ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಕಡಬ ತಾಲೂಕು ಕಾಯಿಮಣ ಗ್ರಾಮದ ನಾರ್ಯಬೈಲು ಅಂಗನವಾಡಿ ನಿರ್ಮಾಣಕ್ಕೆ ಧನಸಹಾಯ ಹಾಗೂ ಕಡಬ ತಾಲೂಕು ಕಾಮಣ ಗ್ರಾಮದ ನಾರ್ಯಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.
ಧನಸಹಾಯ ನೀಡುವ ಸಂದರ್ಭದಲ್ಲಿ ಜೋಕಾಲಿ ಬಳಗ ಕೃಷ್ಣಾಪುರ ಇದರ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್, ರಂಜಿತ ಮುಂಡಾಲ, ವಿಶಾಂತ ಮುಂಡಾಲ, ಸುರಕ್ಷಿತ್ ಹಾಗೂ ಹಲವಾರು ಸಾರ್ವಜನಿಕರು ಮತ್ತು
ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡುಗೆ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಜೋಯ್ಸ್ ಹೇಮಲತಾ ಬಂಗೇರ, ಸಹಾಯಕ ಶಿಕ್ಷಕಿ ಭವ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರವೀಣ್ ಮರಕಡ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಕುಸುಮ, ಕೇಶವ ಮರಕ್ಕಡ, ರಾಮಚಂದ್ರ ಮರಕ್ಕಡ, ಶ್ರೀಮತಿ ಸುಮಿತ್ರ, ಪ್ರೇಮ, ಬೇಬಿ, ಸೌಮ್ಯ, ಮೋಹಿನಿ, ನಿಮಿತ, ಮಮತ ಹಾಗೂ ಈ ಎರಡೂ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಪೂರ್ವಾಧ್ಯಕ್ಷೆ ಸೆನೋರಿಟಾ ಆನಂದ್, ನಿಯೋಜಿತ ಅಧ್ಯಕ್ಷ ಸುಂದರ ರೈ ಬಲ್ಕಾಡಿ ಮುಂತಾದವರು ಹಾಜರಿದ್ದರು.