಿ ಯತಿನ್ ರೈ ಹಾಗೂ ಕ್ಲಬ್‌ನ ರಾಯಭೇರಿ ಆಗಿ ಹರ್ಷ ಕುಮಾರ್ ರೈ ಮಾಡಾವು ಆಯ್ಕೆಯಾಗಿದ್ದಾರೆ.
ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿಯಾಗಿ ಮನೀಶ್ ಹೆಗ್ಡೆ, ಸಲಹೆಗಾರರಾಗಿ ಡೆರೀಲ್ ಸ್ಟೀವನ್ ಡಿಸೋಜಾ, ಮೆಂಟರ್ ಆಗಿ ಜಾಕ್ಸನ್ ಸಾಲ್ದಾನ್ಹ, ಕ್ಲಬ್ ಕೌನ್ಸಿಲರ್ ಆಗಿ ಗಣೇಶ್ ಜಿ.ಟಿ ಭಟ್, ಉಪಾಧ್ಯಕ್ಷರಾಗಿ ರುಚಿರ್ ರೈ, ಸಹಕಾರ್ಯದರ್ಶಿಯಾಗಿ ಆತ್ಮಿ, ಕೋಶಾಧಿಕಾರಿಯಾಗಿ ವಿಜಿತ್ ಕುಮಾರ್, ದಂಡಾಧಿಕಾರಿಯಾಗಿ ಗ್ಲೇನ್, ಸಂಘ ಸೇವಾ ನಿರ್ದೇಶಕರಾಗಿ ತಕ್ಷಾ ಗಣಪತಿ, ಸಮುದಾಯ ಸೇವಾ ನಿರ್ದೇಶಕರಾಗಿ ದೀಕ್ಷಿತ್ ರೈ, ವೃತ್ತಿ ಸೇವಾ ನಿರ್ದೇಶಕರಾಗಿ ಪ್ರಜ್ಞಾ ಪ್ರಭು, ಅಂತರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ನಿದೀಪ್ ನಂಜಪ್ಪ, ಸಾಂಸ್ಕೃತಿಕ ನಿರ್ದೇಶಕರಾಗಿ ಪೃಥ್ವಿರಾಜ್ ಶೆಟ್ಟಿ, ಇನ್ನಿತರ ನಿರ್ದೇಶಕರುಗಳಾಗಿ ವಿಜೇಶ್ ರೈ, ಮೊಹಮ್ಮದ್ ಸಿಯಾಬುದ್ದಿನ್, ಭರತ್ ಜಬಳೆ, ಲಾನಿಶ್ ಡಿಸೋಜಾ, ಅಕ್ಷತ್ ಜೆ.ಸಿ, ಶರತ್ ರೈ ಐಶ್ವರ್ಯ ಆಯ್ಕೆಯಾದರು.