ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಮಹಾ ಉತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನ ಕ್ಷೇತ್ರದ ಮಹಾ ಉತ್ಸವವು ಸತೀಶ್ ರೈ ಮಿಷನ್‌ಮೂಲೆ ಇವರ ಗೌರವಾಧ್ಯಕ್ಷತೆಯಲ್ಲಿ ಎ.26 ಮತ್ತು 27 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀ ಕ್ಷೇತ್ರದ ಮೋಹನ್‌ದಾಸ ಸ್ವಾಮೀಜಿರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.20 ರಂದು ಗೊನೆ ಕಡಿದು ಎ.26 ರಂದು ಬೆಳಿಗ್ಗೆ ಮಹಾ ಗಣಪತಿ ಹೋಮ, ಚಂಡಿಕಾ ಹೋಮ ಹಾಗೂ ಶ್ರೀ ಅಮ್ಮನವರಿಗೆ ಬೆಳ್ಳಿಯ ಕತ್ತಿ ಮತ್ತು ತ್ರಿಶೂಲ ಸಮರ್ಪಣೆ, ದೈವಗಳಿಗೆ ತಂಬಿಲ ಸೇವೆ, ಮಹಾ ಪೂಜೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಕ್ಷೇತ್ರದ ಮೋಹನ್‌ದಾಸ ಸ್ವಾಮೀಜಿರವರು ಶುಭಾಶೀರ್ವಚನ ನೀಡಲಿದ್ದಾರೆ.

ಬಳಿಕ ಡಾ.ಸುರೇಶ್ ಪುತ್ತೂರಾಯರವರಿಗೆ ಸನ್ಮಾನ, ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಶ್ರೀ ಅಮ್ಮನವರ ಭಂಡಾರ ಆರ್ಯಾಪು ನೇರಳಕಟ್ಟೆ ಮೂಲ ಕ್ಷೇತ್ರಕ್ಕೆ ಕೊಂಡೊಯ್ದು ಎ.27 ರಂದು ಮಧ್ಯಾಹ್ನ ಶ್ರೀ ಅಮ್ಮನವರ ಮಾರಿಪೂಜೆ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳಿತ ಮೊಕ್ತೇಸರ ಗಂಗಾಧರ ಸೀಗೆಬಲ್ಲೆ, ಪ್ರಧಾನ ಸಂಚಾಲಕ ನೇಮಾಕ್ಷ ಸುವರ್ಣ, ಉಪಾಧ್ಯಕ್ಷ ಆನಂದ ಅಮೀನ್ ಹೊಸಮನೆ, ರಾಘವೇಂದ್ರ ರೈ ಮೇರ್ಲ, ಧನುಷ್ ಹೊಸಮನೆ, ಸುರೇಶ್ ಪಿ, ಜಗನ್ನಾಥ ಪಿ, ಸುಧಾಕರ ಆಚಾರ್ಯ ಮುಂತಾದವರಿದ್ದರು.

LEAVE A REPLY

Please enter your comment!
Please enter your name here