ಪುತ್ತೂರು: ಕೆಯ್ಯೂರು ಗ್ರಾಮದ ದೇರ್ಲ ಜನತಾ ಕಾಲನಿಯ ನಿವಾಸಿಗಳಿಗೆ ಸರಿಯಾದ ಸ್ಮಶಾನ ಭೂಮಿ ಇಲ್ಲದೆ ತೊಂದರೆಯಾಗುತ್ತಿದ್ದು ಸುಮಾರು ಅರ್ಧ ಎಕರೆಯಷ್ಟು ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಲಾಗಿದ್ದು ಈ ಭೂಮಿಯಲ್ಲಿ ಗಿಡಗಂಟಿ, ಪೊದೆ ತುಂಬಿಕೊಂಡಿದ್ದರಿಂದ ಸರ್ವೆ ಇಲಾಖಾ ಅಧಿಕಾರಿಗಳಿಗೆ ಅಳತೆ ಮಾಡಲು ಕೂಡ ತೊಂದರೆಯಾಗುತ್ತಿತ್ತು.
ಅಲ್ಲದೆ ಕಾಲನಿ ನಿವಾಸಿಗಳು ನಿಧನ ಹೊಂದಿದರೆ ಮೃತದೇಹದ ದಫನಕ್ಕೂ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡ ಕೆಯ್ಯೂರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಶ್ರಮದಾನದ ಮೂಲಕ ಈ ಜಾಗದಲ್ಲಿ ತುಂಬಿಕೊಂಡಿದ್ದ ಗಿಡ, ಗಂಟಿ ಪೊದೆಗಳನ್ನು ಜೆಸಿಬಿ ಮುಖಾಂತರ ತೆರವುಗೊಳಿಸಿ ಜಾಗವನ್ನು ಸ್ವಚ್ಛ ಮಾಡಿ ಕೊಟ್ಟಿದ್ದಾರೆ.
ಶ್ರಮದಾನದಲ್ಲಿ ಕೆಯ್ಯೂರು ಗ್ರಾಪಂ ಸದಸ್ಯ, ಗುತ್ತಿಗೆದಾರ ಶರತ್ ಕುಮಾರ್ ಮಾಡಾವು, ಶರತ್ ರೈ ದೇರ್ಲ, ಅಣ್ಣು ದೇರ್ಲ, ಜಗನ್ನಾಥ ರೈ ದೇರ್ಲ, ಶೀನಪ್ಪ ರೈ ದೇರ್ಲ, ಬಾಬು ಪಾಟಾಳಿ, ಗಿರಿಧರ ಎಟ್ಯಡ್ಕ, ಮಧುಕರ ಮಾಡಾವು, ರಾಮ ದೇರ್ಲ, ಸುಧೀರ್ ದೇರ್ಲ, ಸುಂದರ ದೇರ್ಲ ಮತ್ತಿತರರು ಉಪಸ್ಥಿತರಿದ್ದರು.