ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಪಂಚಾಂಗ ಶ್ರವಣ ಕಾರ್ಯಕ್ರಮ-ಭಾರತೀಯ ದಿನದರ್ಶಿಕೆ ಆನ್‌ಲೈನ್ ಕ್ಯಾಲೆಂಡರ್ ಬಿಡುಗಡೆ

0

ಶೋಭಕೃತ್ ಸಂವತ್ಸರದಲ್ಲಿ ಪ್ರಾಮಾಣಿಕ ನಾಯಕರುಗಳಿಗೆ ಅವಕಾಶ – ವಿನಾಯಕ ಭಟ್ ಗಾಳಿಮನೆ
ಭಾರತೀಯ ಕಾಲಮಾನಕ್ಕೆ ಸರಿಯಾಗಿ ನಮ್ಮನ್ನು ನಾವು ವ್ಯವಸ್ಥಿಗೊಳಿಸಬೇಕು – ಕೇಶವಪ್ರಸಾದ್ ಮುಳಿಯ

ಪುತ್ತೂರು: ಚಾಂದ್ರಮಾನ ಯುಗಾದಿ ಅಂಗವಾಗಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ಮತ್ತು ಭಾರತೀಯ ದಿನದರ್ಶಿಕೆಯ ಆನ್‌ಲೈನ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮಾ.22ರ ಬೆಳಿಗ್ಗೆ ದೇವಳದಲ್ಲಿ ನಡೆಯಿತು.


ದೇವಳದ ಪ್ರಧಾನ ಅರ್ಚಕ ಬ್ರಹ್ಮಶ್ರೀ ವೇ ಮೂ ವಸಂತ ಕೆದಿಲಾಯ ಅವರು ದೀಪ ಪ್ರಜ್ವಲಿಸಿದರು. ಬಳಿಕ ವೇ ಮೂ ವಸಂತ ಕೆದಿಲಾಯ, ವೇ ಮೂ ಜಯರಾಮ ಜೋಯಿಷ, ಭಾರತೀಯ ದಿನದರ್ಶಿಕೆಯನ್ನು ಕ್ಯಾಲೆಂಡರ್ ರೂಪದಲ್ಲಿ ತಂದಿರುವ ವಿನಾಯಕ ಭಟ್ ಗಾಳಿಮನೆ ವೇದಮಂತ್ರಗಳನ್ನು ಪಠಿಸಿದರು. ಬಳಿಕ ವಿನಾಯಕ ಭಟ್ ಗಾಳಿಮನೆಯವರು ಆನ್‌ಲೈನ್ ಮೂಲಕ ಭಾರತೀಯ ದಿನದರ್ಶಿಕೆಯನ್ನು ಅನಾವರಣ ಮಾಡಿದರು. ಪ್ರೊಜೆಕ್ಟರ್ ಮೂಲಕ ಅದರ ಪ್ರಾತ್ಯಕ್ಷಿಯನ್ನು ನೀಡಲಾಯಿತು. ವೇ ಮೂ ವಸಂತ ಕೆದಿಲಾಯ ಅವರು ಪಂಚಾಂಗ ಶ್ರವಣ ವಿವರಣೆ ನೀಡಿದರು.


