ನವೀನ್ ಪಸನ್ನರಿಗೆ ಗರಿಷ್ಟ ಪಾಯಿಂಟ್ಸ್ಗೆ ಕ್ರಿಶಲ್ ವಾರಿಯರ್ಸ್ ತೆಕ್ಕೆಗೆ
ರೋಹನ್ ಡಿ’ಕುನ್ಹ/ಲೋಯ್ ಮೆಲ್ಡನ್, ವಿಲ್ಸನ್ ಮೊಂತೇರೊಗೆ ನಂತರದ ಸ್ಥಾನ
ವರದಿ-ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಮಾಯಿದೆ ದೇವುಸ್ ಚರ್ಚ್ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2022-ಸೀಸನ್ 2’ ಜ.8 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದ್ದು, ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಡಿ.3ರಂದು ನೆರವೇರಿತು.
ನವೀನ್ ಪಸನ್ನರವರಿಗೆ ಹೆಚ್ಚಿನ ಬಿಡ್ಡಿಂಗ್:
ಪುತ್ತೂರಿನಲ್ಲಿ ದ್ವಿತೀಯ ಬಾರಿಗೆ ಐಪಿಎಲ್ ಮಾದರಿಯಲ್ಲಿ ಮೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ ಸೀಮಿತ ಓವರ್ಗಳ ಓವರ್ ಆರ್ಮ್ ಟೆನ್ನಿಸ್ ಬಾಲ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ. ಬಲಿಷ್ಟ ಆರು ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಪ್ರತೀ ತಂಡವು ತಂಡದ ಮಾಲಕರು ಹಾಗೂ ತಂಡದಲ್ಲಿ ಈರ್ವರಂತೆ ಐಕಾನ್ ಆಟಗಾರರನ್ನು ಹೊಂದಿದೆ. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಪ್ರತಿ ಆರು ತಂಡಗಳಿಗೆ ಒಂದು ಲಕ್ಷ ಪಾಯಿಂಟ್ನ್ನು ಸಂಘಟಕರು ನಿಗದಿಪಡಿಸಲಾಗಿದ್ದು, ಆ ಒಂದು ಲಕ್ಷ ಪಾಯಿಂಟ್ ಒಳಗಡೆ ಆಟಗಾರರನ್ನು ಖರೀದಿಸಬಹುದಾಗಿತ್ತು. ಒಟ್ಟು 110 ಆಟಗಾರರಲ್ಲಿ 12 ಮಂದಿ ಐಕಾನ್ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರ ನಡುವೆ ಬಿಗ್ ಫೈಟ್ ಬಿಡ್ ಪ್ರಕ್ರಿಯೆಗೆ ಒಳಪಟ್ಟಿತ್ತು. ಇದರಲ್ಲಿ ಮರೀಲ್ ಚರ್ಚ್ ವ್ಯಾಪ್ತಿಯ ಬ್ಯಾಟರ್ ಎನಿಸಿಕೊಂಡ ನವೀನ್ ಪಸನ್ನರವರು 40 ಸಾವಿರ ಪಾಯಿಂಟ್ಸ್ಗಳಿಗೆ ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾಯಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ್ಸ್ ತೆಕ್ಕೆಗೆ ಬಿಕರಿಯಾದರು. ಕಳೆದ ವರ್ಷ ಡ್ಯಾನಿಯಲ್ ಸುವಾರಿಸ್ರವರು ಗರಿಷ್ಟ ಪಾಯಿಂಟ್ಸ್ಗಳಿಗೆ ಬಿಕರಿಯಾಗಿದ್ದರು. ನಂತರದ ಸ್ಥಾನ ಗಳಿಸಿದ್ದ ಪ್ರೀತಂ ಮಸ್ಕರೇನ್ಹಸ್ ಹಾಗೂ ವಿಕ್ಟರ್ ಶರೋನ್ರವರು ಈ ಬಾರಿ ಐಕಾನ್ ಫ್ಲೇಯರ್ ಆಗಿ ಆಯ್ಕೆಯಾಗಿರುತ್ತಾರೆ.
