ಮುಳಿಯ ಜ್ಯುವೆಲ್ಸ್‌ನಲ್ಲಿ ಯುನಿಕ್ ಡೈಮಂಡ್ ಪೆಸ್ಟ್‌ಗೆ ಚಾಲನೆ

0

ವಿಶೇಷ ವಜ್ರಾಭರಣಗಳ ಅನಾವರಣ

  • ಗ್ರಾಹಕರ ಆಯ್ಕೆಗೆ ತಕ್ಕಂತೆ ಹೊಸತನ ನೀಡುತ್ತಿರುವ ಮುಳಿಯ – ಆಕಾಶ್ ಐತಾಳ್
  • ಮುಳಿಯದಲ್ಲಿ ತುಂಬಾ ವಿನೂತನ ಕಲೆಕ್ಷನ್ಸ್ ಇದೆ –ನಾಗಶ್ರೀ ಐತಾಳ್
  • ವಜ್ರಾಭರಣಗಳ ಪ್ರದರ್ಶನ ಪುತ್ತೂರಿಗೆ ಪ್ರಥಮವಾಗಿ ಮುಳಿಯದಿಂದಾಗಿತ್ತು – ಕೇಶವಪ್ರಸದ್ ಮುಳಿಯ
  • ಅತ್ಯುತ್ತಮ ಆಯ್ಕೆ ಸಿಗಲಿದೆ – ಕೃಷ್ಣ ನಾರಾಯಣ ಮುಳಿಯ

ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಹೊಸ ವಿಷಯಗಳನ್ನು ಪುತ್ತೂರಿಗೆ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಯುನಿಕ್ ಡೈಮಂಡ್ ಪೆಸ್ಟ್‌ಗೆ ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಜ.9ರಂದು ಚಾಲನೆ ನೀಡಲಾಯಿತು.

ಪುತ್ತೂರು ಮತ್ತು ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಜ.25ರ ತನಕ ನಡೆಯಲಿರುವ ಯುನಿಕ್ ಡೈಮಂಡ್ ಪೆಸ್ಟ್ ಅನ್ನು ಏಸ್ ಮೋಟಾರ‍್ಸ್‌ನ ಮಾಲಕ ಬೈಕ್, ಕಾರ್ ರ‍್ಯಾಲಿಗಳಲ್ಲಿ ಚಾಂಪಿಯನ್ ಆಗಿರುವ ಆಕಾಶ್ ಐತಾಳ್ ಅವರು ಉದ್ಘಾಟಿಸಿದರು. ವಿಶೇಷ ವಜ್ರಾಭರಣಗಳನ್ನು ಆಕಾಶ್ ಐತಾಳ್ ಅವರ ಪತ್ನಿ ನಾಗಶ್ರೀ ಐತಾಳ್ ಅವರು ಅನಾವರಣಗೊಳಿಸಿದರು.

ಗ್ರಾಹಕರ ಆಯ್ಕೆಗೆ ತಕ್ಕಂತೆ ಹೊಸತನ ನೀಡುತ್ತಿರುವ ಮುಳಿಯ:

ಯುನಿಕ್ ಡೈಮಂಡ್ ಪೆಸ್ಟ್ ಅನ್ನು ಉದ್ಘಾಟಿಸಿದ ಏಸ್ ಮೋಟಾರ‍್ಸ್‌ನ ಮಾಲಕ ಆಕಾಶ್ ಐತಾಳ್ ಅವರು ಮಾತನಾಡಿ ಗ್ರಾಹಕರ ಆಯ್ಕೆಗೆ ತಕ್ಕಂತೆ ಹೊಸತನ ನೀಡುತ್ತಿರುವ ಮುಳಿಯ ಜ್ಯುವೆಲ್ಸ್ ಯುನಿಕ್ ಡೈಮಂಡ್ ಪೆಸ್ಟ್ ಮೂಲಕ ಹೊಸ ಬದಲಾವಣೆ ನೀಡುತ್ತಿದೆ. ಗ್ರಾಹಕರು ಪೆಸ್ಟ್ ಮೂಲಕ ವಜ್ರಾಭರಣ ಖರೀದಿಸುವಂತಹ ಪ್ರೋತ್ಸಾಹ ಸಿಗುವಂತಾಗಲಿ ಎಂದರು.

