ಪುತ್ತೂರಿನಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ 15 ಕಿ.ಮೀ. ಪ್ರಯಾಣಿಸಿದಾಗ ಬಲಗಡೆಯ ಎತ್ತರದಲ್ಲಿ ವಿದ್ಯಾಕಾಂಕ್ಷಿಗಳನ್ನು ಕೈಬೀಸಿ ಕರೆಯುತ್ತದೆ ವಿದ್ಯಾಗಂಗೋತ್ರಿ. ಭೂಮಿಯಿಂದ ಎತ್ತರ ಆಕಾಶಕ್ಕೆ ಹತ್ತಿರ ಎಂಬಂತಿರುವ ಸ್ವಚ್ಛ ಸುಂದರ ಗ್ರಾಮೀಣ ಪರಿಸರದ ಇಲ್ಲಿನ 27 ಎಕರೆ ಜಾಗದಲ್ಲಿವೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು. ಕರ್ನಾಟಕ ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ ಕೆ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಿಕ್ಷಣ ಸಮುಚ್ಛಯದಲ್ಲಿ LKGಯಿಂದ ತೊಡಗಿ PUC (Science-PCMB/PCMC & Commerce-EBAS/EBAC) ಮತ್ತು Degree – B.C.A. (Artificial Intellignece), B.Com. & B.A.)ವರೆಗಿನ ವ್ಯಾಸಂಗ ಒಂದೇ ಸೂರಿನಡಿ ಲಭ್ಯ. In pursuit of completeness ಪರಿಪೂರ್ಣತೆಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಗಳಲ್ಲಿ ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಹಾಗೂ ಇನ್ನಿತರ ಪ್ರದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ.
ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸೌಲಭ್ಯಗಳು :
ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್, 3ಆ ಪ್ರಿಂಟರ್, ಹೊಸತಲೆಮಾರಿನ ದೂರದರ್ಶಕಗಳು ಸಹಿತವಾದ Atal Tinkering Lab. ಕೆ.ಜಿ. ವಿಭಾಗದ ಮಕ್ಕಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ, ಅತ್ಯಾಕರ್ಷಕವಾದ Double Doom Building., ಶಾಲಾ ಬಸ್‌ಗಳು., ಮಕ್ಕಳ ಸುಭದ್ರತೆಗಾಗಿ ಎಲ್ಲೆಡೆ ಸಿ.ಸಿ.ಟಿ.ವಿ. ಕ್ಯಾಮರಾಗಳ ಕಣ್ಗಾವಲು. 6ನೆ ತರಗತಿಯಿಂದ ಮೇಲ್ಪಟ್ಟ ಹುಡುಗ ಮತ್ತು ಹುಡುಗಿಯರಿಗಾಗಿ ಸುಸಜ್ಜಿತ ವಸತಿ ನಿಲಯಗಳು. (ಬೇಡಿಕೆಯನ್ನಾಧರಿಸಿ ಪುಟ್ಟ ಮಕ್ಕಳಿಗೂ ಹಾಸ್ಟೆಲ್ ವ್ಯವಸ್ಥೆ), ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ. ಸುಸಜ್ಜಿತವಾದ ಆಟದ ಮೈದಾನದೊಂದಿಗೆ ಪುಟಾಣಿ ಮಕ್ಕಳಿಗಾಗಿ ಆಟೋಪಕರಣಗಳು. ಉದ್ಯಾನವನ, ಕಲಿಕಾ ತೋಟ. ಮಕ್ಕಳ ಪ್ರಾಯೋಗಿಕ ಕಲಿಕೆಗಾಗಿ ಕೃಷಿ ತೋಟ.ವಿಶಾಲವಾದ ಮತ್ತು ವ್ಯವಸ್ಥಿತವಾದ ಸಭಾಂಗಣ. ಬೃಹತ್ ಹೊರಾಂಗಣ ವೇದಿಕೆ.
