ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದಲ್ಲಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ನೂತನ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಜ.22 ರಂದು ಶಂಕುಸ್ಥಾಪನೆ ನೆರವೇರಿಸಿದರು.
ಮಂಗಳೂರಿನ ಬಿಜಿಎಸ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳು ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಯತಿವರೇಣ್ಯರಾದ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಆದಿ ಚುಂಚನಗಿರಿ ಕ್ಷೇತ್ರದಿಂದ ಆಗಮಿಸಿದ ಪೌರೋಹಿತ್ಯ ತಂಡದ ವೇದ- ಮಂತ್ರ ಘೋಷದೊಂದಿಗೆ ಶಂಕುಸ್ಥಾಪನೆ ನಡೆಸಲಾಯಿತು.
ಇದಕ್ಕೂ ಮೊದಲು ಒಕ್ಕಲಿಗ ಸೇವಾ ಸಂಘ, ಯುವ ಒಕ್ಕಲಿಗ ಸಂಘ ಹಾಗೂ ಮಹಿಳಾ ಒಕ್ಕಲಿಗ ಸಂಘದ ಸದಸ್ಯರು ಪೂಜ್ಯ ಯತಿವರೇಣ್ಯರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಚಿವ ಅಂಗಾರ, ಶಾಸಕ ಸಂಜೀವ ಮಠಂದೂರು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಗಂಗಾಧರ ಗೌಡ ಉಪಸ್ಥಿತರಿದ್ದರು. ಈ ಸಂದರ್ಭ ಒಕ್ಕಲಿಗ ಸ್ವ-ಸಹಾಯ ಸಂಘಗಳ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನಿರ್ದೇಶಕ ಜಗದೀಶ್ ರಾವ್ ಮಣಿಕ್ಕಳ, ಮಾಜಿ ನಿರ್ದೇಶಕರಾದ ರಾಮಚಂದ್ರ ಮಣಿಯಾಣಿ, ಧರ್ನಪ್ಪ ನಾಯ್ಕ, ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಪ್ರಶಾಂತ್ ಪೆರಿಯಡ್ಕ, ಬಜತ್ತೂರು ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ, ಯುವ ಉದ್ಯಮಿ ಪ್ರಸನ್ನ ಕುಮಾರ್ ಪೆರಿಯಡ್ಕ, ರಾಧಾಕೃಷ್ಣ ಭಟ್ ಬೊಳ್ಳಾವು, ರಾಮಣ್ಣ ಶೆಟ್ಟಿ ಬೊಳ್ಳಾವು, ಜತ್ತಪ್ಪ ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ ಗೌಡ ಅರ್ಬಿ, ತಾ.ಪಂ. ಮಾಜಿ ಸದಸ್ಯರಾದ ತೇಜಸ್ವಿನಿ ಗೌಡ ಕಟ್ಟೆಪುಣಿ, ಮುಕುಂದ ಗೌಡ ಬಜತ್ತೂರು, ಜಯಂತಿ ಆರ್. ಗೌಡ, ಒಕ್ಕಲಿಗ ಸೇವಾ ಸಂಘದ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಶೇಖರ ಗೌಡ ಪಂಚೇರು, ಸಮುದಾಯದ ಪ್ರಮುಖರಾದ ಶಿವಣ್ಣ ಗೌಡ ಬಿದಿರಾಡಿ, ಸುರೇಶ್ ಅತ್ರೆಮಜಲು, ಗಂಗಾಧರ ಗೌಡ ನೆಕ್ಕರಾಜೆ, ಉದಯ ಅತ್ರೆಮಜಲು, ದುಗ್ಗಪ್ಪ ಗೌಡ , ಲಕ್ಷಣ ಗೌಡ ನೆಡ್ಚಿಲು, ಬಾಬು ಗೌಡ ನೆಡ್ಚಿಲು, ಪರಮೇಶ್ವರ ಗೌಡ ಕಂಪ, ಕೇಶವ ಗೌಡ ಕುಂಟಿನಿ, ಮೇದಪ್ಪ ಪಾಲೆತ್ತಡಿ, ರಾಮಚಂದ್ರ ಗೌಡ ನೆಡ್ಚಿಲು, ಕೃಷ್ಣಪ್ಪ ಗೌಡ ಬೊಳ್ಳಾವು, ಸುಜಿತ್ ಬೊಳ್ಳಾವು, ನಿತಿನ್ ಬೊಳ್ಳಾವು, ಧರ್ನಪ್ಪ ಗೌಡ ನೆಡ್ಚಿಲು, ಚಿದಾನಂದ ಪಂಚೇರು, ದೇರಣ್ಣ ಗೌಡ ಓಮಂದೂರು, ಗಣೇಶ್ ಕಿಂಡೋವು, ವಸಂತ ಗೌಡ ಪಿಜಕ್ಕಳ, ಕಮಲಾಕ್ಷಿ ಬೊಳ್ಳಾವು, ಜಯಂತಿ ರಂಗಾಜೆ, ಶಾಂತಾರಾಮ ಓಡ್ಲ, ಸುನಂದ ಬೊಳ್ಳಾವು, ಜತ್ತಪ್ಪ ಗೌಡ ರಂಗಾಜೆ, ಲತಾ ರಂಗಾಜೆ, ಶೀನಪ್ಪ ಗೌಡ ಬೊಳ್ಳಾವು, ರಾಜೇಶ್ ನೆಕ್ಕರೆ, ಆನಂದ ಗೌಡ ಕುಂಟಿನಿ, ಸೇಸಪ್ಪ ಗೌಡ ಬೊಳ್ಳಾವು, ಯಶವಂತ ಗುಂಡ್ಯ, ವಿಶ್ವನಾಥ ಗೌಡ, ಗಿರಿಯಪ್ಪ ಗೌಡ, ಲೀಲಾವತಿ, ಶಿವರಾಮ ಕಡಬ, ಹರೀಶ್ ಪಟ್ಲ, ಸರ್ವೋದಯ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಎ., ಪರೀವೀಕ್ಷಕರಾದ ಬಾಲಕೃಷ್ಣ ಗೌಡ ಬಿ.ಟಿ., ಶಿಕ್ಷಕರಾದ ಸವಿತಾ ಎ.ಎ., ರಜನಿ ಎಚ್., ಮೋಹನ್ ಎಚ್., ಶಕುಂತಳಾ ಕೆ., ಡೊಂಬಯ್ಯ ಗೌಡ ಮತ್ತಿತರರು ಉಪಸ್ಥಿತರಿದ್ದರು.