ರೋಹನ್/ಲೋಯ್, ವಿಲ್ಸನ್ ನಂತರದ ಸ್ಥಾನ:
ಮರೀಲ್ ನಿವಾಸಿ ರೋಹನ್ ಡಿ’ಕುನ್ಹ ಹಾಗೂ ಲೋಯ್ ಮೆಲ್ಡನ್ರವರು ತಲಾ 36 ಸಾವಿರ ಪಾಯಿಂಟ್ಸ್ಗಳೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾಗಿದ್ದು ಇದರಲ್ಲಿ ರೋಹನ್ ಡಿ’ಕುನ್ಹರವರು ಪ್ರದೀಪ್ ವೇಗಸ್ ಮಾಲಕತ್ವದ ಫ್ಲೈ ಝೋನ್ ಅಟ್ಯಾಕರ್ಸ್ ತಂಡಕ್ಕೆ, ಲೋಯ್ ಮೆಲ್ಡನ್ರವರು ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ್ಸ್ ತಂಡಕ್ಕೆ ಮತ್ತು ತೃತೀಯ ಸ್ಥಾನಿಯಾಗಿ 34 ಸಾವಿರ ಪಾಯಿಂಟ್ಸ್ಗಳೊಂದಿಗೆ ವಿಲ್ಸನ್ ಮೊಂತೇರೊರವರು ರೋಶನ್ ರೆಬೆಲ್ಲೊ ಮಾಲಕತ್ವದ ಸಿಝ್ಲರ್ ಸ್ರೈಕರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಬಿಡ್ ಪ್ರಕ್ರಿಯೆಯಲ್ಲಿ ಗರಿಷ್ಟ ಪಾಯಿಂಟ್ಸ್ಗಳೊಂದಿಗೆ ಆಯ್ಕೆಯಾದ ನಾಲ್ವರೂ ಆಟಗಾರರೂ ಮರೀಲ್ ಚರ್ಚ್ಗೊಳಪಟ್ಟವರು ಎಂಬುದೇ ಅಚ್ಚರಿಯ ವಿಷಯವಾಗಿದೆ.
ಹ್ಯಾಮರ್ ಬಾರಿಸುವ ಮೂಲಕ ಚಾಲನೆ:
ಸಂಜೆ ನಡೆದ ಬಿಡ್ ಪ್ರಕ್ರಿಯೆಗೆ ಅಭೂತಪೂರ್ವ ಶ್ಲಾಘನೆ ವ್ಯಕ್ತವಾಗಿದ್ದು, ಈ ಬಿಡ್ ಪ್ರಕ್ರಿಯೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಆಟಗಾರರ ಹೆಸರು ಹಾಗೂ ಯಾವ ಶೈಲಿಯ ಆಟಗಾರ ಎನ್ನುವುದನ್ನು ಪವರ್ಪಾಂಟ್ ಮುಖೇನ ಬಿಡ್ಡಿಂಗ್ನಲ್ಲಿ ಪ್ರಸ್ತುತಪಡಿಸಲಾಯಿತು. ಆರಂಭದಲ್ಲಿ ಡೊನ್ ಬೊಸ್ಕೊ ಕ್ಲಬ್ನ ಅಧ್ಯಕ್ಷ ಫೆಬಿಯನ್ ಗೋವಿಯಸ್ರವರು ಹ್ಯಾಮರ್ ಬಾರಿಸುವ ಮೂಲಕ ಬಿಡ್ ಪ್ರಕ್ರಿಯೆಗೆ ಚಾಲನೆಯಿತ್ತರು. ಲೀಗ್ ಹಂತದಲ್ಲಿ ಪ್ರತೀ ತಂಡಕ್ಕೆ ಐದು ಬಾರಿ ಆಟವಾಡುವ ಅವಕಾಶವನ್ನು ಹೊಂದಲಾಗಿದ್ದು ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಸುತ್ತಿಗೆ ತೇರ್ಗಡೆ ಹೊಂದುವ ಅರ್ಹತೆ ಹೊಂದುತ್ತದೆ. ಲೀಗ್, ಫ್ಲೇ ಆಫ್ ಸುತ್ತಿನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಒಟ್ಟು 18 ಪಂದ್ಯಗಳು ನಡೆಯಲಿವೆ. ಫಿಲೋಮಿನಾದ ಎರಡು ಮೈದಾನಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ಜರಗಲಿವೆ.