ಶಾಲೆಯ ವಿಶೇಷತೆಗಳು
10ನೆ ತರಗತಿಯಲ್ಲಿ 15 ಬಾರಿ 100% ಫಲಿತಾಂಶ. ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ 8 ಬಾರಿ ಮತ್ತು ವಿಜ್ಞಾನ ವಿಭಾಗದಲ್ಲಿ 3 ಬಾರಿ 100% ಫಲಿತಾಂಶ. 50 mbps ವೇಗದ ಅಂತರ್ಜಾಲ ಸಂಪರ್ಕವಿರುವ ಕಂಪ್ಯೂಟರ್ ಪ್ರಯೋಗಾಲಯಗಳು, ಗೋಡೆಯ ತುಂಬಾ ವರ್ಣಮಯ ವರ್ಲಿ ಚಿತ್ರಗಳ ಮೂಲಕ ಭಾರತೀಯ ಸಂಸ್ಕೃತಿಯ ಪ್ರಸಾರ., ಉಚಿತವಾದ ವಿಜ್ಞಾನ ಪ್ರಯೋಗಾಲಯಗಳ ವ್ಯವಸ್ಥೆ. ಮನಕ್ಕೆ ಮುದ ನೀಡುವ ಕ್ರಿಯಾತ್ಮಕ ರಚನೆಯ ಆವರಣಗೋಡೆ.
ಪಾಠ ಬಿಟ್ಟು ಇನ್ನೇನಿದೆ-ಡ್ರೋನ್ ನಿರ್ಮಾಣ ತರಬೇತಿ, ಕಂಪ್ಯೂಟರ್ ಕೋಡಿಂಗ್ ತರಬೇತಿ, ವಿಜ್ಞಾನ ಮಾದರಿ ತಯಾರಿ ತರಬೇತಿ, ಕ್ರಿಯೇಟಿವ್ ಆರ್ಟ್ ತರಬೇತಿ, ಭಾಷಣ ಕಲೆ, ಯೋಗ-ಪ್ರಾಣಾಯಾಮ, Spoken English ತರಬೇತಿಗಳು. ಉಚಿತ ಸಂಸ್ಕೃತ ಕಲಿಕೆ. ಭಜನೆ, ಕರಾಟೆ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ವಾಲಿಬಾಲ್ / ತ್ರೋಬಾಲ್ / ಕಬಡ್ಡಿ / ಲಗೋರಿ / ಇತರ ಆಟೋಟಗಳ ತರಬೇತಿ, ವೈಟ್‌ಲಿಫ್ಟಿಂಗ್ / ಜಿಮ್ ಸೌಲಭ್ಯಗಳು.
ಶಾಲಾ ವಾಹನಗಳು
ವೀರಮಂಗಲ, ಗಡಿಪಿಲ, ಭಕ್ತಕೋಡಿ, ಸರ್ವೆ, ಪಣೆಮಜಲು, ಮಾಂತೂರು, ಸೋಂಪಾಡಿ, ಕುಂಬ್ರ, ತಿಂಗಳಾಡಿ, ಕೈಯ್ಯೂರು, ಪುಣ್ಚಪ್ಪಾಡಿ, ಪಂಜಳ, ಕೂಡುರಸ್ತೆ, ಕೆಡೆಂಜಿ, ದೈಪಿಲ, ಚಾರ್ವಾಕ, ಕಾಣಿಯೂರು, ಕಾಯರ್ತಡ್ಕ, ಬೆಳಂದೂರು, ಕುದ್ಮಾರು, ಮೊಗರು ಹಾಗೂ ಇನ್ನಿತರ ಸ್ಥಳಗಳಲ್ಲಿ ನಮ್ಮ ಶಾಲಾ ವಾಹನಗಳೂ ಓಡಾಡುತ್ತವೆ.
