ಬಡಗನ್ನೂರುಃ ಪಡುವನ್ನೂರು ಗ್ರಾಮದ ಪಡುಮಲೆ ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮಾ.6 ರಂದು ಆರಂಭಗೊಂಡಿದ್ದು ಮಾ.11 ರ ತನಕ ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮ :
ಮಾ.6 ರಂದು ರಾತ್ರಿ ಭಂಡಾರ ತೆಗೆದು, ಬೀರ ತಂಬಿಲ, ಮಾ.7 ರಂದು ಪೂ. ಗಂ 6 ರಿಂದ 48 ಕಾಯಿ ಗಣಪತಿ ಹೋಮ, ಪೂ. 9 ರಿಂದ ಆನೆ ಚಪ್ಪರ ಏರಿಸಿ, ಬಳಿಕ ಮಕರ ತೋರಣ ಏರಿಸಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ, . ರಾತ್ರಿ 8 ರಿಂದ ಪಾಲಕ್ಕಿ ಉತ್ಸವ ಬೀರ ತಂಬಿಲ.ನಡೆಯಿತು.
ಮಾ.8 ರಂದು ಪೂ. ಗಂ 11 ರಿಂದ ಕಿನ್ನಿಮಾಣಿ ದೈವದ ನೇಮ,ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ. ರಾತ್ರಿ 8 ರಿಂದ ಪಾಲಕ್ಕಿ ಉತ್ಸವ ಬೀರ ತಂಬಿಲ.ನಡೆಯಲಿದೆ.
ಮಾ.9 ರಂದು ಪೂ.ಗಂ 11 ರಿಂದ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ರಾತ್ರಿ 8 ರಿಂದ ಪಾಲಕ್ಕಿ ಉತ್ಸವ ಬೀರ ತಂಬಿಲ.ನಡೆಯಲಿದೆ.
ಮಾ.10 ರಂದು ಬೆಳಗ್ಗೆ ಗಂ 7 ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ. 11 ರಿಂದ ವ್ಯಾಘ್ರಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ ಅನ್ನಸಂತರ್ಪಣೆ , ಸಂಜೆ ಗಂ 5 ರಿಂದ ಕನ್ನಡ್ಕ ತರವಾಡು ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬರುವುದು, ರಾತ್ರಿ 7.30 ರಿಂದ ಪಡುಮಲೆ ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ಕಟ್ಟೆಪೂಜೆ, ಧ್ವಜಾವರೋಹಣ,ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ,ಮಂತ್ರಾಕ್ಷತೆ ಬಳಿಕ ಗುಳಿಗ ದೈವದ ನೇಮ ನಡೆಯಲಿದೆ.
ಮಾ.11 ರಂದು ಪೂ ಗಂ 10 ರಿಂದ ಪಡುಮಲೆ ದೈವಸ್ಥಾನದ ಪಿಲಿಮಾಡದ ವಠಾರದಲ್ಲಿ ವ್ಯಾಘ್ರಚಾಮುಂಡಿ ದೈವದ ನೇಮ ನಡೆಯಲಿದೆ.