ಮುಳಿಯದಲ್ಲಿ ತುಂಬಾ ವಿನೂತನ ಕಲೆಕ್ಷನ್ಸ್ ಇದೆ:

ವಿಶೇಷ ವಜ್ರಾಭರಣಗಳನ್ನು ಅನಾವರಣ ಮಾಡಿದ ನಾಗಶ್ರೀ ಐತಾಳ್ ಅವರು ಮಾತನಾಡಿ ನಮ್ಮಲ್ಲಿ ವೈವಿಧ್ಯಮ ಸಂಸ್ಕೃತಿ ಇದೆ. ಇಂತಹ ಸಂದರ್ಭದಲ್ಲಿ ಹೊರ ದೇಶದಿಂದ ಕಲೆಕ್ಷನ್ಸ್ ಬಂದರೂ ನಮ್ಮಲ್ಲಿರುವ ಸಣ್ಣ ಸಣ್ಣ ವೆರ‍್ಯಾಟಿಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ನಿಟ್ಟಿನಲ್ಲಿ ಮುಳಿಯ ಚಿನ್ನದ ಮಳಿಗೆಯಲ್ಲಿ ಅತೀ ಹೆಚ್ಚು ವಿನೂತನ ಕಲೆಕ್ಷನ್ ಇರುವುದು ಗ್ರಾಹಕರನ್ನು ಖಂಡಿತಾ ಮನಸೂರೆಗೊಳಿಸುತ್ತದೆ. ಗ್ರಾಹಕರಿಗಾಗಿ ಮುಂದೆ ಇನ್ನೂ ಹೆಚ್ಚಿನ ಪೆಸ್ಟ್ ಮುಳಿಯಿಂದ ಮೂಡಿ ಬರಲಿ ಎಂದರು.

ಆಕಾಶ್ ಐತಾಳ್ ಅವರಿಗೆ ಸನ್ಮಾನ

ಮೋಟಾರ್ ಸ್ಪೋರ್ಟ್ಸ್‌ನ ದ್ವಿಚಕ್ರ ಮತ್ತು ಚತುಷ್ಪತ ಚಕ್ರದ ರ‍್ಯಾಲಿಯಲ್ಲಿ ಟಾಪ್ 3ನೇ ಸ್ಥಾನ ಪಡೆದಿರುವುದಲ್ಲದೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅನೇಕ ರ‍್ಯಾಲಿಯಲ್ಲಿ ಗೆಲುವು ಸಾಧಿಸಿರುವುದಲ್ಲದೆ ಭಾರತದಲ್ಲಿ ನಡೆಯುವ ರ‍್ಯಾಲಿಯನ್ನು ಮುನ್ನಡೆಸುತ್ತಿರುವ ಟಿವಿಎಸ್ ದ್ವಿಚಕ್ರವಾಹನಗಳ ಶೋ ರೂಮ್ ಏಸ್ ಮೋಟಾರ‍್ಸ್‌ನ ಮಾಲಕ ಆಕಾಶ್ ಐತಾಳ್ ಅವರನ್ನು ಮುಳಿಯ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸರಾಫ ಮುಳಿಯ ಶ್ಯಾಮ್ ಭಟ್ ಅವರು ಆಕಾಶ್ ಐತಾಳ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಫಲವಸ್ತು ನೀಡಿ ಗೌರವಿಸಿದರು.

ವಜ್ರಾಭರಣಗಳ ಪ್ರದರ್ಶನ ಪುತ್ತೂರಿಗೆ ಪ್ರಥಮವಾಗಿ ಮುಳಿಯದಿಂದಾಗಿತ್ತು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಳಿಯ ಜ್ಯುವೆಲ್ಸ್‌ನ ಆಡಳಿತಾಧಿಕಾರಿ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ವಜ್ರಾಭರಣ ದುಬಾರಿ ಮತ್ತು ನೋಡಿದರೆ ಖರೀದಿಸದೆ ಹಿಂದೆ ಬರುವುದು ಹೇಗೆ ಎಂಬ ಜನರ ಮನಸ್ಸಿನ ಭಾವನೆಯನ್ನು ತೆಗೆದ ಹಾಕಲು ಚಿನ್ನಾಭರಣಗಳಿಗೆ 20 ವರ್ಷಗಳ ಹಿಂದೆಯೇ ಪ್ರದರ್ಶನ ಮತ್ತು ಮಾರಾಟ ಸೌಲಭ್ಯ ಮಾಡಿದ್ದೆವು. ಇದರಿಂದಾಗಿ ಜನರು ಚಿನ್ನಾಭರಣಗಳ ಪ್ರದರ್ಶನವನ್ನು ನೋಡಲು ತುಂಬ ಜನರು ಬರಲು ಆರಂಭಿಸಿದರು. ಆ ಬಳಿಕ ಬೇರೆ ಕಡೆಗಳಲ್ಲಿ ದೊಡ್ಡ ದೊಡ್ಡ ಪೆಸ್ಟ್ ನಡೆಯುತ್ತಿದೆ ಎಂದರು.