ಆಡಳಿತಾಧಿಕಾರಿ- ಅಶ್ವಿನ್ ಎಲ್ ಶೆಟ್ಟಿ
ಮೂಲತ: ಇಂಜಿನಿಯರ್ ಆಗಿರುವ ಅಶ್ವಿನ್ ಎಲ್. ಶೆಟ್ಟಿಯವರು ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಮಾನ ನಿರ್ಮಾಣ ಕಂಪೆನಿಯಾದ ಏರ್ ಬಸ್ ಹೆಲಿಕಾಪ್ಟರ್ಸ್‌ನಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿ ವಿವಿಧ 8 ರಾಷ್ಟ್ರಗಳಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ತಾಯ್ನಾಡಿನಲ್ಲಿ ಶೈಕ್ಷಣಿಕ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಪಾಲಿಟೆಕ್ನಿಕ್‌ನಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ ಇವರು ಮುಂದೆ ಬಿ.ಇ. ವ್ಯಾಸಂಗದ ಬಳಿಕ ಸ್ನಾತಕೋತ್ತರ ಪದವಿಯಲ್ಲೂ ರ್‍ಯಾಂಕ್ ಗಳಿಸಿದವರು. ರೋಬೋಟಿಕ್ಸ್, ರಾಕೆಟ್, ಡ್ರೋನ್ ತಂತ್ರಜ್ಞಾನಗಳಲ್ಲಿ ಸಿದ್ಧ ಹಸ್ತರಾಗಿರುವ ಇವರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರೂ ಹೌದು. ಇದೀಗ ತನ್ನ ದೂರದರ್ಶಿತ್ವದ ಫಲವಾಗಿ ವಿದ್ಯಾರಶ್ಮಿ ಆವರಣವನ್ನು ಆಧುನೀಕರಣಗೊಳಿಸುತ್ತಾ ನವೀನ ಶಿಕ್ಷಣ ಪದ್ಧತಿಯನ್ನು ಅಳವಡಿಸಿದ್ದಾರೆ
ಸಂಸ್ಥೆಯ ಸಂಚಾಲಕ ಸಹಕಾರ ರತ್ನ ಸವಣೂರು ಸೀತಾರಾಮ ರೈ
ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರು ಸೀತಾರಾಮ ರೈಯವರು 2001ರಲ್ಲಿ ಈ ಸಂಸ್ಥೆಗಳನ್ನು ಸ್ಥಾಪಿಸಿದರು. ಸೇನಾನಿ, ಸಹಕಾರಿ, ಕೃಷಿಕ ಮತ್ತು ಶಿಕ್ಷಕರಾಗಿದ್ದ ಅವರ ಪಿತೃಶ್ರೀ ಶೀಂಟೂರು ನಾರಾಯಣ ರೈಯವರ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗಳು ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ. ರಾಜ್ಯ ಮಟ್ಟದ ಕೃಷಿ, ಜಾನಪದ, ಸಾಹಿತ್ಯ ಸಮ್ಮೇಳನಗಳನ್ನು ವಿದ್ಯಾರಶ್ಮಿಯ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಿದ ಅನುಭವ ಅವರದು. ಕೆ.ಎಂ.ಎಫ್.ನ ಮಾಜಿ ಅಧ್ಯಕ್ಷರಾಗಿ, ಡಿ.ಸಿ.ಸಿ. ಬ್ಯಾಂಕ್, ಮಾಸ್, ಎಸ್.ಕೆ.ಎ.ಸಿ.ಎಂ.ಎಸ್., ಟಿ.ಎ.ಪಿ.ಸಿ.ಎಂ.ಎಸ್., ಹಾಲುತ್ಪಾದಕರ ಸೊಸೈಟಿ, ರಬ್ಬರ್ ಬೆಳೆಗಾರರ ಸಂಘ, ಪ್ರಾ.ಕೃ. ಪತ್ತಿನ ಸಹಕಾರಿ ಸಂಘಗಳೂ ಸೇರಿದಂತೆ ವಿವಿಧ ಸಹಕಾರಿ ಸಂಘಗಳಲ್ಲಿ ದುಡಿದ ನಿಸ್ವಾರ್ಥಿ ಸಹಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.