ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಕುಮಾರ ತೇಜಚಿನ್ಮಯ್ ಹೊಳ್ಳ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಸಚಿವಾಲಯ, ಭಾರತ ಸರಕಾರ, ಹಾಗೂ ಎನ್.ಸಿ.ಇ.ಆರ್.ಟಿ ನವದೆಹಲಿಯು 9ನೇ ತರಗತಿಯಿಂದ 12ನೇ ತರಗತಿಯ ವರೆಗಿನ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ ‘ಕಲೋತ್ಸವ-2022’ ರಲ್ಲಿ ಕುಮಾರತೇಜಚಿನ್ಮಯ ಹೊಳ್ಳ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 


ಕುಮಾರ ತೇಜಚಿನ್ಮಯ್ ಅವರು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮುಂದೆ 2023ನೇ ಜ.3ರಂದು ಒರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಪುತ್ತೂರಿನ ವಿವೇಕನಗರ, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ10ನೇ ತರಗತಿಯ ವಿದ್ಯಾರ್ಥಿಯಾಗಿರುವ ಇವರು ಕೊಂಬೆಟ್ಟಿನ ಹರೀಶ್ ಹೊಳ್ಳ ಮತ್ತು ವಿದುಷಿ ಡಾ| ಸುಚಿತ್ರಾ ಹೊಳ್ಳ ದಂಪತಿ ಪುತ್ರ ಹಾಗೂ ವಿದ್ವಾನ್ ಟಿ ಜಿ ಗೋಪಾಲಕೃಷ್ಣನ್ ಮಂಗಳೂರು ಇವರ ಶಿಷ್ಯ.

LEAVE A REPLY

Please enter your comment!
Please enter your name here