ಶೋಭಕೃತ್ ಸಂವತ್ಸರದಲ್ಲಿ ಪ್ರಾಮಾಣಿಕ ನಾಯಕರುಗಳಿಗೆ ಅವಕಾಶ:
ಮೂಡಬಿದ್ರೆ ಆಳ್ವಾಸ್‌ ನ ಉಪನ್ಯಾಸಕ ವಿನಾಯ ಭಟ್ ಗಾಳಿಮನೆಯವರು ಮಾತನಾಡಿ ಕಲಿ 5125ನೇ ವರ್ಷದ ಭಾರತೀಯ ಶಖಪುರುಷ ಎಂದು ಹೇಳುವ ಶಾಲಿವಾನ ಶಕೆಯ 1946ನೇ ವಿಕ್ರಮ ಶಕೆಯ 2080ನೇ ಶಕ ವರ್ಷದ ಅಮ್ನಾಯ ಭಾರತೀಯ ದಿನ ದರ್ಶಿಕೆಯಂತೆ ಶೋಭಕೃತ್ ಸಂವತ್ಸರ ಇವತ್ತಿನಿಂದ ಆರಂಭವಾಗಿದೆ. ಚಾಂದ್ರಮಾನದ ಯುಗಾದಿ ನಂತರ ಸೌರಮಾನ ಯುಗಾದಿ ಬಿಸು ಬರುತ್ತದೆ. ಇಲ್ಲಿ ಬುಧ ರಾಜ. ಈತ ಜ್ಞಾನಕ್ಕೆ ಅಧಿಪತಿ. ಶೋಭಕೃತ್ ಸಂವತ್ಸವ ಹೆಸರೇ ಹೇಳುವ ಹಾಗೆ ಶುಭಶೋಭನಗಳಿಗೆ ದೊಡ್ಡದಾದ ಅವಕಾಶ ಕೊಡಿಸುತ್ತದೆ. ರಾಜನಾಗಿರುವ ಕಾರಣದಿಂದ ಭೂಭಾಗವೇಲ್ಲ ಸುಸೃಷ್ಟಿಯಿಂದ ಕಂಗೊಳಿಸುತ್ತದೆ. ಮಳೆ ಬೆಳೆಗಳಿಗೆ ಕೊರತೆಯಾಗುವುದಿಲ್ಲ. ಅದೇ ರೀತಿ ಧರ್ಮಾದಿ ಸತ್ಕರ್ಮಗಳಲ್ಲಿ ನಿರತಾಗುವವರ ಸಂಖ್ಯೆ ದಿನೇ ದಿನೆ ಹುಣ್ಣಿಮೆಯ ಚಂದ್ರನಂತೆ ವೃದ್ಧಿಯನ್ನು ಹೊಂದುತ್ತದೆ. ಮಾನಸಿಕವಾದ ನೆಮ್ಮದಿ ದೈಹಿಕವಾದ ಆರೋಗ್ಯವಾದಂತಹ ಕ್ಷಣಗಣನೆಯನ್ನು ಇವತ್ತಿನಿಂದ ಎದುರು ನೋಡಬಹುದು. ಇದು ಸಾರ್ವತ್ರಿಕವಾಗಿ ಸಾರ್ವಕಾಲಿಕವಾಗಿ ಚಂದ್ರಾಮಾನ ಯುಗಾದಿಯ ಫಲದಲ್ಲಿ ನಮ್ಮ ಜ್ಯೋತಿಷರ ತಿಳಿಸಿಕೊಟ್ಟಂತಹ ಮಾಹಿತಿಯಾಗಿದೆ ಎಂದರು.


