ಬೆಂಗಳೂರಿನ ರಾಮಯ್ಯ ಕಾನೂನು ಮಹಾವಿದ್ಯಾಲಯದಲ್ಲಿ ಡಿ.14 ಹಾಗೂ 15ರಂದು ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಪುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ತಂಡವು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅದಲ್ಲದೆ ದ್ವಿತೀಯ ವರ್ಷದ ಬಿ.ಎ ಎಲ್.ಎಲ್.ಬಿ ವಿದ್ಯಾರ್ಥಿಗಳಾದ ವಿಜಯ್ ಶ್ರೀಹರಿ ಮತ್ತು ದಲಾಂಕಿ ರಿಚ್ವಲ್ ಇವರುಗಳು ಮುಂದೆ ನಡೆಯಲಿರುವ All India South Zone inter University Football Competitionಗೆ ಅರ್ಹತೆ ಪಡೆದಿರುತ್ತಾರೆ. ಇವರು ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪ್ರಥಮ ಸ್ಥಾನ ಪಡೆದುಕೊಂಡ ಫುಟ್ಬಾಲ್ ತಂಡದಲ್ಲಿ ಅಭಿಜಿತ್ ಪಿ(ಕ್ಯಾಪ್ಟನ್), ದಿಸ್ತಾಯಿ ಪಾವ(5 ಬಿಎ ಎಲ್.ಎಲ್.ಬಿ), ವೀಕ್ಷಿತ್ ಭರತ್ ವೀ ರಾಜ್(3 ಎಲ್ ಎಲ್ ಬಿ), ರಂಜಿತ್ ಎನ್ ವಿ(4 ಬಿಎ.ಎಲ್.ಎಲ್.ಬಿ), ತೇಜಸ್(3 ಬಿಎಎಲ್ಎಲ್.ಬಿ) ಶ್ರೇಯಸ್ ಎಂ ರಾವ್, ದೀಪಕ್ ಪಿ.ಟಿ., ಮನ್ವಿತ್, ಸೂರ್ಯ, ವಿಜಯ ಶ್ರೀಹರಿ, ಕೌಶಿಕ್ ಕೆ ಜಿ, ದಲಾಂಕಿ ರಿಚ್ವಲ್(2 ಬಿ.ಎ.ಎಲ್.ಎಲ್.ಬಿ), ಚೇತನ್(1 ಎಲ್.ಎಲ್.ಬಿ) ಹಾಗೂ ಅಮಲ್ ರಾಮ್, ಸಂತೋಷ್(1 ಬಿ.ಎ.ಎಲ್.ಎಲ್.ಬಿ) ಭಾಗವಹಿಸಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ.ಕೆ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಅಭಿನಂದಿಸಿದ್ದಾರೆ.