ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯ ಕೊಡುಗೆ ಬಹಳಷ್ಠಿದೆ: ಎಂ. ಎನ್. ರಾಜೇಂದ್ರ ಕುಮಾರ್
ಸಹಕಾರಿ ಸಂಘಗಳ ಹುಟ್ಟು ನಮ್ಮ ಪ್ರಭಲತೆಗೆ ಹಿಡಿದ ಕೈಗನ್ನಡಿ: ಡಾ.ಮಂಜುನಾಥ ಭಂಡಾರಿ
ಈ ಸೇವಾ ಸಹಕಾರಿ ಸಂಘವು ಒಂದು ಆದರ್ಶ ಸಹಕಾರಿ ಸಂಘವಾಗಿದೆ: ಟಿ. ಜಿ. ರಾಜಾರಾಮ ಭಟ್
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯಗಳನ್ನುಮಾಡಲಾಗುತ್ತಿದೆ: ಕೆ. ಸುಭಾಶ್ಚಂದ್ರ ಶೆಟ್ಟಿ ಕುಳಾಲು
ವಿಟ್ಲ: ಸಂಘದ ಕಾರ್ಯವೈಖರಿ ಕಂಡು ತುಂಬಾ ಸಂತಸವಾಗಿದೆ. ಸಂಸ್ಥೆ ಬೆಳದಿದೆ ಎನ್ನುವುದಕ್ಕೆ ಗ್ರಾಹಕರ ಷೇರುಗಳಿಗೆ ನಾವು ಕೊಡುವ ಡಿವಿಡೆಂಟ್ ನಲ್ಲಿ ಕಂಡುಬರುತ್ತದೆ. ಸಹಕಾರ ಸಂಘಗಳ ಕಟ್ಟಡ ಆಧುನಿಕತೆಗೆ ಬೇಕಾದ ರೀತಿಯಲ್ಲಿ ಒಗ್ಗಿಕೊಂಡಿರಬೇಕು. ಸಹಕಾರಿ ಸಂಘಗಳಿಗೆ ಅದರದೇ ಆದ ಇತಿಹಾಸವಿದೆ. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಸಹಕಾರ ಸಂಘಗಳು ಮುಂಚೂಣಿಯಲ್ಲಿದೆ.ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಮಾ.12ರ ಕೊಡಂಗಾಯಿಯಲ್ಲಿ ಸುಮಾರು 1.15 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೊಡಂಗಾಯಿ ಪ್ರಧಾನ ಕಚೇರಿಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಯೋಜನೆಯಲ್ಲಿ ಒಳ್ಳೆಯದರೊಂದಿಗೆ ಕೆಟ್ಟದೂ ಇದೆ. ಸೇವೆಗೆ ಹೆಸರೇ ಸಹಕಾರ. ಬಲಾಡ್ಯವಾದುದನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸವಾಗಬೇಕು. ಜನರ ಬಳಿಗೆ ತೆರಳಿ ಸೇವೆ ನೀಡುವ ಇರಾದೆ ಸಹಕಾರಿ ಸಂಘಗಳದ್ದಾಗಿದೆ. ಸುಲಲಿತ ವ್ಯವಸ್ಥೆಗೆ ಸರಕಾರ ಸಹಕಾರ ನೀಡಬೇಕಿದೆ. ಗ್ರಾಮಗಳು ಸಹಕಾರಿ ಕ್ಷೇತ್ರದ ವ್ಯವಸ್ಥೆಯಲ್ಲೇ ಮುಂದುವರಿಯುವಂತಾಗಬೇಕು. ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯ ಕೊಡುಗೆ ಬಹಳಷ್ಠಿದೆ. ಮಹಿಳೆಯರಿಗೆ ದೈರ್ಯ ತುಂಬುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಮಹಿಳೆಯರು ಸ್ವಾವಲಂಭಿಯಾಗಿ ಬದುಕು ಕಟ್ಟುವ ಕೆಲಸವಾಗುತ್ತಿದೆ. ಎಲ್ಲರನ್ನು ಒಟ್ಟುಗೂಡಿಸಿ ಮುಂದುವರೆದರೆ ಯಶಸ್ಸಾಗಲು ಸಾಧ್ಯ ಎಂದವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿರವರು ಮಾತನಾಡಿ ಇಂತಹ ಸಹಕಾರಿ ಸಂಘಗಳಿಂದಾಗಿ ಭಾರತದಲ್ಲಿ ಆರ್ಥಿಕ ಸಮಸ್ಯೆ ಸುದ್ರಡವಾಗಿದೆ. ರೈತರು ಹಾಗೂ ಸಹಕಾರಿ ಸಂಘಗಳು ದೇಶದ ಬೆನ್ನೆಲುಬು. ದೇಶ ಸುಸ್ಥಿರವಾಗಿಸಲು ಸಹಕಾರಿ ಸಂಘಗಳ ಪಾತ್ರ ಮಹತ್ವದ್ದು. ಬ್ಯಾಂಕ್ ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸಹಕಾರಿ ಸಂಘಗಳು ಬೆಳೆದುನಿಂತಿದೆ. ಸಹಕಾರಿ ಸಂಘಗಳ ಹುಟ್ಟು ನಮ್ಮ ಪ್ರಭಲತೆಗೆ ಹಿಡಿದ ಕೈಗನ್ನಡಿ. