ಪುತ್ತೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಆರು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಅಂಗಾರರವರನ್ನು ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ನಮ್ಮ ಸಮುದಾಯಕ್ಕೆ ನೋವು ತಂದಿದೆ ಎಂದು ಮುಗೇರ ಸಂಘದ ಸದಸ್ಯ ಯಸ್ ಪ್ರಸಾದ್ ಬೊಳ್ಮಾರ್ ಅವರು ಪತ್ರಿಕಾಗೊಷ್ಠಿಯಲ್ಲಿ ಹೇಳಿದ್ದಾರೆ.
ಸುಳ್ಯಕ್ಕೆ ಭಾಗೀರಥಿ ಮುರುಳ್ಯರವರನ್ನು ಬಿಜೆಪಿ ಪಕ್ಷ ಚುನಾವಣೆಗೆ ನಿಲ್ಲಿಸಿರುವುದು ಬೇಸರವಿಲ್ಲ. ಎಸ್.ಸಿ ಮಹಿಳೆಗೆ ಅವಕಾಶ ಕೊಟ್ಟಿರುವುದಕ್ಕೆ ಗೌರವಿಸುತ್ತೇವೆ. ಆದರೆ ಆರು ಭಾರಿ ಶಾಸಕರಾಗಿ ಯಾವುದೇ ಭ್ರಷ್ಟಾಚಾರ, ಕ್ರಿಮಿನಲ್ ಕೇಸುಗಳಿಲ್ಲದ ವ್ಯಕ್ತಿ ಅಂಗಾರರವರನ್ನು ಕೇಳಿ ಮನವೊಲಿಸಿ ಭಾಗೀರಥಿಯವರಿಗೆ ಅವಕಾಶ ಕೊಡಬೇಕಾಗಿತ್ತು. ಆದರೆ ಅಂಗಾರವರನ್ನು ಮೂಲೆ ಗುಂಪು ಮಾಡಿರುವುದು ನಮ್ಮ ಸಮುದಾಯಕ್ಕೆ ನೋವಾಗಿದೆ. ಹಾಗಾಗಿ ಮುಗೇರ ಸಮುದಾಯ ಬಿಜೆಪಿ ಪಕ್ಷಕ್ಕೆ ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮುಗೇರ ಸಮುದಾಯದ ಚಂದ್ರಬೀರಿಗ, ಶಿವಕುಮಾರ್, ದೇವಕಿ ಉಪಸ್ಥಿತರಿದ್ದರು.