ರಾಜ್ಯ ಕಾರಾಗೃಹದಲ್ಲಿರುವ ಖೈದಿಗಳಿಗೆ ಹೊಸವರ್ಷಕ್ಕೆ ರಾಜ್ಯಸರಕಾರ ಬಂಪರ್ ಕೊಡುಗೆ ಘೋಷಿಸಿದೆ. ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ ಖೈದಿಗಳಿಗೆ ನೀಡುತ್ತಿದ್ದ ಸಂಬಳದಲ್ಲಿ 3 ಪಟ್ಟು ಏರಿಕೆ ಮಾಡಿ ಅಚ್ಛೇದಿನ್ ದಯಪಾಲಿಸಿದೆ. ರಾಜ್ಯದಲ್ಲಿ ಒಟ್ಟು ಇರುವ 54 ಕಾರಾಗ್ರಹಗಳಲ್ಲಿ 3565 ಖೈದಿಗಳಿದ್ದಾರೆ. ಕುಶಲಬಂಧಿ, ಅರೆಕುಶಲಬಂಧಿ, ತರಬೇತಿ ಕೆಲಸಗಾರ ಬಂಧಿ ಎಂದು ಖೈದಿಗಳನ್ನು ಕಾಲಾವಧಿ ಆಧಾರದಲ್ಲಿ ವಿಂಗಡಿಸಿ ನೀಡುವ ಸಂಬಳದಲ್ಲಿ ಏರಿಕೆ ಮಾಡಲಾಗಿದೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲುಪಾಲಾದ ಖೈದಿಗಳಿಗೆ ಸಿಗುವ ಸಂಬಳ ನೋಡಿ ಮುಂದಿನ ದಿನಗಳಲ್ಲಿ ನಿರುದ್ಯೋಗಿಗಳು ಅಪರಾಧ ಕೃತ್ಯದ ಕಡೆ ಗಮನ ಹರಿಸದಿದ್ದರೆ ಸಾಕು ಎಂದು ಜನರಾಡಿಕೊಳ್ಳುತ್ತಿದ್ದಾರೆ.