ಬದಲಿ ರಸ್ತೆಯಾಗಿ ದರ್ಬೆ-ಮುಕ್ರಂಪಾಡಿ-ಪುರುಷರಕಟ್ಟೆ, ಬರೆಪ್ಪಾಡಿ – ಪಲ್ಲತ್ತಾರು ರಸ್ತೆ ಬಳಸಲು ಸೂಚನೆ
ಪುತ್ತೂರು: ನರಿಮೊಗರು – ಕಬಕ ಪುತ್ತೂರು ರೈಲ್ವೆ ನಿಲ್ದಾಣದ ನಡುವೆ ಕಿ.ಮೀ.134/200-300 (ಪುರುಷರಕಟ್ಟೆ)ನಲ್ಲಿ ಎಲ್ಸಿ ಕಾಮಗಾರಿ ಪ್ರಯುಕ್ತ ಫೆ.1 ಮತ್ತು 2ರಂದು ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 101 ಮುಚ್ಚಲಾಗುತ್ತದೆ. ದರ್ಬೆ ಪುರುಷರಕಟ್ಟೆ ರಸ್ತೆ ಸಂಚಾರಕ್ಕೆ ದರ್ಬೆ ಮುಕ್ರಂಪಾಡಿ ಪುರುಷರಕಟ್ಟೆ ರಸ್ತೆಯನ್ನು ಬಳಸಬಹುದು.
ಲೆವೆಲ್ ಕ್ರಾಸಿಂಗ್ ಸಂಖ್ಯೆ 122/700-800 ಬೆಳಂದೂರು – ಪೆರುವಾಜೆ ರಸ್ತೆಯ ಬೆಳಂದೂರು ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 83 ಮುಚ್ಚಲಾಗುತ್ತದೆ. ಬೆಳಂದೂರು ಪೆರುವಾಜೆ ರಸ್ತೆ ಸಂಚಾರಕ್ಕೆ ಬದಲಿ ರಸ್ತೆಯಾಗಿ ಬರೆಪ್ಪಾಡಿ – ಪಲ್ಲತ್ತಾರು ರಸ್ತೆ ಬಳಸಬಹುದು ಎಂದು ಅಸಿಸ್ಟೆಂಟ್ ಡಿವಿಜನಲ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.