ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ 24/7 ನೀರು ಸರಬರಾಜು ಕಾಮಗಾರಿಯಲ್ಲಿ ಕೊಳವೆ ಅಳವಡಿಸುವಾಗ ನಗರಸಭೆಯ ಕೊಳವೆಗಳು ಒಡೆದು ಹೋಗಿರುವುದನ್ನು ದುರಸ್ತಿ ಪಡಿಸದೇ ನೀರು ಪೋಲಾಗುತ್ತಿರುವ ಮತ್ತು ಅಲ್ಲಲ್ಲಿ ತೆಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಇರುವ ಕುರಿತು ಸಾರ್ವಜನಿಕರಿಂದ ಗಂಭೀರ ದೂರುಗಳು ಬಂದಿದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಅವರು ಜಲಸಿರಿ ಟ್ರಾಂಚ್-2 ಇದರ ಉಪಯೋಜನಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಜಲಸಿರಿ ಕಾಮಗಾರಿಯಲ್ಲಿ ಕೊಳವೆ ಅಳವಡಿಸುವಾಗ ಚರಂಡಿ ತೆಗೆದಾಗ ಅಲ್ಲಿ ಕೊಳವೆಗಳು ಒಡೆದು ಹೋಗಿರುವುದನ್ನು ದುರಸ್ತಿ ಪಡಿಸದೇ ನೀರು ಪೋಲಾಗುತ್ತಿರುವುದರಿಂದ ಸಾರ್ವಜನಿಕರು ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಚರಂಡಿ ತೆಗೆದಿರುವ ಸ್ಥಳವನ್ನು ಸಮರ್ಪಕವಾಗಿ ಮುಚ್ಚಿರುವುದಿಲ್ಲ.ತುಂಬಾ ಸಮಯದಿಂದ ನಗರಸಭೆ ಎಲ್ಲಾ ಕಡೆಗಳಲ್ಲಿ ಹೊಂಡಗಳು ಬಿದ್ದಿದ್ದು ಇದರಿಂದ ಸಾರ್ವಜನಿಕ ದೂರುಗಳು ಹೆಚ್ಚಾಗಿ ಬರುತ್ತಿದೆ. ಚರಂಡಿ ಅಗೆದ ಸ್ಥಳಕ್ಕೆ ಮರುಡಾಮರೀಕರಣ ಯಾ ಕಾಂಕ್ರೀಟು ಅಥವಾ ಇಂಟರ್ಲಾಕ್ಗಳನ್ನು ಸರಿಪಡಿಸದೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಗಂಭೀರವಾಗಿ ದೂರುಗಳನ್ನು ನೀಡಿರುತ್ತಾರೆ.ಆದ್ದರಿಂದ ಕೂಡಲೇ ನೀರಿನ ಲೀಕೇಜ್ಗಳನ್ನು ದುರಸ್ತಿಪಡಿಸಿ ರಸ್ತೆಯನ್ನು ಯಥಾಸ್ಥಿತಿಗೆ ಮಾಡುವುದು ಹಾಗು ಚರಂಡಿ ತೆಗೆದಿರುವಲ್ಲಿ ಮರು ಡಾಮರೀಕರಣ ಯಾ ಕಾಂಕ್ರೀಟ್ ಇಂಟರ್ಲಾಕ್ಗಳನ್ನು ಅಳವಡಿಸಿ ಯಥಾಸ್ಥಿತಿಗೆ ಮಾಡಿಕೊಡುವಂತೆ ಪೌರಾಯುಕ್ತರು ದೂರಿನಲ್ಲಿ ತಿಳಿಸಿದ್ದಾರೆ.