ಏ.24; ನಿಡ್ಪಳ್ಳಿಯಲ್ಲಿ ಯಕ್ಷಗಾನ ಕೃತಿ ಚತುಷ್ಟಯದ ಲೋಕಾರ್ಪಣಾ ಕಾರ್ಯಕ್ರಮ

0

     ನಿಡ್ಪಳ್ಳಿ; ಖ್ಯಾತ ಸಾಹಿತಿ ಕವಿ,ನಿವೃತ್ತ ಕನ್ನಡ ಪಂಡಿತ, ಶಿಕ್ಷಕ ಡಾ.ಡಿ.ಸದಾಶಿವ ಭಟ್ ಪಳ್ಳು ನಿಡ್ಪಳ್ಳಿ ಇವರ ರಚಿಸಿದ ಯಕ್ಷಗಾನ ಕೃತಿ ಚತುಷ್ಟಯದ ಲೋಕಾರ್ಪಣಾ ಸಮಾರಂಭ ಏ.24 ರಂದು ಸಂಜೆ ಗಂಟೆ 4 ಕ್ಕೆ ಶ್ರೀ ಶಾಂತದುರ್ಗಾ ದೇವಸ್ಥಾನ, ನಿಡ್ಪಳ್ಳಿ ಇದರ ವಠಾರದಲ್ಲಿ ನಡೆಯಲಿದೆ.

      ಪ್ರೊ.ವಿ.ಬಿ ಅರ್ತಿಕಜೆ ಪುತ್ತೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ.ಸುಳ್ಯ  ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯರಾದ ವೆಂಕಟರಾಮ ಭಟ್ಟ ಇವರು ಸಾರ್ಥ ಇಂಗ್ಲಿಷ್ ಯಕ್ಷಗಾನ ಕೃಷ್ಣ ಸಂಧಾನ ಮತ್ತು ಹಿಂದಿ ಕೃಷ್ಣ ಸಂಧಾನ ಬಿಡುಗಡೆ ಗೊಳಿಸುವರು.ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಇವರು ತುಳು ಯಕ್ಷಗಾನ ಶಂಬರ ಬಂಧೊ ಮತ್ತು ಮಲೆಯಾಳ ಯಕ್ಷಗಾನ ಶಂಭರ ವಧ ಲೋಕಾರ್ಪಣೆ ಮಡಲಿರುವರು.ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ ಆರಿಗ ನಿಡ್ಪಳ್ಳಿ ಗುತ್ತು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ ಗೌರವ ಉಪಸ್ಥಿತರಿರುವರು ಎಂದು ಯಕ್ಷಗಾನ ಮಹಾಕಾವ್ಯ ಪ್ರಕಟಣ ಸಮಿತಿ ಅಧ್ಯಕ್ಷ ನುಳಿಯಾಲು ಸಂಜೀವ ರೈ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here