ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿ ವಿತರಣೆ ದರ್ಬೆಯಲ್ಲಿರುವ ಟ್ರಸ್ಟ್ನ ಕಛೇರಿಯಲ್ಲಿ ನಡೆಯಿತು.
25 ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಟ್ರಸ್ಟ್ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಟ್ರಸ್ಟ್ನ ಮೂಲಕ ಇದುವರೆಗೆ ಸುಮಾರು 3860 ಮಂದಿ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ಉಚಿತವಾಗಿ ಗುರುತಿನ ಚೀಟಿಯನ್ನು ಮಾಡಿಕೊಡಲಾಗಿದೆ ಮತ್ತು ಮೂರು ವರ್ಷಕ್ಕೊಮ್ಮೆ ಕಾರ್ಮಿಕರ ಗುರುತಿನ ಚೀಟಿಯನ್ನು ನವೀಕರಣ ಮಾಡಿಕೊಡಲಾಗುವುದು ಅದನ್ನು ಕೂಡ ಟ್ರಸ್ಟ್ ಮುಖಾಂತರ ಉಚಿತವಾಗಿ ಮಾಡಿಕೊಡಲಾಗುವುದು ಎಂದು ಹೇಳಿ ಕಾರ್ಮಿಕರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆಯುತ್ತದೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮದುವೆಗೆ ಸಹಾಯಧನ ಅನಾರೋಗ್ಯದ ಚಿಕಿತ್ಸೆ ಸಹಾಯ, ಪಿಂಚಣಿ ಸೌಲಭ್ಯ, ಬಸ್ ಪಾಸ್ ಇದರ ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡೆದುಕೊಳ್ಳಿ ಎಂದರು.
ರವೀಂದ್ರ ಪೂಜಾರಿ ಸಂಪ್ಯ ಉಪಸ್ಠಿತರಿದ್ದರು. ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ ಕುದ್ಮಾನು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಮತ್ತು ಪ್ರವೀಣ್ ಸಹಕರಿಸಿದರು.