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಿಝ್ಲರ್ ಸ್ರೈಕರ್ಸ್ ತಂಡದ ಮಾಲಕ ರೋಶನ್ ರೆಬೆಲ್ಲೋ ಕಲ್ಲಾರೆ, ಸೋಜಾ ಸೂಪರ್ ಕಿಂಗ್ಸ್ ತಂಡದ ಮಾಲಕ ದೀಪಕ್ ಮಿನೇಜಸ್ ದರ್ಬೆ, ಕ್ರಿಶಲ್ ವಾರಿಯರ್ಸ್ ತಂಡದ ಮಾಲಕರಾದ ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾಯಸ್ ನೂಜಿ, ಫ್ಲೈ ಝೋನ್ ಅಟ್ಯಾಕರ್ಸ್ ತಂಡದ ಮಾಲಕ ಪ್ರವೀಣ್ ವೇಗಸ್(ಬಾಬಾ), ಎಸ್.ಎಲ್ ಗ್ಲ್ಯಾಡಿಯೇಟರ್ಸ್ ತಂಡದ ಮಾಲಕ ಸಿಲ್ವೆಸ್ತರ್ ಡಿ’ಸೋಜ ಕೂರ್ನಡ್ಕ, ಲೂವಿಸ್ ಕ್ರಿಕೆಟರ್ಸ್ ತಂಡದ ಮಾಲಕ ಲೆಸ್ಟರ್ ಲೂವಿಸ್ರವರೊಂದಿಗೆ ಆಯಾ ಡೊನ್ ಬೊಸ್ಕೊ ಕ್ಲಬ್ನ ಸದಸ್ಯರಾದ ರೋಯ್ಸ್ ಪಿಂಟೊ, ಅರುಣ್ ರೆಬೆಲ್ಲೋ, ಅರುಣ್ ಪಿಂಟೊ, ರಿಚರ್ಡ್ ಪಿಂಟೊ, ಸಿಲ್ವೆಸ್ತರ್ ಗೊನ್ಸಾಲ್ವಿಸ್, ಆಂಟನಿ ಒಲಿವೆರಾ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಘಟಕರಾದ ರಾಕೇಶ್ ಮಸ್ಕರೇನ್ಹಸ್, ಆಲನ್ ಮಿನೇಜಸ್, ಪ್ರಕಾಶ್ ಸಿಕ್ವೇರಾ, ರೋಹನ್ ಡಾಯಸ್ ಹಾಗೂ ಸಂದೀಪ್ ಪಾಯಿಸ್ರವರು ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
12 ಐಕಾನ್ ಆಟಗಾರರು…
ಕೂಟದಲ್ಲಿನ 12 ಮಂದಿ ಐಕಾನ್ ಆಟಗಾರರಾದ ಪ್ರೀತಂ ಮಸ್ಕರೇನ್ಹಸ್ ಸಾಮೆತ್ತಡ್ಕ, ಡೋಯ್ ಕೂರ್ನಡ್ಕ(ಸಿಝ್ಲರ್ ಸ್ಟ್ರೈಕರ್ಸ್), ಜೋಯಲ್ ಮರೀಲು, ರಾಕೇಶ್ ಮರೀಲು(ಸೋಜಾ ಸೂಪರ್ ಕಿಂಗ್ಸ್), ಜೋನ್ ಬನ್ನೂರು, ಗ್ಲ್ಯಾನಿ ಮರೀಲು(ಕ್ರಿಶಲ್ ವಾರಿಯರ್ಸ್), ಪ್ರದೀಪ್ ಬನ್ನೂರು, ವಿಕ್ಟರ್ ಶರೋನ್ ಪುತ್ತೂರು(ಎಸ್.ಎಲ್ ಗ್ಲ್ಯಾಡಿಯೇಟರ್ಸ್), ಜೇಮ್ಸ್ ಸಂಟ್ಯಾರ್, ನರೇಶ್ ಲೋಬೊ ಪುತ್ತೂರು(ಫ್ಲೈಝೋನ್ ಅಟ್ಯಾಕರ್ಸ್), ಐವನ್ ಡಿ’ಸಿಲ್ವ ಕಲ್ಲಾರೆ, ಮೇಗಸ್ ಮಸ್ಕರೇನ್ಹಸ್ ಸಾಮೆತ್ತಡ್ಕ(ಲೂವಿಸ್ ಕ್ರಿಕೆಟರ್ಸ್)ರವರನ್ನು ಅನುಕ್ರಮವಾಗಿ ಆರು ತಂಡಗಳಿಗೆ ಹಂಚಲಾಯಿತು.
ಆರು ತಂಡಗಳು..
-ಸಿಝ್ಲರ್ ಸ್ಟ್ರೈಕರ್ಸ್
-ಸೋಜಾ ಸೂಪರ್ ಕಿಂಗ್ಸ್
-ಕ್ರಿಶಲ್ ವಾರಿಯರ್ಸ್
-ಫ್ಲೈಝೋನ್ ಅಟ್ಯಾಕರ್ಸ್
-ಎಸ್.ಎಲ್ ಗ್ಲ್ಯಾಡಿಯೇಟರ್ಸ್
-ಲೂವಿಸ್ ಕ್ರಿಕೆಟರ್ಸ್