





ಪುತ್ತೂರು : ನರಿಮೊಗರು ಎಲಿಕ ಕಾರಣಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಕಲ್ಲುರ್ಟಿ ದೈವದ ಅಗೇಲು ಸೇವೆ ಡಿ.11ರಂದು ನಡೆಯಿತು.








ಮೋನಪ್ಪ ಸಫಲ್ಯ ಅಗೇಲು ಸೇವೆಯನ್ನು ಹಾಗೂ ನಿತಿನ್ ಭಟ್ ದೇವರ ಪೂಜೆಯನ್ನು ನೆರವೇರಿಸಿದರು. ಜಗದೀಶ ಗೌಡ ಸಹಕರಿಸಿದರು. ಅಗೇಲು ಸೇವೆಯು ಪ್ರತೀ ತಿಂಗಳ ಸಂಕ್ರಮಣದ ಮೊದಲು ಬರುವ ಆದಿತ್ಯವಾರ ಜರಗಲಿರುವುದು ಎಂದು ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ತಿಳಿಸಿ ಭಕ್ತಾದಿಗಳ ಸಹಕಾರ ಕೋರಿದರು. ಭಕ್ತಾದಿಗಳು ಉಪಸ್ಥಿತರಿದ್ದರು.










