ತಿದ್ದುಪಡಿ ಅಸಾಂವಿಧಾನಿಕ
ಮೂಲ ಕಾಯ್ದೆಯ ತತ್ವಗಳಿಗೆ, ಮೂಲಭೂತ ಸಿದ್ಧಾಂತಗಳಿಗೆ ವಿರೋಧ
ಬೆಂಗಳೂರು:ಜನನ ಮರಣಗಳ ದೃಢೀಕರಣ ಮಾಡುವ ಅಧಿಕಾರವನ್ನು ಸಹಾಯಕ ಕಮಿಷನರಿಗೆ ನೀಡಿ ಕರ್ನಾಟಕ ಸರಕಾರ ಹೊರಡಿಸಿದ್ದ ತಿದ್ದುಪಡಿ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರ ಜನನ-ಮರಣಗಳ ನೋಂದಾವಣೆ ಕಾಯ್ದೆಗೆ 18.07.2022ರಂದು ತಿದ್ದುಪಡಿ ಜಾರಿಗೊಳಿಸಿತ್ತು.ಈ ಹಿಂದೆ ಜನನ ಮರಣಗಳ ನೋಂದಾವಣೆ ವಿವಾದಗಳನ್ನು ತೀರ್ಮಾನ ನೀಡುವ ಅಧಿಕಾರ ಜೆ.ಎಂ.ಎ‌ಫ್.ಸಿ ನ್ಯಾಯಾಲಯಕ್ಕೆ ನೀಡಲಾಗಿತ್ತು.ತಿದ್ದುಪಡಿ ಮೂಲಕ, ಈ ಅಽಕಾರವನ್ನು ರದ್ದುಗೊಳಿಸಿ ವಿವಾದ ಇತ್ಯರ್ಥಗೊಳಿಸುವ ಅಧಿಕಾರವನ್ನು ಕಂದಾಯ ಇಲಾಖೆಯ ಸಹಾಯಕ ಕಮಿಷನರ್ ಅವರಿಗೆ ನೀಡಲಾಗಿತ್ತು.

ವಕೀಲರ ಪ್ರತಿಭಟನೆ:

ಈ ತಿದ್ದುಪಡಿ ವಿರೋಧಿಸಿ ಕರ್ನಾಟಕದಾದ್ಯಂತ ವಕೀಲರು ಪ್ರತಿಭಟನೆ ನಡೆಸಿದ್ದರು.ತಿದ್ದುಪಡಿಯನ್ನು ಪ್ರಶ್ನಿಸಿ ವಕೀಲರ ಸಂಘಗಳು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿದ್ದರು.ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಜನನ ಮರಣ ನೋಂದಾವಣೆ ವಿವಾದಗಳನ್ನು ಇತ್ತಂಡಗಳ ವಾದ ಆಲಿಸಿ ಇತ್ಯರ್ಥಗೊಳಿಸುವ ಅಽಕಾರ ದಂಡ ಪ್ರಕ್ರಿಯ ಸಹಿತೆಯಡಿ ನೇಮಿಸಲ್ಪಟ್ಟ ಜೆ.ಎಂ.ಎಫ್.ಸಿ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ.

ಈ ಅಧಿಕಾರವನ್ನು ಕಂದಾಯ ಇಲಾಖೆಯ ಸಹಾಯಕ ಕಮಿಷನರ್‌ಗಳಿಗೆ ವರ್ಗಾಯಿಸುವುದು ಕಾನೂನಿನ ಮೂಲಭೂತ ತತ್ವಗಳಿಗೆ ವಿರೋಧವಾಗಿದ್ದು, ಅಂತಹ ಅಽಕಾರ ರಾಜ್ಯ ಸರಕಾರಕ್ಕೆ ಇಲ್ಲ ಎಂದು ವಾದ ಮಂಡಿಸಿದ್ದರು.ಈ ಅಂಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯ ತಿದ್ದುಪಡಿಯು ಮೂಲ ಕಾಯ್ದೆಯ ತತ್ವಗಳಿಗೆ ಮತ್ತು ಮೂಲಭೂತ ನ್ಯಾಯ ಸಿದ್ಧಾಂತಗಳಿಗೆ ವಿರೋಧವಾಗಿದೆ ಎಂದು ಘೋಷಿಸಿ ತಿದ್ದುಪಡಿ ನಿಯಮಾವಳಿಯನ್ನು ರದ್ದುಗೊಳಿಸಿದೆ.ಈ ತೀರ್ಪನ್ನು ವಕೀಲರ ಸಮುದಾಯ ಸ್ವಾಗತಿಸಿದೆ.

LEAVE A REPLY

Please enter your comment!
Please enter your name here