ವಿಟ್ಲ:ಆರ್‌ಎಸ್‌ಎಸ್ ಮುಖಂಡರ ಹತ್ತಿರದ ಸಂಬಂಧಿಯಾಗಿರುವ ವಿಟ್ಲ ಬಿಜೆಪಿ ಬೂತ್ ಅಧ್ಯಕ್ಷ ಸಹಿತ ಹಲವು ಮುಖಂಡರು ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.
ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅರುಣ್ ವಿಟ್ಲ ಅವರು ಪ್ರತಿನಿಧಿಸುವ 11ನೇ ವಾರ್ಡ್ ಅಧ್ಯಕ್ಷ ಮೋಹನ್ ಕಟ್ಟೆ, ಅಲ್ಲದೆ ವಿಟ್ಲ ತಾಲೂಕು ಆರ್‌ಎಸ್‌ಎಸ್ ಜವಾಬ್ದಾರಿ ಹೊಂದಿರುವ ಪ್ರಮುಖರ ತೀರಾ ಹತ್ತಿರದ ಸಂಬಂಧಿ ಯೋಗೀಶ್ ಗೌಡ, ದೇವಸ್ಯ, ರಾಜೇಶ್, ಮಹಾಬಲ, ವರದರಾಜ್ ಕೊಟ್ಟಾರಿ ಸಹಿತ ಹಲವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.
ನಾನು ಕಾಂಗ್ರೆಸ್ ಸೇರಿಲ್ಲ ಮೋಹನ್ ಕಟ್ಟೆ ಸ್ಪಷ್ಟನೆ:
ನಾನು ಕಾಂಗ್ರೆಸ್ ಸೇರಿಲ್ಲ ಎಂದು ವಿಟ್ಲ ೮ನೇ ಬೂತ್ ಬಿಜೆಪಿ ಅಧ್ಯಕ್ಷ ರಾಜೇಶ್ ಕಟ್ಟೆ ಸ್ಪಷ್ಟನೆ ನೀಡಿದ್ದಾರೆ.
ವಿಟ್ಲ ೮ನೇ ಬೂತ್ ಬಿಜೆಪಿ ಅಧ್ಯಕ್ಷನಾಗಿರುವ ನಾನು ಕಾಂಗ್ರೆಸ್ ಸೇರಿರುವುದಾಗಿ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿರುವುದು ಶುದ್ಧ ಸುಳ್ಳು.ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ನಮ್ಮ ಮನೆ ಸಂಘ ಪರಿವಾರದ ಮನೆಯಾಗಿದೆ.ಹೀಗಿರುವಾಗ ನಾನು ಕಾಂಗ್ರೆಸ್ ಸೇರ್ಪಡೆ ವಿಚಾರ ಸುಳ್ಳು, ಸಂಘ ಪರಿವಾರ ಮತ್ತು ಪಕ್ಷದ ಘನತೆಗೆ ಧಕ್ಕೆ ಬಾರದಂತೆ ಮುಂದೆಯೂ ಬದ್ಧತೆಯಿಂದ ಇರುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿಯೇ ಮೋಹನ್ ಕಟ್ಟೆ ಅವರು ಧ್ವನಿಸಂದೇಶ ರವಾನಿಸಿ ಸ್ಪಷ್ಟನೆ ನೀಡಿದ್ದಾರೆ.