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಇಂತಹ ಸಹಕಾರಿ ಸಂಘಗಳಿಂದ ಆಗುತ್ತಿರುವುದು ಸಂತಸದ ಸಂಗತಿ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ. ಜಿ. ರಾಜಾರಾಮ ಭಟ್ ರವರು ಮಾತನಾಡಿ ವಿಟ್ಲ ಪಡ್ನೂರು ಸೇವಾಸಹಕಾರಿ ಸಂಘವು ಒಂದು ಆದರ್ಶ ಸಹಕಾರಿ ಸಂಘವಾಗಿ ಬೆಳೆದುನಿಂತಿದೆ. ಇಂತಹ ಸಹಕಾರಿ ಸಂಘಗಳಲ್ಲಿ ಕೃಷಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯೂ ಒಂದೇ ಸೂರಿನಡಿಯಲ್ಲಿ ಸಿಗುವಂತಾಗಬೇಕು. ಕೃಷಿಕರ ನೋವಿಗೆ ಸ್ಪಂದಿಸುವ ಕೆಲಸ ಸಹಕಾರಿ ಸಂಘಗಳಿಂದ ಆಗುತ್ತಿರುವುದು ಸಂತಸದ ವಿಚಾರ. ಸಹಕಾರಿ ಸಂಘದಿಂದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವಾದರೆ ಈ ಮೂರು ಗ್ರಾಮಗಳು ಆದರ್ಶ ಗ್ರಾಮವಾಗಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಕೆ. ಸುಭಾಶ್ಚಂದ್ರ ಶೆಟ್ಟಿ ಕುಳಾಲು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ೯೫ ಲಕ್ಷರೂಪಾಯಿ ವೆಚ್ಚದಲ್ಲಿ ಕೇಂದ್ರ ಕಚೇರಿಯ ನೂತನ ಕಟ್ಟಡದ ಕೆಲಸವಾಗಿದೆ. ಆರಂಭದಲ್ಲಿ ನಮ್ಮ ಸಂಸ್ಥೆಯ ಶಾಖೆಗಳ ಕಟ್ಟಡವನ್ನು ಉತ್ತಮಗೊಳಿಸಲಾಗಿತ್ತು. ಇದೀಗ ಕೇಂದ್ರ ಕಚೇರಿಯನ್ಜು ಆಧುನಿಕತೆಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಪರಸ್ಪರ ಸಹಕಾರಿ ತತ್ವದೊಂದಿಗೆ ಮುನ್ನಡೆದಾಗ ಯಶಸ್ಸಾಗಲು ಸಾಧ್ಯ ಎಂದ ಅವರು ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಉದ್ಘಾಟನೆ:
ವಿಸ್ತೃತ ಕಟ್ಟಡದ ಪ್ರಥಮ ಮಹಡಿಯಲ್ಲಿ ಕೇಂದ್ರ ಕಚೇರಿ, ಆಡಳಿತ ಮಂಡಳಿಯ ಸಭಾಂಗಣ ಉದ್ಘಾಟನೆ, ಅಧ್ಯಕ್ಷರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಠಡಿ, ಸಭಾಂಗಣ, ಭದ್ರತಾಕೋಶ, ಗಣಕೀಕರಣ ವ್ಯವಸ್ಥೆಯನ್ನು ಈ ಸಂದರ್ಭ ಉದ್ಘಾಟಿಸಲಾಯಿತು.
ಸನ್ಮಾನ:
ಸಂಘದ ಮಾಜಿ ಅಧ್ಯಕ್ಷ ಎಂ. ಬಾಲಕೃಷ್ಣ ರೈ ಮೂರ್ಜೆಬೆಟ್ಟು, ಕೆ. ಲಕ್ಷ್ಮೀನಾರಾಯಣ ಅಡ್ಯಂತಾಯ ಕುದ್ರಿಯ, ಮಾಜಿ ಉಪಾಧ್ಯಕ್ಷ ಎಂ. ಗೋಪಾಲಕೃಷ್ಣ ಭಟ್ ಮಾದಕಟ್ಟೆ, ಮಮತಾ ಜಿ. ರೈ ಕುಳಾಲು, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಶ್ರೀಪತಿ ಭಟ್ ಕುಂಟುಕುಡೇಲು ಅವರನ್ನು ಸಮ್ಮಾನಿಸಲಾಯಿತು. ನಿವೃತ್ತ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮಾಶಂಕರಿ ಬಲಿಪಗುಳಿ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಬಿಸಾ, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹಸೈನಾರ್, ಸಂಘದ ಉಪಾಧ್ಯಕ್ಷ ಎಂ.ಬಾಲಕೃಷ್ಣ ರೈ ಮೂರ್ಜೆಬೆಟ್ಟು, ನಿರ್ದೇಶಕರಾದ ನಾಗೇಶ್ ಶೆಟ್ಟಿ, ಸಂದೇಶ್ ಶೆಟ್ಟಿ, ಅಭಿಷೇಕ್ ರೈ, ರಮೇಶ್ಚಂದ್ರ ಪಿ., ಹರೀಶ್ ಎಂ., ಕೃಷ್ಣಪ್ಪ ನಾಯ್ಕ, ಅಬ್ದುಲ್ ಖಾದರ್, ರಮಾವತಿ ಎಸ್. ರೈ, ಜಯಂತಿಎಸ್ ಪೂಜಾರಿ, ಇಂದಿರಾ ಕೆ. ಆರ್. ಮೇಲ್ವಿಚಾರಕ ಯೋಗೀಶ್ ಎಚ್. ಉಪಸ್ಥಿತರಿದ್ದರು.
ಉಜ್ವಲ್ ಆಚಾರ್ಯ ಮಂಕುಡೆ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಶ ರೈ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಸಂಧ್ಯಾ ಯು. ಶೆಟ್ಟಿ ಸನ್ಮಾನ ಪತ್ರ ಓದಿದರು. ನಿರ್ದೇಶಕ ಎ. ಬಿ. ಅಬ್ದುಲ್ಲ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ಶಿಲ್ಪಿ ವಿಟ್ಲ