ಕನ್ನಡ ಸಾಹಿತ್ಯ ಪರಿಷತ್‌ನಿಂದ ರೈಲ್ವೆ ಉದ್ಯೋಗಿಗಳಿಗೆ ಕನ್ನಡ ಕಲಿಯುವಂತೆ ಮನವಿ
ಪುತ್ತೂರು: ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಉದ್ಯೋಗಿ ಉತ್ತರ ಪ್ರದೇಶ ಮೂಲದ ಹರಿಚರಣ್ ಯಾದವ್‌ರವರ ಪ್ರಯಾಣಿಕ ಸ್ನೇಹಿ ಸೇವೆಗೆ ದಾಮೋದರ್ ಭಂಡಾರ್ಕರ್‌ರವರು ರೈಲ್ವೆ ಪ್ರಯಾಣಿಕರ ಪರವಾಗಿ ಹರಿಚರಣ್ ಯಾದವ್‌ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ದೂರ ಪ್ರಯಾಣದ ರೈಲಿನ ಪ್ರಯಾಣಿಕರು ಸುರಕ್ಷಿತವಾಗಿ ರೈಲು ಹತ್ತುವುದನ್ನು ಖಾತರಿ ಪಡಿಸುವುದು, ರೈಲು ಬರುವ ಸಂದರ್ಭದಲ್ಲಿ ಅವಘಡ ಸಂಭವಿಸದಂತೆ ಪ್ರಯಾಣಿಕರು, ಮಕ್ಕಳು ರೈಲಿನ ಬಳಿ ಬಾರದಂತೆ ಮುಂಜಾಗ್ರತಾ ಕ್ರಮವನ್ನು ಮಾಡುತ್ತಿದ್ದ ಹರಿಚರಣ್ ಯಾದವ್‌ರವರು ಪ್ರಯಾಣಿಕ ಸ್ನೇಹಿ ರೈಲ್ವೆ ಅಧಿಕಾರಿ ಎಂದು ಪ್ರಯಾಣಿಕರ ಮೆಚ್ಚುಗೆ ಪಡೆದಿದ್ದರು.
ಉ.ಪ್ರ. ಮೂಲದ ಹರಿಚರಣ್ ಯಾದವ್‌ರವರ ಜೊತೆಗೆ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಬಿಹಾರ ಮೂಲದ ಬಿಟ್ಟು ಹಾಗೂ ಹಿರಿಯ ರೈಲ್ವೆ ಸೆಕ್ಷನ್ ಇಂಜಿನಿಯರ್ ಬಿಹಾರ ಮೂಲದ ವಿನೋದ್ ಕುಮಾರ್‌ರವರಿಗೆ ಕನ್ನಡ ಕಲಿಯುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಿನಂತಿಸಿ ಕನ್ನಡದ ಶಾಲು ಹಾಕಿ ಗೌರವಿಸಿದರು. ಜೊತೆಗೆ ಕನ್ನಡದಲ್ಲಿ ಸಂಭಾಷಣೆ ಕಲಿಯಲು ಇಂಗ್ಲಿಷ್‌ನಿಂದ ಕನ್ನಡ ಕಲಿಯಿರಿ ಪುಸ್ತಕ ನೀಡಿದರು.
ರೈಲ್ವೆ ಪ್ರಯಾಣಿಕ ಸಂಘದ ಸಂಚಾಲಕ ದಿನೇಶ್ ಭಟ್, ಗಣೇಶ್ ಬಾಳಿಗ, ಬಾಮಿ ಪದ್ಮನಾಭ ಶೆಣೈ, ರೈಲ್ವೆ ನಿವೃತ್ತ ಉದ್ಯೋಗಿ ನರೇಂದ್ರ ಬಾಳಿಗ, ದಿನೇಶ್ ಭಟ್ ಬೆಳ್ಳಾರೆ, ವಾಮನ ನಾಯಕ್ ಪರ್ಲಡ್ಕ, ಸುನಿಲ್ ಕಾಮತ್, ರಿಕ್ಷಾ ಚಾಲಕರಾದ ಬಾಲಚಂದ್ರ, ಸುರೇಶ್ ಉಪಸ್ಥಿತರಿದ್ದರು.