ಭಾರತೀಯ ಕಾಲಮಾನಕ್ಕೆ ಸರಿಯಾಗಿ ನಮ್ಮನ್ನು ನಾವು ವ್ಯವಸ್ಥಿಗೊಳಿಸಬೇಕು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಆಂಗ್ಲ ಪದ್ಧತಿಯ ಕ್ಯಾಲೆಂಡರ್‌ನಿಂದ ಅಡಿ ತಪ್ಪುತ್ತದೆ. ಯಾಕೆಂದರೆ ಭಾರತೀಯ ಪದ್ದತಿಯಲ್ಲಿ ಹಬ್ಬ ಹರಿದಿನಗಳು ಹುಣ್ಣಿಮೆಗೆ ಅಮಾಸ್ಯೆಗೆ ಹೊಂದಿಕೊಂಡಿರುತ್ತದೆ. ಶಾಲೆಯ ರಜೆಯು ಆಂಗ್ಲ ಪದ್ಧತಿಯಂತೆ ಭಾನುವಾರ ಇದೆ. ಇದು ಬದಲಾಗಬೇಕಾಗಿದೆ. ವಿನಾಯಕ ಭಟ್ ಗಾಳಿಮನೆಯವರು ಭಾರತೀಯ ದಿನದರ್ಶಿಕೆಯನ್ನು ಜನ ಸಾಮಾನ್ಯರಿಗೆ ಸುಲಭಾಗಿ ಅರ್ಥವಾಗುವಂತೆ ಮಾಡಿದ್ದಾರೆ. ಭಾರತೀಯ ಕಾಲಮಾನಕ್ಕೆ ಸರಿಯಾಗಿ ನಮ್ಮನ್ನು ನಾವು ವ್ಯವಸ್ಥಿಗೊಳಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ವೀಣಾ ಬಿ.ಕೆ, ಆಗಮಶಾಸ್ತ್ರಜ್ಞ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪ್ರೊ. ಎ.ವಿ.ನಾರಾಯಣ, ಪ್ರೊ. ವತ್ಸಲರಾಜ್ಞಿ, ಮಾಜಿ ಪುರಸಭೆ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಹಿಂದು ಜಾಗರಣ ವೇದಿಕೆಯ ವಿಭಾಗ ಸಂಚಾಲಕ ಅಜಿತ್ ರೈ ಹೊಸಮನೆ, ವಿದುಷಿ ಶಾಲಿನಿ ಆತ್ಮಭೂಷಣ್, ಪತ್ರಕರ್ತ ಆತ್ಮಭೂಷಣ್, ಶಿಕ್ಷಕಿ ವಿದ್ಯಾ ಜೆ ರಾವ್, ವೈಷ್ಣವಿ ಜೆ.ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ರಾಮದಾಸ್ ಗೌಡ ಸ್ವಾಗತಿಸಿದರು. ರವೀಂದ್ರನಾಥ ರೈ ಬಳ್ಳಮಜಲು ವಂದಿಸಿರು. ಕಾರ್ಯಕ್ರಮದ ಕೊನೆಯಲ್ಲಿ ಯಗಾದಿ ಹಬ್ಬದ ಅಂಗವಾಗಿ ಬೇವು ಬೆಲ್ಲ ವಿತರಣೆ ಮಾಡಲಾಯಿತು.

ಪ್ರಾಮಾಣಿಕ ನಾಯಕರುಗಳಿಗೆ ಈ ವರ್ಷ ಖಂಡಿತಾ ಅವಕಾಶ, ಪಂಚಾಂಗ ಹೇಳುತ್ತಿದೆ
ಈ ಶೋಭಕೃತ್ ಸಂವತ್ಸರದಲ್ಲಿ ಒಳ್ಳೆಯ ಕಾರ್ಯಗಳಿಗೆ ಜನನಾಯಕರು ಸ್ವತಂತ್ರ ಶೀಲರಾಗಿ ದೇಶೋನ್ನತಿಗಾಗಿ ಬಹಳ ಕಷ್ಟಪಡುತ್ತಾರೆ. ಪ್ರಾಮಾಣಿಕವಾಗಿರುವ ನಾಯಕರುಗಳಿಗೆ ಅವಕಾಶ ಈ ವರ್ಷ ಖಂಡಿತವಾಗಿಯೂ ಇದೆ. ಆ ಅವಕಾಶ ದೈವಾನುಗ್ರಹದಿಂದ ಸುವರ್ಣವಕಾಶವಾಗಿ ಮಾರ್ಪಡುತ್ತದೆ ಎಂಬುದಕ್ಕೆ ಯಾವ ಸಂಶಯವೂ ಇಲ್ಲ. ಇದು ನಾವು ಹೇಳುವುದಲ್ಲ ಪಂಚಾಂಗ ಹೇಳುತ್ತಿದೆ. ಲೋಕಾ ಸಮಸ್ತ ಸುಖಿನೋ ಭವಂತು ಎಂಬ ಆಶಯವಾಣಿ ಅದು ಸಾರ್ಥ್ಯಕ್ಯಗೊಳ್ಳುವ ದಿನವಾಗಿದೆ.
-ವಿನಾಯಕ ಭಟ್ ಗಾಳಿಮನೆ

LEAVE A REPLY

Please enter your comment!
Please enter your name here