ಅತ್ಯುತ್ತಮ ಆಯ್ಕೆ ಸಿಗಲಿದೆ

ಮುಳಿಯ ಜ್ಯುವೆಲ್ಸ್‌ನ ಮ್ಯಾನೆಂಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೊಸ ವಿಷಯ ಪುತ್ತೂರಿಗೆ ನೀಡಲು ಮುಳಿಯ ಯಾವುತ್ತೂ ಮುಂದಿದೆ. ಮುಂದೆ. ಅದೇ ರೀತಿ ಡೈಮಂಡ್‌ನಲ್ಲಿ ಹೊಸತನ ಮತ್ತು ಹಳೆಯ ಮತ್ತು ಹೊಸತನದ ಮಿಶ್ರಣವೂ ಅಗತ್ಯ. ಹಾಗಾಗಿ ನಮಲ್ಲಿ ಟ್ರೇಡಿಷನಲ್ ಡಿಸೈನ್ ಇದೆ. ಮೋಡರ್ನ್ ಮಿಕ್ಸ್ ಆಗಿರುವುದು ಇದೆ. ಐದಾರೂ ವರ್ಷಗಳಿಂದ ಡೈಮಂಡ್‌ಗೆ ವಿಶೇಷವಾಗಿ ಪೆಸ್ಟ್ ನಡೆಸಿದ್ದೇವೆ. ಗ್ರಾಹಕರಿಗೆ ಅತ್ಯತ್ತಮ ಆಯ್ಕೆ ಮತ್ತು ಎಲ್ಲಾ ಉಡುಪುಗಳಿಗೂ ಸರಿ ಹೊಂದುವ ಸುಮಾರು ರೂ. 5ಸಾವಿರದಿಂದಲೇ ಆರಂಭಿಕ ಬೆಲೆಯಾಗಿ ಯುನಿಕ್ ಡೈಮಂಡ್ ವಿಶೇಷತೆಯನ್ನು ಕಾಣಬಹುದು ಎಂದರು. ಮುಳಿಯ ಸಂಸ್ಥೆಯ ಸುಲೋಚನಾ ಮುಳಿಯ, ಕೃಷ್ಣವೇಣಿ ಮಳಿಯ, ಅಶ್ವಿನಿಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರಾರ್ಥಿಸಿದರು. ಪ್ಲೋರ್ ಮೆನೇಜರ್ ಯತೀಶ್ ಸ್ವಾಗತಿಸಿ, ವಂದಿಸಿದರು.

ಬೆಳ್ತಂಗಡಿಯಲ್ಲೂ ಪೆಸ್ಟ್‌ಗೆ ಚಾಲನೆ:

ಬೆಳ್ತಗಡಿಯಲ್ಲಿ ನಡೆದ ಯುನಿಕ್ ಡೈಮಂಡ್ ಪೆಸ್ಟ್‌ನ್ನು ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಪುರಸ್ಕೃತೆ ಅಪ್ರಮೇಯ ಅವರು ಉದ್ಘಾಟಿಸಿದರು. ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶಂಕರ್ ರಾವ್ ಅತಿಥಿಯಾಗಿ ಭಾಗವಹಿಸಿದ್ದರು. ಸರಾಫ್ ಮುಳಿಯ ಶ್ಯಾಮ್ ಭಟ್, ಅಶ್ವಿನಿ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಕಾನೋಮಿಕಲ್ ಬ್ರ್ಯಾಂಡೆಡ್ ವಜ್ರ

ಪೆಸ್ಟ್‌ನಲ್ಲಿ ವಿಶೇಷ ಬ್ರ್ಯಾಂಡೆಡ್ ವಜ್ರಾಭರಣಗಳಿವೆ. ಬಣ್ಣದ ವಜ್ರದಲ್ಲಿ ಎಸ್‌ಐ ಎಂಬ ವಿಶೇಷ ಕ್ವಾಲಿಟಿ ಇದೆ. ಇಲ್ಲಿ ಇಕಾನೋಮಿಕಲ್ ಬ್ರ್ಯಾಂಡ್, ಇದನ್ನು ಇಂಟರ್‌ನ್ಯಾಷನಲ್ ಬ್ರಾಂಡನ್‌ಲ್ಲಿ ಮಾರಾಟ ಮಾಡುತ್ತಾರೆ. ಹಾಗಾಗಿ ಅದನ್ನು ಪುತ್ತೂರಿಗೆ ವಿಶೇಷವಾಗಿ ಪರಿಚಯಿಸುವವಲ್ಲಿ ಮುಳಿಯ ಮುಂದಿದೆ. ಇಕನೋಮಿಕಲ್ ಲೆಕ್ಸೂರಿ ಬ್ರ್ಯಾಂಡ್ ವಿಶೇಷ ಪ್ರದರ್ಶನವಾಗಿದೆ. ಪೆಸ್ಟ್‌ನಲ್ಲಿ ವಜ್ರಾಭರಣದ ಮೇಲೆ ಶೇ.೯೫ರ ತನಕ ವಿನಿಮಯ ಬೆಲೆ ಪಡೆಯಬಹುದು. ಶೇ.90 ಬೈ ಬ್ಯಾಕ್ ಪಡೆಯುವ ಅವಕಾಶವಿದೆ.

ಕೇಶವಪ್ರಸಾದ್ ಮುಳಿಯ, ಆಡಳಿತ ಮಂಡಳಿ ಅಧ್ಯಕ್ಷರು
ಮುಳಿಯ ಜ್ಯುವೆಲ್ಸ್ ಸಂಸ್ಥೆ ಪುತ್ತೂರು

LEAVE A REPLY

Please enter your comment!
Please enter your name here