ಪುತ್ತೂರು:ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.13ರಂದು ರಾತ್ರಿ ಸಂಕ್ರಮಣದಂಗವಾಗಿ ದೈವಗಳಿಗೆ ಕೋಲ,ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಆರಂಭದಲ್ಲಿ ಕೆಂಡದರ್ಶನ ಸೇವೆ ನಡೆಯಿತು.ಬಳಿಕ ಅಗ್ನಿ ಕಲ್ಲುರ್ಟಿ ಕೋಲ,ಅಗೇಲು ಸೇವೆ ನಡೆದು ಸ್ವಾಮಿ ಕೊರಗಜ್ಜ ದೈವದ ಕೋಲ,ಅಗೇಲು ಸೇವೆ ನಡೆಯಿತು.ಇದೇ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಿತು.ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.ಮಾ.18ರಂದು ಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವ ಸಂಭ್ರಮ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.