ಪುತ್ತೂರು : ತುಳುನಾಡಿನ ಪ್ರಸಿದ್ಧ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಅವರಿಗೆ ನ.13ರಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ಜಿಲ್ಲಾ ಎಸ್ ಸಿ ಸಮಾವೇಶದಲ್ಲಿ ಗೌರವ ನೀಡಿ ಸನ್ಮಾನಿಸಲಾಯಿತು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಮಾಡಿರುವ ರವೀಶ್ ಪಡುಮಲೆಯವರು ತುಳುನಾಡಿನ ದೈವ ನರ್ತನ ಸೇವೆಯನ್ನು ಕೂಡ ಮಾಡಿಕೊಂಡು ಬರುತ್ತಿದ್ದಾರೆ.
ತುಳು ಭಾಷೆ ಕಲೆ ಸಂಸ್ಕೃತಿಗಾಗಿ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಿಂದುಳಿದ ಜನಾಂಗದ ಶ್ರೇಯಸ್ಸಿಗಾಗಿ ಕೆಲಸ ಮಾಡುತ್ತಿರುವ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು ಗುರುತಿಸಿ ಗೌರವ ಸನ್ಮಾನವನ್ನು ಮಾಡಿದೆ. ಇವರು ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಮಾಡುತ್ತಿದ್ದು ಜೊತೆಗೆ ದೈವ ನರ್ತನ ಸೇವೆಯನ್ನು ಮಾಡುತ್ತಿದ್ದಾರೆ. ಇಂದು ನಡೆದ ಸಮಾವೇಶದಲ್ಲಿ ಸಚಿವರಾದ ಎಸ್ ಅಂಗಾರ ವಿಧಾನ ಪರಿಷತ್ತಿನ ಸದಸ್ಯರಾದ ನಾರಾಯಣಸ್ವಾಮಿ, ದಕ್ಷಿಣ ಕನ್ನಡ ಜಿಲ್ಲಾ ಎಸ್ ಸಿ ಮೋರ್ಚರ ಅಧ್ಯಕ್ಷರಾದ ಶ್ರೀ ವಿನಯ ನೇತ್ರ ದಡ್ಡಲ್ ಕಾಡು, ಶಾಸಕರುಗಳಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಉಪಸ್ಥಿತರಿದ್ದರು.