








ಪುತ್ತೂರು: ಆರ್ಯಾಪು ಗ್ರಾಮದ ಅಟ್ಲಾರು ನಿವಾಸಿ ಬಾಲಕೃಷ್ಣ ಪೂಜಾರಿ (53ವ.)ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ದೊಡ್ಡಡ್ಕದಲ್ಲಿ ಹಲವು ವರ್ಷಗಳಿಂದ ದಿನಸಿ ಅಂಗಡಿ ಹೊಂದಿ ಚಿರಪರಿಚಿತರಾಗಿದ್ದ ಇವರು ಸುದ್ದಿ ಬಿಡುಗಡೆ ಪತ್ರಿಕೆಯ ವಿತರಕರೂ ಆಗಿದ್ದರು.ಅಂಗಡಿ ವ್ಯವಹಾರದ ಜೊತೆಗೆ ಕೋಳಿ ಫಾರಂ ಕೂಡಾ ನಡೆಸುತ್ತಿದ್ದರು.ಮೃತರು ಪತ್ನಿ ಪುಷ್ಪಾವತಿ, ಇಬ್ಬರು ಪುತ್ರರು ಹಾಗೂ ಓರ್ವ ಸಹೋದರ, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.ಅಟ್ಲಾರು ಮನೆಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.ಹಲವು ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.













